ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಒಮಾನಿನ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಏಪ್ರಿಲ್ 18ರಂದು ಮಸ್ಕತ್ ನ ಮಜಾನ್ ಹೈಟ್ಸ್ ಸಭಾಂಗಣದಲ್ಲಿ ನಡೆಯುವ ಮಸ್ಕತ್ ಗಡಿನಾಡ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಲ್ ಕುವೆರ್ ಗೋಕುಲ್ ಹೋಟೆಲ್ ಸಭಾಂಗಣದಲ್ಲಿ ಹಿರಿಯ ಆರ್ಥಿಕ ತಜ್ಞ ಸಿ.ಎ.ರಮಾನಂದ ಪ್ರಭು ಅನಾವರಣ ಗೊಳಿಸಿದರು.

ಸಮಾರಂಭದಲ್ಲಿ ಬ್ಯಾಂಕ್ ದೋಫಾರ್’ನ ಹಿರಿಯ ಅಧಿಕಾರಿ ಜಿ.ವಿ.ರಾಮಕೃಷ್ಣ, ಒಮಾನ್ ಇಂಡಿಯನ್ ಸೋಶಿಯಲ್ ಕ್ಲಬ್’ನ ಆಡಳಿತ ಮಂಡಳಿ ಸದಸ್ಯ ಎಸ್.ಡಿ.ಟಿ ಪ್ರಸಾದ್, ಮಸ್ಕತ್ ಕನ್ನಡ ಸಂಘದ ಅಧ್ಯಕ್ಷ ಮಂಜುನಾಥ ಸಂಗಟ್ಟಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಒಮಾನ್ ಘಟಕದ ಅಧ್ಯಕ್ಷ ಅಬೂಬಕರ್ ರೋಯಲ್ ಬೊಳ್ಳಾರ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಒಮಾನ್ ಘಟಕದ ಸಲಹಾ ಸಮಿತಿ ಸದಸ್ಯ ಶಿವಾನಂದ ಕೋಟ್ಯಾನ್, ಯುವರಾಜ್ ಸಾಲಿಯಾನ್, ಹಿತೇಶ್ ಮಂಗಳೂರು, ರೇಷ್ಮಾ ಹಿತೇಶ್, ನ್ಯೂ ವೈಬ್ರೆಂಟ್ ಪಿಯು ಕಾಲೇಜ್ ಮೂಡಬಿಡದಿರೆಯ ನಿರ್ದೇಶಕ ಅಮರೇಶ ವಾಟಗಲ್, ಸಮಾಜ ಸೇವಕರಾದ ಪದ್ಮಾಕರ ಮೆಂಡನ್, ರವಿ ಅಚಾರ್ಯ, ಭಾಸ್ಕರ್ ಕೋಟ್ಯನ್ , ಪ್ರಸಾದ್ ಮರಾಠೆ, ಕಾರ್ತಿಕ್ ಕುಂದರ್, ಅನಿಲ್ ಪೂಜಾರಿ, ಅಕ್ಷಯ್ ಮೂಡಬಿದ್ರೆ, ಶ್ವೇತಾ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
