ಯುಎಇದುಬೈ; ಜನವರಿ 25ರಂದು 'ಗುರು ಕಿರಣ್ ನೈಟ್' ಅದ್ಧೂರಿ...

ದುಬೈ; ಜನವರಿ 25ರಂದು ‘ಗುರು ಕಿರಣ್ ನೈಟ್’ ಅದ್ಧೂರಿ ಸಂಗೀತ ಕಾರ್ಯಕ್ರಮ

ದುಬೈ: ಇಲ್ಲಿನ ಅಲ್ ಖಿಸೆಸ್ಸ್ ಅಮಿಟಿ ಸ್ಕೂಲಿನ ಫುಟ್ಬಾಲ್ ಮೈದಾನದಲ್ಲಿ ಜನವರಿ 25ರಂದು ಕನ್ನಡ ಚಲನಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್ ತಂಡದಿಂದ ‘ಗುರು ಕಿರಣ್ ನೈಟ್’ ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಗುರು ಕಿರಣ್ ಅವರ ಸಂಗೀತ ಕಾರ್ಯಕ್ರಮಕ್ಕೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಸಲಾಗಿರುವ ‘ಗುರು ಕಿರಣ್ ನೈಟ್’ ಕಾರ್ಯಕ್ರಮದ ಪ್ರವೇಶ ದ್ವಾರಗಳು ಸಂಜೆ 5 ಗಂಟೆಗೆ ತೆರೆಯಲಿದೆ.

ಸಂಗೀತ ಮತ್ತು ನೃತ್ಯದ ನಾನ್-ಸ್ಟಾಪ್ ನೇರ ಸಂಗೀತ ಕಾರ್ಯಕ್ರಮವು ಸಂಗೀತ ಪ್ರಿಯರನ್ನು ಮಂತ್ರಮುಗ್ಧಗೊಳಿಸಲಿದೆ. ಗುರು ಕಿರಣ್ ಸೇರಿದಂತೆ 14 ಭಾಷೆಗಳಲ್ಲಿ 5000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಪ್ರಸಿದ್ಧ ಹಿನ್ನೆಲೆ ಗಾಯಕಿ ಅನುರಾಧಾ ಭಟ್, ‘ಶೇಕ್ ಇಟ್ ಪುಷ್ಪಾವತಿ’ ಖ್ಯಾತಿಯ ಐಶ್ವರ್ಯ ರಂಗರಾಜನ್, KGF ಖ್ಯಾತಿಯ ಸಂತೋಷ್ ವೆಂಕಿ, ಜೊತೆಗೆ ಯುಎಇ ಪ್ರತಿಭೆಗಳಾದ ಖ್ಯಾತ ಗಾಯಕರಾದ ಹರೀಶ್ ಶೇರಿಗಾರ್, ನವೀದ್ ಮಾಗುಂಡಿ ಮತ್ತು ಗುಣಶೀಲ್ ಶೆಟ್ಟಿ ತಮ್ಮ ಹಾಡುಗಾರಿಕೆಯ ಮೂಲಕ ಮೋಡಿಮಾಡಲಿದ್ದಾರೆ.

ಕಾರ್ಯಕ್ರಮದ ನಿರೂಪಣೆಯನ್ನು ಖ್ಯಾತ ಟಿವಿ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ಬ್ಯಾಂಡ್‌ನಲ್ಲಿ ಆಲ್ವಿನ್ ಫೆರ್ನಾಡೀಸ್ (ಗಿಟಾರ್), ಹರ್ಷವರ್ಧನ್ (ಕೀಬೋರ್ಡ್), ಮಂಜು (ಡ್ರಮ್ಸ್), ಪ್ರಾರ್ಥನಾ (ಬಾಸ್), ಮಧುಸೋಹನ್ ಮತ್ತು ಸುಮುಖ್ (ಪರ್ಕಷನ್-ತಾಳ ವಾದ್ಯ), ಅಭಿಷೇಕ್ (ಫ್ಲೂಟ್ ಮತ್ತು ಸ್ಯಾಕ್ಸೊಫೋನ್) ತಮ್ಮ ಪ್ರತಿಭೆಯನ್ನು ತೋರಿಸಲಿದ್ದಾರೆ. ಈ ಸಂಗೀತ ಕಾರ್ಯಕ್ರಮವನ್ನು ಇನ್ನಷ್ಟು ರಂಗೇರಿಸಲು ಬೆಂಗಳೂರಿನ ನಂ.1 ಡ್ಯಾನ್ಸ್ ಟ್ರೂಪ್ ಆಕ್ಸಿಜನ್ ಅವರ ಅದ್ಭುತ ನೃತ್ಯ ಪ್ರದರ್ಶನವೂ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Hot this week

ಅಟ್ಲಾಂಟ ಕನ್ನಡಿಗರಿಂದ ಯುಗಾದಿ-ಹೊಸ ತೊಡಕು ಆಚರಣೆ

ಅಟ್ಲಾಂಟ ಕನ್ನಡಿಗರು ಯುಗಾದಿಯನ್ನು ಏಪ್ರಿಲ್ 11 ಹಾಗೂ ಹೊಸತೊಡಕು ಹಬ್ಬವನ್ನು ಏಪ್ರಿಲ್...

ಖತರ್‌ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧಿಕಾರ ಸ್ವೀಕಾರ

ದೋಹಾ(ಖತರ್):ಕರ್ನಾಟಕ ಸಂಘ ಖತರ್‌ನ 2026–2028 ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಬ್ರಹ್ಮಣ್ಯ ಹೆಬ್ಬಾಗಿಲು...

ಫ್ಲೋರಿಡಾ ತುಳು ಕೂಟದ 5ನೇ ವಾರ್ಷಿಕೋತ್ಸವ: ಸಂಭ್ರಮದ ಪಿಕ್ನಿಕ್‌ನೊಂದಿಗೆ ಸಂಸ್ಕೃತಿಯ ಅನಾವರಣ

ಪೊಂಪಾನೋ ಬೀಚ್(ಫ್ಲೋರಿಡಾ): ಫ್ಲೋರಿಡಾ ತುಳು ಕೂಟವು ತನ್ನ ಐದನೇ ವರ್ಷದ ಸಂಭ್ರಮವನ್ನು...

ಅಬುಧಾಬಿಗೆ ಸಚಿವ ಡಾ.ಜೈಶಂಕರ್ ಭೇಟಿ; ಕನ್ನಡಿಗರ ಕೂಟ ದುಬೈ-ಅಬುಧಾಬಿ ಕರ್ನಾಟಕ ಸಂಘ ಪ್ರತಿನಿಧಿತ್ವ

ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು...

ದುಬೈ; ‘ಬ್ಯಾರೀಸ್ ಪ್ರೀಮಿಯರ್ ಲೀಗ್-2026’ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕ್ರೌನ್ ಹೊನ್ನಾವರ; ನಫೀಸ್ ಗ್ರೂಪ್ ರನ್ನರ್ ಅಪ್

ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ 'ಬ್ಯಾರೀಸ್ ಪ್ರೀಮಿಯರ್...

Related Articles

Popular Categories