ಫ್ಲೋರಿಡಾ: ಗಟ- ಗ್ಲೋಬಲ್ ಅಲೈನ್ಸ್ ಆಫ್ ತುಳು ಅಸೋಸಿಯೇಶನ್ (GATA Global Alliance of Tulu Association) ವಿಶ್ವದ ಎಲ್ಲಾ ದೇಶಗಳ ತುಳು ನಾಯಕರುಗಳನ್ನು ಒಳಗೊಂಡ ಸಂಸ್ಥೆಯಾಗಿದ್ದು, ತನ್ನ ಮೊದಲನೆಯ ತುಳು ಲಿಪಿ ಕಲಿಕಾ ಕಾರ್ಯಕ್ರಮದ ಉದ್ಘಾಟನೆಯನ್ನು ಈ ತಿಂಗಳ ಸೆಪ್ಟೆಂಬರ್ 21 ರಂದು Zoom ವೇದಿಕೆಯಲ್ಲಿ ಭಾರತದ ಸಮಯ ಸಂಜೆ 7 ಗಂಟೆಗೆ ಆಯೋಜಿಸಿದೆ.
ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಹಿರಿಯರಾದ ಡಿ.ಕೆ.ಶೆಟ್ಟಿ ಹಾಗೂ ಸರ್ವೋತ್ತಮ ಶೆಟ್ಟಿ (ಅಬುಧಾಬಿ) ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫ್ಲೋರಿಡಾ (ಯುಎಸ್ಎ)ದ ಶ್ರೀವಲ್ಲಿ ರೈ ಮಾರ್ಟೆಲ್ ಅವರು ತುಳು ಲಿಪಿ ಕಲಿಸುತ್ತಿದ್ದು, ಅವರಿಗೆ ಸಹಾಯಕರಾಗಿ ಪ್ರಭಾಕರ್ ಭಟ್ (ಯುಎಸ್ಎ), ಸುರೇಶ್ ಪೂಂಜ ಆಸ್ಟ್ರೇಲಿಯಾ, ಶುಭಶ್ರಿ ಕೆ.ಎಂ(ಭಾರತ), ಸರಿತಾ ಅರುಣ್ ಶೆಟ್ಟಿ (ಯುಕೆ), ಶ್ರುತಾ ಶೆಟ್ಟಿ (ಯುಕೆ), ಚಂದ್ರಹಾಸ ಶೆಟ್ಟಿ (ಮಸ್ಕತ್) ಸಹಕರಿಸಲಿದ್ದಾರೆ. ತಂಡಕ್ಕೆ ‘ಟೀಮ್ ಐಲೇಸಾ’ ತಾಂತ್ರಿಕ ಸಹಕಾರ ನೀಡುತ್ತಿದೆ.
ತುಳು ಲಿಪಿ ಕಲಿಯಲು ಇಚ್ಛಿಸುವವರು ಕೆಳಗಿನ Google Form ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು:
👉 Registration Form
https://forms.gle/y3VRfqvRDUT6UBQ68
ಫಾರ್ಮ್ ತುಂಬಲು ಸಹಾಯ ಬೇಕಿದ್ದಲ್ಲಿ ಸೂರಿ ಮಾರ್ನಾಡ್ ಅವರನ್ನು ಸಂಪರ್ಕಿಸಬಹುದು.
ತರಗತಿಯ ವಿವರ: ಬೇರೆ ಬೇರೆ ದೇಶದ ಸಮಯಕ್ಕನುಗುಣವಾಗಿ ಶನಿವಾರ 2 ತರಗತಿಗಳನ್ನು ಆಯೋಜಿಸಲಾಗಿದೆ.
ಬ್ಯಾಚ್ 1: ರಾತ್ರಿ 9:00 – 10:00 (ಶನಿವಾರ, ಆಸ್ಟ್ರೇಲಿಯಾ ಸಮಯ) / ಬೆಳಗ್ಗೆ 6:30 – 7:30 EST
ಬ್ಯಾಚ್ 2: ಬೆಳಗ್ಗೆ 10:30 – 11:30 EST / ರಾತ್ರಿ 8:00 – 9:00 IST
ಒಟ್ಟಿಗೆ 10 ತರಗತಿಗಳು ಶನಿವಾರದಂದು ಇರುತ್ತವೆ. ತುಳು ಭಾಷೆ ಹಾಗೂ ಲಿಪಿ ಉಳಿಸಿ ಬೆಳೆಸುವ ದಾರಿಯಲ್ಲಿ GATA ಕೈಗೊಂಡಿರುವ ಈ ಹೆಜ್ಜೆ, ಜಗತ್ತಿನಾದ್ಯಂತ ತುಳು ಬಾಂಧವರಲ್ಲಿ ಹರ್ಷ ಉಂಟುಮಾಡಿದೆ.