Lead NewsDKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅನ್ವರ್ ಸಾಹೇಬ್...

DKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅನ್ವರ್ ಸಾಹೇಬ್ ಕುಂಜಾಲ್ ಆಯ್ಕೆ

ಕುವೈತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC), ಇದರ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಸಾಲ್ಮೀಯಾ ಸುನ್ನಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು.

DKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಯೂಸುಫ್ ಅಬ್ಬಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ DKSC ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಅಬ್ದುಲ್ ಅಝೀಜ್ ಮೂಳೂರ್ ಮತ್ತು ಹಿರಿಯ ನೇತರಾದ ಅಬೂಬಕ್ಕರ್ ಬರ್ವ (ಮಾಜಿ ಕಾರ್ಯದರ್ಶಿ ಡಿಕೆಯಸ್ಸಿ ಕೇಂದ್ರ ಸಮಿತಿ) ರವರು ಮುಖ್ಯ ವೀಕ್ಷಕರಾಗಿ ಆಗಮಿಸಿದ್ದರು.

DKSC ಕುವೈತ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರಾದ ಶಫೀಕ್ ಅಹನಿ ಉಸ್ತಾದರು ದುವಾ ಆಶೀರ್ವಚನೆಗೈದರು ಮತ್ತು DKSC ಕುವೈತ್ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷರಾದ ಶೌಕತ್ ಶಿರ್ವ ಕಿರಾಹತ್ ಪಾರಾಯನಗೈದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಅಲಿ ಗಂಗಾವಳಿಯವರು ಆಗಮಿಸಿದ ಸದಸ್ಯರುಗಳು ಮತ್ತು ಆಮಂತ್ರಿತ ಗಣ್ಯ ವ್ಯಕ್ತಿಗಳನ್ನು ಆದರಪೂರ್ವ ಸ್ವಾಗತಿಸಿದರು. DKSCಯ ಕಾರ್ಯವೈಖರಿ ಹಾಗು ಸಂಸ್ಥೆಯ ಕಿರು ಪರಿಚವನ್ನು ಮಾಡಿ, ಶಫೀಕ್ ಅಕ್ಸನಿ ಉಸ್ತಾದರವರು ಸಭೆಯನ್ನು ಉದ್ಘಾಟಿಸಿದರು. ಆಡಳಿತ ಸಮಿತಿ ಸದಸ್ಯರಾದ ಮುಬೀನ್ ಸಾಸ್ತಾನರವರು ವಾರ್ಷಿಕ ವರದಿ ಮತ್ತು ಹಣಕಾಸು ಕಾರ್ಯದರ್ಶಿ ಇಮ್ತಿಯಾಝ್ ಸೂರಿಂಜೆ ಆಯವ್ಯಯ ವರದಿಯನ್ನು ಮಂಡಿಸಿದರು. ನಂತರ ಸಮಿತಿಯ ಅಂತರಿಕ ಲೆಕ್ಕ ಪರಿಶೋದಕರಾದ ಶಂಸುದ್ದೀನ್ ಶಾಬಾನ್ ಉಚ್ಚಿಲ ಸಭೆಯ ಅನುಮತಿ ಪಡೆದು ಆಯವ್ಯಯ ವರದಿಯನ್ನು ಅಂಗೀಕರಿಸಿದರು.

ಆಡಳಿತ ಸಮಿತಿ ಸದಸ್ಯರಾದ ಹೈದರ್ ಅಲಿ ಉಚ್ಚಿಲ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಣೆಗೈದರು. ಸಭಾಧ್ಯಕ್ಷರಾದ ಯೂಸುಫ್ ಅಬ್ಬಾಸ್ ರವರು ತಮಗೆ ತಮ್ಮ ಕಾಲಾವಧಿಯಲ್ಲಿ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ನಡೆಸಲು ಅನುಗ್ರಹಿಸಿದ ಸರ್ವ ಶಕ್ತನಾದ ಅಲ್ಲಾಹನಿಗೆ ಸ್ತುತಿಯನ್ನು ಅರ್ಪಿಸುತ್ತಾ, ತಮಗೆ ಸರ್ವ ರೀತಿಯಲ್ಲಿ ಸಹಕರಿಸಿದ ಸರ್ವರನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಅಧ್ಯಕ್ಷರ ಭಾಷಣವನ್ನು ನೆರವೇರಿಸಿದರು.

2025 ಆಡಳಿತಾವಧಿಯಲ್ಲಿ ಸಂಸ್ಥೆಗೆ ನೀಡಿದ ಸಹಾಯ ಸಹಕಾರ ಮತ್ತು ನಿಸ್ವಾರ್ಥ ಸೇವೆಯನ್ನು ನೀಡಿ ಸಹಕರಿಸಿದ ಯಾಕುಬ್ ಹಸನ್ ಬಾವ ಬಿ.ಸಿ. ರೋಡ್, ಅಶ್ರಫ್ ಖಾಸಿಂ ಗದ್ದೆಮನೆ, ಕುದ್ರೋಳಿ ಅಬ್ದುಲ್ ರವೂಫ್ ಹಾಗೂ ಶರ್ಫುದ್ದೀನ್ ಕಾಪು ಅವರಿಗೆ ಪ್ರಶಂಸಾ ಫಲಕ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ DKSC ಕುವೈತ್ ರಾಷ್ಟ್ರೀಯ ಸಮಿತಿಯ ಆಡಳಿತ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳು DKSC ಕುವೈತ್ ರಾಷ್ಟ್ರೀಯ ಸಮಿತಿಯು ಕುವೈಟ್ ನ ಮಣ್ಣಿನಲ್ಲಿ ಪುನಾರಾರಂಭಗೊಂಡಂದಿನಿಂದ ನಿರಂತರ ಐದು ವರ್ಷಗಳ ಯಶಸ್ವಿಗೆ ನೇತೃತ್ವವನ್ನು ನೀಡಿದ ಸಮಿತಿಯ ಅಧ್ಯಕ್ಷರಾದ ಯೂಸುಫ್ ಅಬ್ಬಾಸ್ ಬಾರೂದ್ ಅವರಿಗೆ ಪ್ರಶಂಸಾ ಫಲಕವನ್ನು ನೀಡಿ ಗೌರವಿಸಲಾಯಿತು.

2026ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲು ಕೇಂದ್ರ ಸಮಿತಿಯಿಂದ ಆಗಮಿಸಿದ್ದ ಅಬೂಬಕ್ಕರ್ ಬರ್ವ ಅವರು ಆಡಳಿತ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಒಮ್ಮತದಿಂದ ಆರಿಸಿದ 2026ನೇ ಸಾಲಿನ ಆಡಳಿತ ಹಾಗೂ ಕಾರ್ಯಕಾರಿ ಸಮಿತಿಯ ವಿವರವನ್ನು ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದರು.

ಅಧ್ಯಕ್ಷರು: ಅನ್ವ‌ರ್ ಸಾಹೇಬ್ ಕುಂಜಾಲ್
ಪ್ರಧಾನ ಕಾರ್ಯದರ್ಶಿ: ಲಿಯಾಕತ್ ಅಲಿ ಗಂಗಾವಳಿ
ಕೋಶಾಧಿಕಾರಿ: ಇಮ್ತಿಯಾಝ್ ಸೂರಿಂಜೆ
ಗೌರವಾಧ್ಯಕ್ಷರು: ಶಫೀಕ್ ಅಕ್ಸನಿ ಉಸ್ತಾದ್
ನಿರ್ದೇಶಕ ಮಂಡಳಿ: ಯೂಸುಫ್ ಅಬ್ಬಾಸ್ ಮಂಚಕಲ್, ಅಬ್ದುಲ್ ರಹ್ಮಾನ್ ಸಖಾಫಿ, ಅಬ್ದುಲ್ ರಹಿಮಾನ್ ಕಾನಾ, ಅಬ್ದುಲ್ ಕರೀಂ ಬಿರಾಲಿ, ಅಬ್ದುಲ್ ಲತೀಫ್ ಶೇಡಿಯಾ
ಡೆವೆಲಪ್ಮೆಂಟ್ ಅಧ್ಯಕ್ಷರಾಗಿ: ಮೊಹಮ್ಮದ್ ಯೂಸುಫ್ ಮುನಿಯಮ್
ಉಪಾಧ್ಯಕ್ಷರು: ಇಸ್ಮಾಯಿಲ್ ಉಮರ್ ಉಚ್ಚಿಲ, ಹಸನಬ್ಬ ಕಣ್ಣಂಗಾರ್, ಹೈದರ್ ಅಲಿ ಉಚ್ಚಿಲ.
ಕಾರ್ಯದರ್ಶಿ: ಶೌಕತ್ ಹುಸೈನಬ್ಬ ಶಿರ್ವ, ಅಶ್ರಫ್ ಕುಂಜಾಲ್, ಮುಬೀನ್ ಸಾಸ್ತಾನ.
ಜೊತೆ ಹಣಕಾಸು ಕಾರ್ಯದರ್ಶಿ: ಶಂಸುದ್ದೀನ್ ಶಾಬಾನ್ ಉಚ್ಚಿಲ
ಮಾಧ್ಯಮ ಹಾಗೂ ಸಂವಹನ ಕಾರ್ಯದರ್ಶಿ: ಹನೀಫ್ ನೇಜಾರ್
ಆಂತರಿಕ ಲೆಕ್ಕ ಪರಿಶೋಧಕರು: ಫೈಸಲ್ ಕಾಪು.

ಕಾರ್ಯಕಾರಿ ಸಮಿತಿ ಸದಸ್ಯರುಗಳು: ಅಶ್ರಫ್ ಕಾಸಿಂ ಗದ್ದೆಮನೆ, ನಾಸಿರ್ ಕುಂಜಾಲ್, ಇರ್ಷಾದ್ ಸಖಾಫಿ, ಸಯ್ಯದ್ ಯೂಸುಫ್ ಬಿ.ಸಿ.ರೋಡ್, ಅನ್ವರ್ ಕೈಕಂಬ, ಮನ್ಸೂರು ಪರಪ್ಪು, ಮುಖರ್ ಗಂಗಾವಳಿ, ಆಸೀಫ್ ಸಾಗರ, ಅಬ್ದುಲ್ ಲತೀಫ್ ಅಗ್ರಹಾರ, ಮುಸ್ತಫಾ ಬಿದ್ರಗೋಡು, ಷರೀಫ್ ಅಡ್ಡೂರು, ಸಮದ್ ಕುಂಜಾಲ್, ಅಬ್ದುಲ್ ಖಾದರ್ ಜೀಲಾನಿ, ಇಬ್ರಾಹಿಂ ಖಲೀಲ್ (ಇಬ್ಬಿ), ಅಝೀಝ್ ಕುಂಜಾಲ್, ಕಲಂದರ್ ಪಡುಬಿದ್ರಿ, ಅಬ್ದುಲ್ ರಹ್ಮಾನ್ ಅಡ್ಡೂರು, ಇಕ್ಬಾಲ್ ಎಡಪದವು, ನಿಝಾಮ್ ಕಟಪಾಡಿ, ಇಮ್ರಾನ್ ಕುಂಜಾಲ್, ಮೊಹಮ್ಮದ್ ಇಕ್ಬಾಲ್ ಕಂದಾವರ, ತೌಫಿಕ್ ಪಡುಬಿದ್ರಿ, ರಮೀಝ್ ಉಚ್ಚಿಲ, ಅನ್ಸರ್ ಕುಂಜಾಲ್, ರಫೀಕ್ ಕುಂಜಾಲ್, ಕಲಂದರ್ ಚೊಕ್ಕಬೆಟ್ಟು, ಎಂ.ಎಸ್ ಝಯಿನುದ್ದೀನ್, ಮೆಹತಾಬ್ ಕುಂಜಾಲ್.

ಕೊನೆಯಲ್ಲಿ DKSC ಕುವೈತ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ಹಾಗೂ ವಿವಿಧ ಸಂಘಟನೆಗಳ ಆಹ್ವಾನಿತ ಪಧಾದಿಕಾರಿಗಳಾದ ಶಾಹುಲ್ ಹಮೀದ್ ಸಅದಿ, ಸಯ್ಯದ್ ಬ್ಯಾರಿ, ರಫೀಕ್ ಮಂಚಿ, ಯಾಕೂಬ್ ಕಾರ್ಕಳ, ಕೆ.ಕೆ.ಎಂ.ಏ. ಕರ್ನಾಟಕ ಶಾಖಾಧ್ಯಕ್ಷರಾದ ಯೂಸುಫ್ ಮುನಿಯಮ್ ಮುಂತಾದವರುಗಳು ಮಾತನಾಡಿ, 2026ನೇ ಸಾಲಿನ ಸಮಿತಿಗೆ ಆಯ್ಕೆಯಾದ ಹೊಸ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

DKSC ಕುವೈತ್ ರಾಷ್ಟ್ರೀಯ ಸಮಿತಿಯ ಗೌರವಾಧ್ಯಕ್ಷರಾದ ಶಫೀಕ್ ಅಹನಿ ಉಸ್ತಾದರವರು ಕೊನೆಯಲ್ಲಿ ದುವಾ ಆಶಿರ್ಚನೆಗೈದರು. DKSC ಕುವೈತ್ ರಾಷ್ಟ್ರೀಯ ಸಮಿತಿಯ ಸಲಹಾ ಸಮಿತಿ ಸದ್ಯಸರಾದ ಅಬ್ದುಲ್ ಲತೀಫ್ ಸೇಡಿಯಾರವರು ಧನ್ಯವಾದ ಸಮರ್ಪಣೆಗೈದರು. ಸಭೆಯಲ್ಲಿ ಸದಸ್ಯರುಗಳು ಮತ್ತು ವಿವಿಧ ಸಂಘಟನೆಗಳಿಂದ ಆಮಂತ್ರಿತ ಸುಮಾರು 150ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories