ಯುಎಇದುಬೈ 'ಬ್ಯಾರಿ ಮೇಳ'ದಲ್ಲಿ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್...

ದುಬೈ ‘ಬ್ಯಾರಿ ಮೇಳ’ದಲ್ಲಿ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊಗೆ ‘Global Icon of Philanthropy’ ಪ್ರಶಸ್ತಿ ಪ್ರದಾನ; ಸಮಾಜ ಸೇವೆಗೈಯ್ಯುವಂತೆ ಪ್ರತಿಜ್ಞೆ ಬೋಧಿಸಿದ ಕೊಲಾಸೊ

ದುಬೈ: ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಆಶ್ರಯದಲ್ಲಿ ರವಿವಾರ ದುಬೈಯಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಬ್ಯಾರಿ ಮೇಳದಲ್ಲಿ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ‘Global Icon of Philanthropy’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬ್ಯಾರಿ ಮೇಳದ ಸಮಾರೋಪ ಸಮಾರಂಭದಲ್ಲಿ ಸಹಸ್ರಾರು ಜನರ, ಹತ್ತುಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ರೊನಾಲ್ಡ್ ಕೊಲಾಸೊ, ಸಭೆಯಲ್ಲಿದ್ದವರನ್ನು ಒಂದು ನಿಮಿಷಗಳ ಕಾಲ ಎದ್ದು ನಿಲ್ಲುವಂತೆ ಮನವಿ ಮಾಡಿ, ‘ನಾವಿಂದು ದುಡಿಯುವ ಹಣದಲ್ಲಿ ಒಂದು ಪಾಲನ್ನು ಸಮಾಜದಲ್ಲಿರುವ ಅಶಕ್ತರು, ಬಡವರು, ನಿರ್ಗತಿಕರಿಗೆ ಮುಡಿಪಾಗಿಡೋಣ. ಇದನ್ನು ನಾವು ಇಂದಿನಿಂದಲೇ ಆರಂಭಿಸೋಣ’ ಎಂದು ಪ್ರತಿಜ್ಞೆ ಬೋಧಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಸಹಸ್ರಾರು ಮಂದಿ ಎದ್ದು ನಿಂತು ಕೊಲಾಸೊ ಅವರ ಪ್ರತಿಜ್ಞೆಗೆ ಕೈಜೋಡಿಸಿದರು.

ನನ್ನ ಮದುವೆ ಸಂದರ್ಭದಲ್ಲಿ ಧರ್ಮಗುರುಗಳ ಸಮ್ಮುಖದಲ್ಲಿ ದಾಂಪತ್ಯದ ಪ್ರಮಾಣ ಸ್ವೀಕರಿಸಬೇಕಿತ್ತು. ದಾಂಪತ್ಯದ ಪ್ರಮಾಣ ಸ್ವೀಕರಿಸುವ ಗಳಿಗೆ ಬಂದಾಗ, ನಾನು ಮತ್ತು ಜೀನ್ ಕೊಲಾಸೊ ಸಮಾಜ ಸೇವೆಯ ಪ್ರಮಾಣ ಮಾಡಿದೆವು. ತಮ್ಮ ದುಡಿಮೆಯ, ತಮ್ಮ ಗಳಿಕೆಯ ಒಂದಷ್ಟು ಪ್ರಮಾಣವನ್ನು ಜನರಿಗಾಗಿ, ದೇಶಕ್ಕಾಗಿ, ವಿಶ್ವದ ಶಾಂತಿಗಾಗಿ ನೀಡುವ ಪ್ರಮಾಣವನ್ನು ನಾವು ಮಾಡಿದೆವು ಎಂಬುದನ್ನು ಡಾ.ರೊನಾಲ್ಡ್ ಕೊಲಾಸೊ ಕಾರ್ಯಕ್ರಮದಲ್ಲಿ ಸ್ಮರಿದರು.

ನಾನು ಹುಟ್ಟಿ ಬೆಳೆದು ಬಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದ್ದರೂ, ಅದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೇನೆಯೇ ಹೊರತು, ಡಾಕ್ಟರೇಟಿಗಾಗಲಿ, ಸನ್ಮಾನ, ಗೌರವಕ್ಕಾಗಿ ಅಲ್ಲ. ನಾನು ಮತ್ತು ನನ್ನ ಧರ್ಮ ಪತ್ನಿ ಜೀನ್ ಕೊಲಾಸೊ ಸಮಾಜ ಸೇವೆಗಾಗಿ ಜಾತಿ, ಧರ್ಮ ನೋಡದೇ ಹತ್ತಲವು ಕಾರ್ಯವನ್ನು ಮಾಡುತ್ತಲೇ ಬರುತ್ತಿದ್ದೇವೆ. ನೀವು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ರಾಜ್ಯ ಹಜ್‌ ಸಚಿವ ರಹೀಮ್ ಖಾನ್, ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ದುಬೈಯ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್, ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಅಧ್ಯಕ್ಷ ಹಿದಾಯತ್‌ ಅಡ್ಡೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರೊನಾಲ್ಡ್ ಕೊಲಾಸೊ ಅವರು ಯಶಸ್ವಿ ಉದ್ಯಮಿಯಷ್ಟೇ ಅಲ್ಲ, ಅನನ್ಯ ಸಮಾಜ ಸೇವಕರೂ ಆಗಿದ್ದು, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರು. ಉದ್ಯೋಗ, ಉದ್ಯಮ ಎರಡರಲ್ಲೂ ಅಸಾಮಾನ್ಯ ಯಶಸ್ಸು ಕಂಡ ರೊನಾಲ್ಡ್ ಕೊಲಾಸೊ ಅವರು, ಸಮಾಜ ತನಗೆ ನೀಡಿದ ಹಾಗೆಯೇ ತಾನೂ ಸಮಾಜಕ್ಕೆ ನೀಡಬೇಕು ಎಂದು ಪಣತೊಟ್ಟು ಸೇವಾ ಚಟುವಟಿಕೆಗಳಿಗೆ ಧುಮುಕಿದರು. ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶಗಳ ಭೇದವಿಲ್ಲದೆ ಅರ್ಹರಿಗೆ ಸಹಾಯಹಸ್ತ ಚಾಚುವುದನ್ನು ನಿರಂತರ ಮಾಡುತ್ತಾ ಬಂದಿದ್ದಾರೆ.

ತಮ್ಮ ಸಾಮಾಜಿಕ ಸೇವಾ ಚಟುವಟಿಕೆಗಳಿಗಾಗಿ ಡಾ. ರೊನಾಲ್ ಕೊಲಾಸೊ ಅವರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ , ಯುರೋಪ್ ಹಾಗೂ ಹಲವು ಮಧ್ಯ ಪ್ರಾಚ್ಯ ದೇಶಗಳ ಪ್ರತಿಷ್ಠಿತ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಿಂದ 44ಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ಡಾ. ರೊನಾಲ್ ಕೊಲಾಸೊ ಅವರ ಕೊಡುಗೆಗಳಲ್ಲಿ ಕೆಲವು…..
ಪೊಲೀಸ್ ಮ್ಯೂಸಿಯಂ ಕಟ್ಟಡದ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಂಚಾರಕ್ಕಾಗಿ 2 ಆಧುನಿಕ ಪೊಲೀಸ್ ಠಾಣೆಗಳ ನಿರ್ಮಾಣ

ಎರಡು ಹಿಂದೂ ದೇವಾಲಯಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. 35ಕ್ಕೂ ಹೆಚ್ಚು ಐತಿಹಾಸಿಕ ದೇವಾಲಯಗಳಿಗೆ ಆರ್ಥಿಕ ಸಹಾಯ ನೀಡಿದ್ದಾರೆ. ಬೆಂಗಳೂರಿನ ಬೋವಿಪಾಳ್ಯ- ಅಗ್ರಹಾರದಲ್ಲಿ ಮುನೀಶ್ವರ ದೇವಸ್ಥಾನವನ್ನು ನಿರ್ಮಿಸಲು ಪ್ರಮುಖ ದಾನಿಯಾಗಿದ್ದಾರೆ. 700 ವರ್ಷಗಳ ಹಿಂದಿನ ಸಿಂಗಾರಹಳ್ಳಿ-ಬೆಂಗಳೂರಿನಲ್ಲಿನ ಮದ್ದೂರಮ್ಮ ದೇವಸ್ಥಾನ ಕಟ್ಟಲು ಕೊಡುಗೆ ನೀಡಿದ್ದಾರೆ. ಮಂಗಳೂರಿನ ಶ್ರೀಸೂರ್ಯನಾರಾಯಣ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಕೊಡುಗೆ ನೀಡಿದ್ದಾರೆ. ರಾಜ್ಯದ ಬೇರೆ ಬೇರೆ 35 ದೇವಸ್ಥಾನಗಳಿಗೆ, ಮಸೀದಿ, ಚರ್ಚ್ ಕಟ್ಟಡ ನಿರ್ಮಾಣಕ್ಕೆ ಮತ್ತು ಮೂಲಭೂತ ಸೌಕರ್ಯಕ್ಕೆ ದೇಣಿಗೆ ನೀಡಿದ್ದಾರೆ.

60ಕ್ಕೂ ಹೆಚ್ಚು ಚರ್ಚುಗಳಿಗೆ ಗಣನೀಯ ಹಣಕಾಸಿನ ನೆರವಿನ ಜೊತೆಗೆ ಒಂದು ಚರ್ಚ್ ಅನ್ನು ಸಂಪೂರ್ಣವಾಗಿ ನಿರ್ಮಿಸಿ ಕೊಟ್ಟಿದ್ದಾರೆ.

ಬೆಂಗಳೂರಿನ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಿನಿ ವಿಧಾನ ಸೌಧದ ಬಳಿ ಕಂದಾಯ ಇಲಾಖೆಗೆ ಇಡೀ ತಾಲೂಕು ಕಚೇರಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಆಧುನಿಕ ವಕೀಲರ ಭವನವನ್ನು ನಿರ್ಮಿಸಿ ಕೊಟ್ಟಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಸುಮಾರು 70 ಶಾಲೆಗಳಿಗೆ ಗಣನೀಯ ಆರ್ಥಿಕ ಸಹಾಯದ ಜೊತೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸರಕಾರಿ ಪ್ರೌಢಶಾಲೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.

ವಿವಿಧ ಸಾರ್ವಜನಿಕ ಮತ್ತು ಉಚಿತ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಆರ್ಥಿಕ ಸಹಾಯದ ಜೊತೆಗೆ 65 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸಿ ಕೊಟ್ಟಿದ್ದಾರೆ.

ರೈತರಿಗೆ, ಬಡವರಿಗೆ ಮನೆಗಳ ನಿರ್ಮಾಣ ಮಾಡಿದ್ದಾರೆ. 10. ತೋಟಗಾರಿಕೆ ಇಲಾಖೆಗೆ ಆಧುನಿಕ ಹಾಪ್ಕಾಮ್ಸ್ ಮಳಿಗೆಗಳ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಸಮುದಾಯ ಭವನಗಳ ನಿರ್ಮಾಣ, ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಿದ್ದಾರೆ.

ನಿರ್ಗತಿಕರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸ್ಮಶಾನಗಳಿಗೆ ಸೌಲಭ್ಯಗಳನ್ನು ಒದಗಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ವಿವಿಧ ಆರೋಗ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದು, ಅನೇಕ ಸಂಸ್ಥೆಗಳಿಗೆ ಮೂಲಭೂತ ದೇಣಿಗೆ ನೀಡಿದ್ದಾರೆ.

ಮಂಗಳೂರಿನ ಕೊಂಕಣಿ ಕಲಾ ಕೇಂದ್ರ ಕಟ್ಟಡ ನಿರ್ಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಮಾಂಡ್ ಸೊಬಾಣ್ ವಿಶ್ವ ಕೊಂಕಣಿ ಕೇಂದ್ರಗಳಿಗೆ ಮತ್ತು ಕೊಂಕಣಿ ಕಲಾವಿದರಿಗೆ, ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಾಯ ಮಾಡಿದ್ದಾರೆ.

ವಿವಿಧ ಪ್ರಾಕೃತಿಕ ವಿಕೋಪ ನಡೆದಾಗ ಕರ್ನಾಟಕ ಸರಕಾರಕ್ಕೆ ಪರಿಹಾರ ನಿಧಿ ನೀಡಿದ್ದಲ್ಲದೆ ಕೊರೋನ ಸಂದರ್ಭದಲ್ಲಿ 18 ಸಾವಿರ ಕುಟುಂಬಗಳಿಗೆ ಅಗತ್ಯ 20 ಸಾವಿರ ದಿನಸಿ ವಸ್ತುಗಳ ಬ್ಯಾಗುಗಳನ್ನು ವಿತರಿಸಿದ್ದಾರೆ.

ಮಂಗಳೂರಿನ ಬೋಳಾರದ ಮಂಗಳಾದೇವಿ ದೇವಸ್ಥಾನದ ಬಳಿ ಸುಸಜ್ಜಿತ ರಸ್ತೆಯ ನಿರ್ಮಾಣದಲ್ಲಿ ಕೊಡುಗೆ. ಬೆಂಗಳೂರಿನ ಕೊಂಕಣಿ ಭವನ ನಿರ್ಮಾಣದಲ್ಲಿ ಕೊಡುಗೆ ನೀಡಿದ್ದಾರೆ. ವಿವಿಧ ಸಂಘಟನೆಗಳ ಸೇವಾ ಕಾರ್ಯಕ್ರಮ ಸೇರಿದಂತೆ ಸಮಾಜದ ಎಲ್ಲಾ ವರ್ಗ, ಜಾತಿ, ಸಮುದಾಯದ ಚಟುವಟಿಕೆಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಬಹರೈನ್ ನಲ್ಲಿ ನಿರ್ಮಾಣವಾಗಿರುವ ‘ಕನ್ನಡ ಭವನ’ವು ವಿದೇಶದಲ್ಲಿರುವ ಮೊತ್ತ ಮೊದಲ ಕನ್ನಡ ಭವನವಾಗಿದ್ದು, ಇದಕ್ಕಾಗಿ ದೊಡ್ಡ ಮೊತ್ತದ ದೇಣಿಗೆ ನೀಡಿ ಇದರ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾಗಿದ್ದಾರೆ.

Hot this week

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

ನಾಳೆ ದುಬೈನಲ್ಲಿ ‘ಗ್ಲೋಬಲ್ ಮೀಡಿಯಾ ಐಕನ್ ಪ್ರಶಸ್ತಿ 2025’ ಪ್ರದಾನ; ಭಾಗವಹಿಸಲಿರುವ ಸಚಿವರು-ಸ್ಯಾಂಡಲ್‌ವುಡ್ ತಾರೆಯರ ದಂಡು

ದುಬೈ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್‌ ಯೂನಿಯನ್‌(KMJU) ಆಶ್ರಯದಲ್ಲಿ 'ಗ್ಲೋಬಲ್ ಮೀಡಿಯಾ ಐಕನ್...

ಎ.12ರಂದು ದುಬೈನಲ್ಲಿ ‘ಆಕ್ಮೆ’ಯಿಂದ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ವಿಶೇಷ ಸಂಗೀತ, ನೃತ್ಯ, ಹಾಸ್ಯಮಯ ಕಾರ್ಯಕ್ರಮ

ದುಬೈ: ಖ್ಯಾತ ಗಾಯಕ ಹಾಗು ಉದ್ಯಮಿ ಆಗಿರುವ ದುಬೈಯ ‘ಆಕ್ಮೆ’ ಬಿಲ್ಡಿಂಗ್...

ದುಬೈಯಲ್ಲಿ ಸಂಭ್ರಮ, ಸಡಗರದ ಶ್ರೀರಾಮನವಮಿ ಆಚರಣೆ

ದುಬೈ: ರಾಮನವಮಿ ಪ್ರಯುಕ್ತ ಶಂಕರ ಸೇವಾ ಸಮಿತಿಯವರು ದುಬೈಯ ಭಕ್ತಾಧಿಗಳನ್ನೆಲ್ಲ ಸೇರಿಸಿಕೊಂಡು...

Related Articles

Popular Categories