ದುಬೈ: ಶಾರ್ಜಾದ ಬಿಜೋಯ್ಸ್ ಕ್ರಿಕೆಟ್ ಕ್ರೀಡಾಗಂಣದಲ್ಲಿ ರವಿವಾರ ನಡೆದ ‘ಬ್ಯಾರೀಸ್ ಪ್ರೀಮಿಯರ್ ಲೀಗ್ ಸೀಸನ್ 1 – 2026’ ಕ್ರಿಕೆಟ್ ಪಂದ್ಯಾಟದಲ್ಲಿ ‘ಕ್ರೌನ್ ಹೊನ್ನಾವರ’ ತಂಡವು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ನಫೀಸ್ ಗ್ರೂಪ್ ತಂಡವನ್ನು ಸೋಲಿಸುವ ಮೂಲಕ ಕ್ರೌನ್ ಹೊನ್ನಾವರ ತಂಡವು ‘ಬ್ಯಾರೀಸ್ ಪ್ರೀಮಿಯರ್ ಲೀಗ್ ಸೀಸನ್ 1 – 2026’ ನ್ನು ತನ್ನದಾಗಿಸಿಕೊಂಡಿತು.

ಬಿಜಾಯ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಟೂರ್ನಮೆಂಟ್ನಲ್ಲಿ ಹಲವು ಬಲಿಷ್ಠ ತಂಡಗಳು ಕಪ್ ಗಾಗಿ ಸೆಣಸಾಟ ನಡೆಸಿದವು. ಫೈನಲ್ ತಲುಪಿದ ಕ್ರೌನ್ ಹೊನ್ನಾವರ ಹಾಗು ನಫೀಸ್ ಗ್ರೂಪ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಿದ್ದು, ಕೊನೆಯಲ್ಲಿ, ಉತ್ತಮ ಪ್ರದರ್ಶನದೊಂದಿಗೆ ಕ್ರೌನ್ ಹೊನ್ನಾವರ ತಂಡ ಜಯಶಾಲಿಯಾಗಿ ಹೊರಹೊಮ್ಮಿತು.

ಇಡೀ ಪಂದ್ಯಾಟದಲ್ಲಿ ಕ್ರೌನ್ ಹೊನ್ನಾವರ ತಂಡದ ಹಮ್ದಾನ್ ಉಡುಪಿ ತನ್ನ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದರು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ — ಎಲ್ಲಾ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಅವರಿಗೆ ‘ಶ್ರೇಷ್ಠ ಆಟಗಾರ(Most Valuable Player)’ ಪ್ರಶಸ್ತಿಯೊಂದಿಗೆ ಬೈಕನ್ನು ಬಹುಮಾನವಾಗಿ ನೀಡಿ ಅಭಿನಂದಿಸಲಾಯಿತು.

