ಬಹರೈನ್ಬಹರೈನ್ ಕನ್ನಡ ಸಂಘದ ನೂತನ ಆಡಳಿತ‌ ಸಮಿತಿಯ ಅದ್ಧೂರಿ...

ಬಹರೈನ್ ಕನ್ನಡ ಸಂಘದ ನೂತನ ಆಡಳಿತ‌ ಸಮಿತಿಯ ಅದ್ಧೂರಿ ಪದಗ್ರಹಣ- ‘ಸಾಂಸ್ಕೃತಿಕ ಸಂಭ್ರಮ’

ಬಹರೈನ್: ರಾಜ್ಯ ಪ್ರಶಸ್ತಿ ಪುರಸ್ಕೃತ ಕನ್ನಡ ಸಂಘ ಬಹರೈನ್ ಇದರ 2025–2026ನೇ ಸಾಲಿನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಇಲ್ಲಿನ ಬಹರೈನ್ ಕಲ್ಚರಲ್ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.

ಗಣ್ಯರು ಹಾಗು ಸದಸ್ಯರುಗಳು ಸೇರಿದಂತೆ ಸುಮಾರು 800ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ನೂತನ ಅಧ್ಯಕ್ಷರಾಗಿ ಅಜಿತ್ ಬಂಗೇರ ಹಾಗೂ ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳು ವಿದ್ಯುಕ್ತವಾಗಿ ಪದಗ್ರಹಣ ಮಾಡಿದರು .

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳ ಸ್ಥಾನವನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್. ಹೊರಟ್ಟಿ ಅಲಂಕರಿಸಿದ್ದರೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅನಿವಾಸಿ ಭಾರತೀಯ ವೇದಿಕೆ (ಕರ್ನಾಟಕ) ಉಪಾಧ್ಯಕ್ಷೆ, MLC ಡಾ.ಆರತಿ ಕೃಷ್ಣ, ವಿಶೇಷ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದರು. ತಾಯಿನಾಡು ಮತ್ತು ಗಲ್ಫ್ ರಾಷ್ಟ್ರಗಳಿಂದ ಆಗಮಿಸಿದ್ದ ವಿಶೇಷ ಅತಿಥಿಗಳು ಈ ಪದಗ್ರಹಣ ಹಾಗು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

2023–24ನೇ ಸಾಲಿನ ಆಡಳಿತಾವಧಿಯಲ್ಲಿ ಸಂಘದ ಸಮಗ್ರ ಅಭಿವೃದ್ಧಿಗಾಗಿ ನೀಡಿದ ಅಮೂಲ್ಯ ಕೊಡುಗೆಗಾಗಿ ಸಂಘದ ನಿಕಟಪೂರ್ವ ಅಧ್ಯಕ್ಷ ಅಮರನಾಥ್ ರೈ ಅವರನ್ನು ಈ ವೇಳೆ ಸನ್ಮಾನಿಸಲಾಯಿತು. ಅಲ್ಲದೆ ಆ ಅವಧಿಯ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ದುಡಿದಿರುವ ಎಲ್ಲರಿಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಸಾಂಸ್ಕೃತಿಕ ಅಂಗವಾಗಿ ನಾಡಿನ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಅವರ ಅದ್ಭುತ ಜಾದೂ ಪ್ರದರ್ಶನ, ಯುವ ಚಿತ್ರಕಾರ ದೇವಿ ಕಿರಣ್ ಗಣೇಶಪುರ ಅವರ ಅದ್ಭುತ ಚಿತ್ರ ರಚನೆ ಹಾಗೂ ಸಂಘದ ಕಲಾವಿದರಿಂದ ವೈವಿಧ್ಯಮಯ ನೃತ್ಯ ಪ್ರಕಾರಗಳು ರಂಗದ ಮೇಲೆ ಬಹಳ ಪರಿಣಾಮಕಾರಿಯಾಗಿ ಮೂಡಿಬಂದು ನೆರೆದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿತು.

ವಿಶೇಷ ಅತಿಥಿಗಳಾಗಿ ತಾಯ್ನಾಡಿನ ಖ್ಯಾತ ಉದ್ಯಮಿಗಳಾದ ಗೋವಿಂದ ಬಾಬು ಪೂಜಾರಿ, ಪ್ರವೀಣ್ ಶೆಟ್ಟಿ ಪುತ್ತೂರು, ದಿನೇಶ್ ಶೆಟ್ಟಿ ಕಳತ್ತೂರು, ಶಾರ್ಜಾ ಕನ್ನಡ ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಮಸ್ಕತ್(ಒಮಾನ್) ಕನ್ನಡ ಸಂಘದ ಅಧ್ಯಕ್ಷ ಮಂಜುನಾಥ ಸಂಗಟಿ ಸೇರಿದಂತೆ ಸ್ಥಳೀಯ ಗಣ್ಯರಾದ ನವೀನ್ ಶೆಟ್ಟಿ (ವ್ಯವಸ್ಥಾಪಕ ನಿರ್ದೇಶಕರು – ಔಮಾ), ಸಾರಾ ಗ್ರೂಪ್ ಸ್ಥಾಪಕ ಉದ್ಯಮಿ ಮೊಹಮ್ಮದ್ ಮನ್ಸೂರ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಸುಭಾಶ್ಚಂದ್ರ, ಉಪಾಧ್ಯಕ್ಷ ನಿತಿನ್ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಬಸವರಾಜ ಎಸ್. ಹೊರಟ್ಟಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಡಾ.ಆರತಿ ಕೃಷ್ಣ ಅವರು ವಿದೇಶಿ ನೆಲದಲ್ಲಿ ನಿರ್ಮಾಣಗೊಂಡಿರುವ ಪ್ರಥಮ ಕನ್ನಡ ಭವನವನ್ನು ಹೊಂದಿರುವ 47 ವರ್ಷಗಳ ಕನ್ನಡ ಸಂಘದ ಶ್ರೇಷ್ಠ ಇತಿಹಾಸವನ್ನು ಕೊಂಡಾಡಿ, ಕನ್ನಡ ಸಂಘ ಹಾಗು ಇಲ್ಲಿನ ಕನ್ನಡಿಗರ ಭಾಷಾಭಿಮಾನ, ಸಂಸ್ಕೃತಿ, ಕಲೆ ಹಾಗೂ ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದರು.

ಅಧ್ಯಕ್ಷ ಅಜಿತ್ ಬಂಗೇರ ಹಾಗೂ ಆಡಳಿತ ಮಂಡಳಿ ಎಲ್ಲಾ ಅತಿಥಿ ಗಣ್ಯರಿಗೆ ಗೌರವ ಸನ್ಮಾನ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ರಾಮ್ ಪ್ರಸಾದ್ ಅಮ್ಮೆನಡ್ಕ ಸ್ವಾಗತಿಸಿ, ವಂದಿಸಿದರು. ಕಿರಣ್ ಉಪಾಧ್ಯಾಯ, ರೂಪೇಶ್ ಹಾಗೂ ಸುರಕ್ಷಾ ಜೀವಿತ್ ಪೂಂಜಾ ಅವರು ಒಟ್ಟು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ವರದಿ-ಕಮಲಾಕ್ಷ ಅಮೀನ್

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories