ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ ಮಾಜಿ IPL ಅಧ್ಯಕ್ಷರಾದ ಬ್ರಿಜೇಶ್ ಪಟೇಲ್ ಅವರನ್ನು ಅವರ ಬೆಂಗಳೂರು ಕಚೇರಿಯಲ್ಲಿ ಭೇಟಿ ಮಾಡಿ, ಭಾರತೀಯ ಕ್ರಿಕೆಟ್‌ಗೆ ನೀಡಿರುವ ಅದ್ಭುತ ಕೊಡುಗೆಗಳಿಗೆ ಗೌರವ ಸೂಚಕ ಸನ್ಮಾನ ಸಲ್ಲಿಸಿತು.




ಕನ್ನಡಿಗರ ಕೂಟ, ದುಬೈ ಅಧ್ಯಕ್ಷ ಅರುಣ್ ಕುಮಾರ್ MK ಹಾಗೂ ಸಂಯುಕ್ತ ಕಾರ್ಯದರ್ಶಿ ದೀಪಕ್ ಸೋಮಶೇಖರ್ ಈ ಸನ್ಮಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಈ ವರ್ಷದ ನಮ್ಮ ಮಹಾ ಕಾರ್ಯಕ್ರಮದ ಕುರಿತು ದೀರ್ಘ ಚರ್ಚೆ ನಡೆಯಿತು. ಎಲ್ಲಾ ವ್ಯವಸ್ಥೆಗಳು ಪೂರ್ಣಗೊಂಡ ನಂತರ ಕಾರ್ಯಕ್ರಮದ ರೋಚಕ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲು ಕನ್ನಡಿಗರ ಕೂಟ, ದುಬೈ ನಿರ್ಧರಿಸಿದೆ.
ಈ ಮಹತ್ವದ ಪ್ರಯತ್ನದಲ್ಲಿ ನಮ್ಮೊಂದಿಗೆ ನಿಂತು ಬೆಂಬಲ ನೀಡುತ್ತಿರುವ ಅಕ್ಷಯ್ ಅವರಿಗೆ ಹಾಗೂ ಈ ಪ್ರಯಾಣದಲ್ಲಿ ಕೈಜೋಡಿಸಿರುವ ಎಲ್ಲರಿಗೂ ಕನ್ನಡಿಗರ ಕೂಟ, ದುಬೈ ಕೃತಜ್ಞತೆ ಸಲ್ಲಿಸಿದೆ.

