ವಿದೇಶಗಳಲ್ಲಿರುವ ಅನಿವಾಸಿ ಕನ್ನಡಿಗರಿಗೆ ವಾರ್ತಾ ಭಾರತಿಯು ಸದಾ ಆದ್ಯತೆ ನೀಡುತ್ತಾ ಬಂದಿದೆ.
ಜಗತ್ತಿನ ವಿವಿಧೆಡೆ ನೆಲೆಸಿ ಆ ದೂರದ ನಾಡುಗಳಲ್ಲಿ ಕನ್ನಡದ ಕಂಪು ಹರಡುತ್ತಿರುವ ಅನಿವಾಸಿ ಕನ್ನಡಿಗರಿಗೆ
ವಾರ್ತಾ ಭಾರತಿ ತನ್ನ ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಸದಾ ವಿಶೇಷ ಪ್ರಾಮುಖ್ಯತೆ ನೀಡಿದೆ.
ವಾರ್ತಾ ಭಾರತಿಯು ಪ್ರಾರಂಭದಿಂದಲೂ ಅನಿವಾಸಿ ಕನ್ನಡಿಗರ ಬದುಕು, ಬವಣೆ, ಅವರ ಸಾಧನೆಗಳು, ಸಮಸ್ಯೆಗಳು, ಸವಾಲುಗಳ ಬಗ್ಗೆ ಆಸಕ್ತಿ ವಹಿಸಿ ಆ ಕುರಿತು ವಿಶೇಷ ವರದಿಗಳನ್ನು ಪ್ರಕಟಿಸುತ್ತಾ ಬಂದಿದೆ . ವಿದೇಶಗಳಲ್ಲಿ ನಡೆಯುವ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಿಗೂ ಅತ್ಯುತ್ತಮ ಪ್ರಚಾರ ಹಾಗೂ ಪ್ರಾತಿನಿಧ್ಯ ನೀಡಿದೆ. ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಗಮನ ಸೆಳೆಯುವ ವಿಷಯದಲ್ಲೂ ವಾರ್ತಾ ಭಾರತಿ ಸದಾ ಮುಂಚೂಣಿಯಲ್ಲಿ ನಿಂತಿದೆ. ವಾರ್ತಾ ಭಾರತಿಯು ಅನಿವಾಸಿ ಕನ್ನಡಿಗರಿಗಾಗಿ ವಿಶೇಷ ಪುಟಗಳನ್ನು ಹಾಗೂ ಪುರವಣಿಗಳನ್ನು ಮೀಸಲಿಟ್ಟ ಪ್ರಥಮ ಕನ್ನಡ ದೈನಿಕವಾಗಿದೆ.
ಇದೇ ಸಂಪನ್ನ ಪರಂಪರೆಯನ್ನು ಮುಂದುವರಿಸುತ್ತಾ ಇದೀಗ ವಾರ್ತಾ ಭಾರತಿ ಮಾಧ್ಯಮ ಸಮೂಹವು ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾದ ಒಂದು ಹೊಸ ವೆಬ್ ಸೈಟ್ ಅನ್ನು ರೂಪಿಸಿದೆ.
ಹೆಸರಿನ ಈ ವೆಬ್ ಸೈಟ್ ಅನ್ನು ಜಾಗತಿಕ ಕನ್ನಡಿಗರಿಗೆಂದೇ ವಿಶೇಷವಾಗಿ ರೂಪಿಸಲಾಗಿದೆ. ಇದು ನಿಜವಾಗಿ ಸಂಪೂರ್ಣ ಜಾಗತಿಕ ಕನ್ನಡಿಗ ಸಮುದಾಯವನ್ನು ಒಂದು ವೇದಿಕೆಯಲ್ಲಿ ಜೊತೆಗೂಡಿಸುವ ದೂರಗಾಮಿ ಪ್ರಯತ್ನದ ಭಾಗವಾಗಿದೆ.
ಈ ವೆಬ್ ಸೈಟ್, ಜಗತ್ತಿನ ಉದ್ದಗಲಗಳಲ್ಲಿ ಆಯಾ ದೇಶದ ಪ್ರಗತಿಗೆ ಗಣ್ಯ ಕೊಡುಗೆ ನೀಡುತ್ತಿರುವ ಜಾಗತಿಕ ಕನ್ನಡಿಗರನ್ನು ಗುರುತಿಸಿ, ಅವರ ಎಲ್ಲ ಆಶೋತ್ತರಗಳ ಪ್ರಕಟಣೆಯ ವೇದಿಕೆಯಾಗಲಿದೆ. ಮತ್ತು ಕರ್ನಾಟಕದ ಕನ್ನಡಿಗರು ಹಾಗೂ ಜಾಗತಿಕ ಕನ್ನಡಿಗರ ನಡುವಿನ ಸಂಪರ್ಕದ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ.
ಜಗತ್ತಿನ ಪ್ರತಿಯೊಂದು ದೇಶದಲ್ಲಿ ನೆಲೆಸಿರುವ ಕನ್ನಡಿಗರ ಚಟುವಟಿಕೆಗಳನ್ನು ಸಮಸ್ತ ಕನ್ನಡಿಗರಿಗೆ ತಲುಪಿಸಲಿದೆ. ಅನಿವಾಸಿ ಕನ್ನಡಿಗರ ಕಾರ್ಯಕ್ರಮಗಳ ವರದಿಗಳು, ಫೋಟೊ ಫೀಚರ್ ಗಳು, ಅನಿವಾಸಿ ಕನ್ನಡಿಗರು ಎದುರಿಸುತ್ತಿರುವ ಸವಾಲುಗಳ ಕುರಿತ ವಿಸ್ತೃತ ವರದಿಗಳು, ಅನಿವಾಸಿಗಳ ಸಾಧನೆಗಳ ವಿಶೇಷ ಸ್ಟೋರಿಗಳು, ಸಂದರ್ಶನಗಳು, ವಿವಿಧ ದೇಶಗಳಲ್ಲಿ ಕನ್ನಡಿಗರ ಅನುಭವಗಳು, ಕರ್ನಾಟಕದಿಂದ ಯಾವುದೇ ದೇಶಕ್ಕೆ ಉದ್ಯೋಗ, ಉದ್ಯಮಕ್ಕೆ ಹೋಗ ಬಯಸುವವರಿಗೆ ಬೇಕಾದ ಉಪಯುಕ್ತ ಮಾಹಿತಿಗಳು, ಇಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ಅಲ್ಲಿನ ಅನುಭವೀ ಅನಿವಾಸಿಗಳಿಂದ ಆಯಾ ದೇಶಗಳಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಹಾಗು ಮಾರ್ಗದರ್ಶನ – ಇವೆಲ್ಲವೂ ದಲ್ಲಿ ಹಂತಹಂತವಾಗಿ ಲಭ್ಯವಾಗಲಿವೆ.
ವಿದೇಶಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ಉದ್ಯಮ, ಉನ್ನತ ಶಿಕ್ಷಣ ಇತ್ಯಾದಿಗಳ ದಾರಿ ತೋರಿಸುವ ಜೊತೆಜೊತೆಗೆ
ಅನಿವಾಸಿ ಕನ್ನಡಿಗರ ಸಾಹಿತ್ಯ, ಸಾಂಸ್ಕೃತಿಕ ಪ್ರತಿಭೆಗೆ ವೇದಿಕೆಯೂ ಆಗಲಿದೆ
ಕರ್ನಾಟಕ ಸರಕಾರ ಹಾಗು ಅನಿವಾಸಿ ಕನ್ನಡಿಗರ ನಡುವಿನ ಸೇತುವೆಯಾಗಿ ಅವರ ನೋವು ನಲಿವುಗಳಿಗೆ ಸರಕಾರ ಸ್ಪಂದಿಸುವಂತೆ ನಿರಂತರ ಪ್ರಯತ್ನಿಸುವ ಕೆಲಸವೂ ಮೂಲಕ ಆಗಲಿದೆ. ಜಗತ್ತಿನ ಯಾವುದೇ ದೇಶದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ, ಯೋಜನೆ ನಡೆದರೂ ಅದನ್ನು ಎಲ್ಲರಿಗೂ ತಲುಪಿಸುವ ಕೆಲಸ ಮೂಲಕ ಆಗಲಿದೆ.
ತೊಂಬತ್ತು ಶೇ. ವಿಷಯಗಳು ಕನ್ನಡ ಭಾಷೆಯಲ್ಲಿರಲಿದ್ದು ೧೦% ವಿಷಯಗಳು ಇಂಗ್ಲೀಷ್ ನಲ್ಲಿರಲಿವೆ. ಪ್ರತಿಯೊಂದು ಪ್ರಮುಖ ದೇಶಗಳಿಗೆ ಪ್ರತ್ಯೇಕ ವಿಭಾಗಗಳಿರಲಿದ್ದು ಅನಿವಾಸಿಗಳ ಅನುಭವ ಹಾಗು ಅವರಿಗೆ ಸಂಬಂಧಿಸಿದ ವಿಷಯಗಳ ಕುರಿತ ಸಂವಾದಕ್ಕೆ ಪ್ರತ್ಯೇಕ ವಿಭಾಗಗಳು ಇರುತ್ತವೆ. ವಿಶೇಷ ಸಾಧನೆ ಮಾಡಿರುವ, ವಿವಿಧ ಕ್ಷೇತ್ರಗಳಲ್ಲಿ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಅನಿವಾಸಿ ಕನ್ನಡಿಗರು ನಲ್ಲಿ ನಿಯಮಿತ ಅಂಕಣಗಳನ್ನು ಬರೆಯುತ್ತಾರೆ.
ಅನ್ನು ನಿರ್ವಹಿಸಲು ಪ್ರತ್ಯೇಕ ಸಂಪಾದಕೀಯ ತಂಡವಿರಲಿದ್ದು, ವಾರ್ತಾಭಾರತಿಯ ಮುದ್ರಣ, ಡಿಜಿಟಲ್ ಮಾಧ್ಯಮ ಹಾಗು ಚಾನಲ್ ನ ಸಂಪಾದಕೀಯ ಮಂಡಳಿ, ತಾಂತ್ರಿಕ ಟೀಮ್ ಹಾಗು ವರದಿಗಾರರ ಜಾಲದ ಸಂಪೂರ್ಣ ಲಾಭವನ್ನು ಅದು ಪಡೆಯಲಿದೆ