ಅಮೆರಿಕಾದ ಅಟ್ಲಾಂಟ ಕನ್ನಡಿಗರು ಮೇ 4ರಂದು ರವಿವಾರ ಅದ್ದೂರಿಯಾಗಿ ಯುಗಾದಿ ಹಾಗೂ ಕನ್ನಡ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ನೃಪತುಂಗ ಕನ್ನಡ ಕೂಟದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತ ಸಂಜೆ ಮುಖ್ಯ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದ ಒಂದು ವಾರದ ಮುಂಚೆಯೇ ಟಿಕೆಟ್ “ಸೋಲ್ಡ್ ಔಟ್” ಆಗಿದ್ದು ಕನ್ನಡಿಗರು ತಮ್ಮ ನೆಚ್ಚಿನ ಗಾಯಕನ ಹಾಡುಗಳನ್ನು ಸಂತೋಷದಿಂದ ಆನಂದಿಸಿದರು. ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನ, ನಗು, ಪ್ರೀತಿಯಿಂದ ಅಭಿಮಾನಿಗಳ ಹೃದಯ ಗೆದ್ದರು. ಅಷ್ಟೇ ಅಲ್ಲದೆ ಪ್ರೋತ್ಸಾಹ ನೀಡಲು ಅಟ್ಲಾಂಟದ ಸ್ಥಳೀಯ ಪ್ರತಿಭೆಗಳನ್ನು ಸಹ ತಮ್ಮ ಜೊತೆ ಹಾಡಿಸಿ ಕನ್ನಡಿಗರ ಮನ ಗೆದ್ದರು.












ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಗಾಯನ, ನಾಟಕಗಳನ್ನು ಆಯೋಜಿಸಲಾಗಿತ್ತು. ಕನ್ನಡ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸ್ಥಳೀಯ ಕನ್ನಡಿಗರು ಭಾಗವಹಿಸಿ ಸಂತೋಷಪಟ್ಟರು. ಕೆ.ಆರ್.ಶ್ರೀನಾಥ್ ಅವರು ಕಾರ್ಯಕ್ರಮದಲ್ಲಿ ಕನ್ನಡ ಪ್ರಶ್ನಾವಳಿ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಕೂಟ ತಂಡದವರು ಶ್ರಮವಹಿಸಿ ಇಡೀ ದಿನದ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿ ಭರ್ಜರಿ ಭೋಜನದ ವ್ಯವಸ್ಥೆಯನ್ನು ಸಹ ಮಾಡಿದ್ದರು.
ವರದಿ: ಕೆ.ಆರ್.ಶ್ರೀನಾಥ್, ಅಟ್ಲಾಂಟ