ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಕೇರಳ ರಾಜ್ಯದ ನಾಡ ಹಬ್ಬ ಓಣಂವನ್ನು ಅಗಸ್ಟ್ 26ರಂದು ನಗರದ ಅಲ್ ಕಿಸೆಸ್ಸ್ ನ ಫಾರ್ಚೂನ್ ಗ್ರಾಂಡ್ ಹೋಟೆಲ್ ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ನಿರೂಪಕ ಚಿತ್ರನಟ ಆರ್.ಜೆ.ಮಿಥುನುರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಎಲ್ಲಾರು ಒಟ್ಟುಗೂಡಿ ನಾಡಹಬ್ಬ ಓಣಂ ಆಚರಿಸಿದಾಗ ಶಾಂತಿ ಮತ್ತು ಸಹೋದರತೆಯ ಸಂತೋಷದ ವಾತಾವರಣ ಪಸರಿಸುತ್ತದೆ ಎಂದು ಹೇಳಿ ಎಲ್ಲಾರಿಗೂ ಓಣಂ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಕೇರಳದ ಸಂಸ್ಕೃತಿ, ಪರಂಪರೆ ಮತ್ತು ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಪ್ರಮುಖ ಹಬ್ಬವೇ ಓಣಂ. ನಮ್ಮ ಸಂಸ್ಥೆಯ ಸಿಬ್ಬಂದಿಗಳು ಮತ್ತು ಗ್ರಾಹಕರೊಂದಿಗೆ ಒಟ್ಟುಗೂಡಿ ಓಣಂ ಹಬ್ಬವನ್ನು ಆಚರಿಸಲು ಸಂತೋಷವಾಗುತ್ತದೆ ಎಂದು ಹೇಳಿ, ಎಲ್ಲಾರಿಗೂ ಓಣಂ ಹಬ್ಬದ ಶುಭಾಶಯಗಳನ್ನು ತಿಳಿಸಿದರು.




ದುಬೈ ಮುನ್ಸಿಪಾಲಿಟಿ ಉದ್ಯೋಗಿ ಮಿಸ್ಟರ್ ಬೋಬಿ ಮತ್ತು ಪ್ರವೀಣ್ ಕುಮಾರ್ ಶೆಟ್ಟಿಯವರ ಪುತ್ರಿ ಪ್ರಾಂಚಿ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಪೂಕಳಂ(ಹೂವಿನ ರಂಗೋಲಿ) ಹಾಕಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರನ್ನು ಮಾವೆಲ್ಲಿ(ಬಲಿ ಚಕ್ರವರ್ತಿ) ಮತ್ತು ಕೇರಳದ ಚೆಂಡೆ ವಾದನದಲ್ಲಿ ಸ್ವಾಗತಿಸಲಾಯಿತು. ನಂತರ ಓಣಂ ಭೋಜನ ಸವಿಯಲಾಯಿತು.
ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

