ದುಬೈ: ಬ್ಯಾರಿಗಳ ಒಗ್ಗಟ್ಟಿಗೆ ಇಂದು ದುಬೈಯಲ್ಲಿ ನಡೆದ ಬ್ಯಾರಿ ಮೇಳವೇ ಸಾಕ್ಷಿ. ಅವರು ಒಟ್ಟುಗೂಡಿದರೆ ಏನನ್ನೂ ಸಾಧಿಸಬಹುದು. ಇಂಥ ಸಮುದಾಯದ ಜೊತೆ ಎಲ್ಲ ವಿಷಯದಲ್ಲೂ ಕರ್ನಾಟಕ ಸರಕಾರ ಕೈಜೋಡಿಸಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ರವಿವಾರ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಆಶ್ರಯದಲ್ಲಿ ನಡೆದ ಬ್ಯಾರಿ ಮೇಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.







ಬ್ಯಾರಿ ಸಮುದಾಯದವರು ಎಲ್ಲರನ್ನು ಒಟ್ಟು ಸೇರಿಸಿಕೊಂಡು ದುಬೈನಂಥಹ ನಗರದಲ್ಲಿ ಬ್ಯಾರಿ ಮೇಳ ಮಾಡಿರುವುದು ಅವರ ಒಗ್ಗಟ್ಟಿನ ಶಕ್ತಿಯನ್ನು ತೋರಿಸುತ್ತದೆ. ಇದು ಸಾಧಿಸಲು ಸಾಧ್ಯವಾಗಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಸಂವಿಧಾನದ ಫಲದಿಂದ. ಇಂದು ಬ್ಯಾರಿಗಳು ಎಲ್ಲ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಈ ಬಾರಿಯ ಬಜೆಟ್ ಗೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು NRI ಸಂಘಟನೆಗಳನ್ನು ಕರೆದು ಅನಿವಾಸಿ ಭಾರತೀಯ ಕೋಶಕ್ಕೆ ಬೇಕಾದಂತಹ ಅನುದಾನವನ್ನು ನೀಡುವಂತೆ ಸಲಹೆ ನೀಡುತ್ತೇನೆ. ಬ್ಯಾರಿಗಳು ಎಲ್ಲರ ಜೊತೆ ಬೆರೆತು ಬಾಳುವವರು. ಇಂಥ ಸಮುದಾಯದವರು ಇಂಥ ದೊಡ್ಡ ಮಟ್ಟದಲ್ಲಿ ಮೇಳ ಮಾಡಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ದುಬೈಯ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್, ರಾಜ್ಯ ಹಜ್ ಸಚಿವ ರಹೀಮ್ ಖಾನ್, ಬೆಂಗಳೂರು ಶಾಂತಿನಗರ ಶಾಸಕ N.A ಹಾರಿಸ್, ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊ, ಸರ್ಕಾರದ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೂಝ್ ಖಾನ್, ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯಿದೀನ್, ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಸೌದಿ ಅರೇಬಿಯಾದ ಅಲ್ ಮುಝೈನ್ ನ ಸಿಇಓ ಝಕರಿಯ ಜೋಕಟ್ಟೆ, ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿ ಲಿಮಿಟೆಡ್‌ನ ಸಿಇಒ ಮುಹಮ್ಮದ್ ಆಸಿಫ್ ಕರ್ನಿರೆ ಮಾತನಾಡಿ, ಬಿಸಿಸಿಐಯವರು ಇಂಥ ದೊಡ್ಡ ಮಟ್ಟದಲ್ಲಿ ಬ್ಯಾರಿ ಮೇಳ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸೌದಿ ಅರೇಬಿಯಾದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿ ಲಿಮಿಟೆಡ್‌ನ ನಿರ್ದೇಶಕ ಕೆ.ಎಸ್. ಶೇಖ್ ಕರ್ನಿರೆ, ಮಂಗಳೂರು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಅಧ್ಯಕ್ಷ ಎಸ್.ಎಂ.ಆರ್. ರಶೀದ್ ಹಾಜಿ, ಮಾಜಿ ಶಾಸಕ ಮೊಯಿದಿನ್ ಬಾವಾ, ಬ್ಯಾರಿ ಕಲ್ಚರಲ್ ಫೋರಮ್ (ಬಿಸಿಎಫ್) ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಯುಎಇಯ KNRI ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಜಿ.ಎ.ಬಾವಾ, KCF ಯುಎಇ ರಾಷ್ಟೀಯ ಅಧ್ಯಕ್ಷ ಕೆದುಂಬಾಡಿ ಇಬ್ರಾಹಿಂ ಮುಸ್ಲಿಯಾರ್, SKSSF ಅಧ್ಯಕ್ಷ ಅಸ್ಗರ್ ಅಲಿ ತಂಙಳ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಮುಹಮ್ಮದ್ ಅಲಿ ಉಚ್ಚಿಲ್, ಕಾಂಗ್ರೆಸ್ ಮುಖಂಡ ಮುನಿಯಲು ಉದಯ ಕುಮಾರ್ ಶೆಟ್ಟಿ, ಉಳ್ಳಾಲ ದರ್ಗಾ ಕಮಿಟಿ ಅಧ್ಯಕ್ಷ ಹನೀಫ್ ಹಾಜಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.










ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ಪ್ರಾಸ್ತಾವಿಕ ಮಾತನಾಡಿದರು. ‘ಬ್ಯಾರಿ ಮೇಳ ಸಂಚಾಲಕ, ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯ ಅಶ್ರಫ್ ಷಾ ಮಂತೂರ್ ಸ್ವಾಗತಿಸಿದರು. ಸೈಫ್ ಸುಲ್ತಾನ್ ಕಾರ್ಯಕ್ರಮವನ್ನು ನಿರೂಪಿಸಿದರು.












