ದುಬೈ: ‘ಸಾಹೇಬಾನ್ ಯುಎಇ’ ಆಶ್ರಯದಲ್ಲಿ ಶನಿವಾರದಂದು ದುಬೈಯ ಅಲ್ ಖಿಸೈಸ್ ನ ಅಮಿಟಿ ಸ್ಕೂಲಿನ ಮೈದಾನದಲ್ಲಿ ‘ಕುಟುಂಬ ಸ್ನೇಹಕೂಟ’ವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.




ದಕ್ಷಿಣ ಕನ್ನಡ ಮತ್ತು ಉಡುಪಿಯ ಉರ್ದು ಮಾತನಾಡುವ ಮುಸ್ಲಿಂ ಸಮುದಾಯವಾಗಿರುವ ‘ಸಾಹೇಬಾನ್’ನ ಈ ಸ್ನೇಹಕೂಟದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಕುಟುಂಬ ಸಮೇತರಾಗಿ ಸಂತಸದಿಂದ ಪಾಲ್ಗೊಂಡರು.





ಅನನ್ಯ ಸಾಧಕರಿಗೆ ಸಂದ Sahebaan Excellence Awards
ಸಂಜೆಯಿಂದ ಆರಂಭಗೊಂಡ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾಹೇಬಾನ್ ಸಮುದಾಯದ 5 ಮಂದಿ ಗಣ್ಯ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ‘ಸಾಹೇಬಾನ್’ ಸಮುದಾಯದ ಪೋಷಕರಾದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಪ್ರತಿಷ್ಠಿತ ಹಿದಾಯತ್ ಗ್ರೂಪ್ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, ಇನ್ನೋರ್ವ ಖ್ಯಾತ ಅನಿವಾಸಿ ಉದ್ಯಮಿ, ಸಮಾಜ ಸೇವಕ, ದುಬೈಯ ನ್ಯಾಶ್ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ಕೆ.ಎಸ್. ನಿಸಾರ್ ಅಹ್ಮದ್ ಹಾಗು ‘ಸಾಹೇಬಾನ್’ ಯುಎಇಯ ಸಂಚಾಲಕ H.M.ಆಫ್ರೋಝ್ ಅಸ್ಸಾದಿ ಅವರು ಸಾಧಕರನ್ನು ಸನ್ಮಾನಿಸಿ ಅಭಿನಂದಿಸಿದರು.



ಉದ್ಯಮ ಕ್ಷೇತ್ರದಲ್ಲಿ ಅಬುಧಾಬಿಯ ಅಲ್ ಸಿತಾರಾ ಕಾಂಟ್ರಾಕ್ಟಿಂಗ್’ನ ಸ್ಥಾಪಕ ಹಾಗೂ ಸಿಎಂಡಿ ಮೊಹಮ್ಮದ್ ಅಕ್ರಂ ಅವರಿಗೆ ‘Sahebaan Business Excellence Award’ ನೀಡಿ ಗೌರವಿಸಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸೂಪರ್ ಬೈಕ್ ರೇಸಿಂಗ್’ನಲ್ಲಿ ಅಮೋಘ ಸಾಧನೆ ಮಾಡುತ್ತಿರುವ ಕಾರ್ಕಳದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗೂ DSBK ಸೂಪರ್ ಬೈಕ್ ರೇಸಿಂಗ್ ಕಂಪೆನಿಯ ನಾಸಿರ್ ಸೈಯದ್ ಅವರಿಗೆ ‘Sahebaan Sports Excellence Award’ ನೀಡಿ ಗೌರವಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಖ್ಯಾತ ವಿದ್ವಾಂಸ, ಸಾಮಾಜಿಕ ಚಿಂತಕ ದಿವಂಗತ ಪ್ರೊ.ಮುಝಫರ್ ಹುಸೇನ್ ಅಸ್ಸಾದಿ ಅವರಿಗೆ ‘Sahebaan Academic Excellence Award’ ನೀಡಲಾಗಿದ್ದು, ಅವರ ಸಹೋದರ ಸಜ್ಜಾದ್ ಅಸ್ಸಾದಿ ಪ್ರಶಸ್ತಿ ಸ್ವೀಕರಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಹಿತಿ, ಲೇಖಕ ಇರ್ಷಾದ್ ಮೂಡಬಿದ್ರೆ ಅವರಿಗೆ ‘Sahebaan Literary Excellence Award ‘ ನೀಡಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಪ್ರಶಸ್ತಿ ಸ್ವೀಕರಿಸಿದರು.
ಸಮುದಾಯ ಕಲ್ಯಾಣ ಕ್ಷೇತ್ರದಲ್ಲಿ ಅಬುಧಾಬಿಯ ಮೊಹಮ್ಮದ್ ಆಸಿಫ್ ಹಾಗು ಅವರ ಪತ್ನಿ ಸಹಾರ ಮೊಹಮ್ಮದ್ ಆಸಿಫ್ ಅವರಿಗೆ ‘Sahebaan Community Service
Excellence Award ‘ಪ್ರಶಸ್ತಿ ನೀಡಲಾಗಿದ್ದು, ಅವರ ಅನುಪಸ್ಥಿತಿಯಲ್ಲಿ ಪುತ್ರ ಅಹದ್ ಪ್ರಶಸ್ತಿ ಸ್ವೀಕರಿಸಿದರು.







ಸಾಧಕ ಮಕ್ಕಳಿಗೆ ‘Sahebaan Merit Award’
ಇದೇ ವೇಳೆ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ ಯುಎಇಯಲ್ಲಿ ಕಲಿಯುತ್ತಿರುವ ಸಾಹೇಬಾನ್ ಸಮುದಾಯದ ಮಕ್ಕಳನ್ನು ಗುರುತಿಸಿ ಸನ್ಮಾನಿಸಿ, ಗೌರವಿಸಲಾಯಿತು. ಎಸ್ಸೆಸ್ಸೆಲ್ಲಿಯಲ್ಲಿ 94.2% ಅಂಕ ಗಳಿಸಿದ ಫೈಝ ಅನಮ್, 92.6% ಅಂಕಗಳಿಸಿದ ಮೊಹಮ್ಮದ್ ರಯಾನ್, 90.8% ಅಂಕಗಳಿಸಿದ ಮೊಹಮ್ಮದ್ ಉಮೈರ್ ಸುವೈದ್ ಖಾನ್ ಅವರನ್ನು ‘Sahebaan Merit Award’ ನೀಡಿ ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿಯಲ್ಲಿ 90%ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ‘Sahebaan Merit Award’ ನೀಡಿ ಸನ್ಮಾನಿಸಲಾಯಿತು. 98.6% ಅಂಕಗಳಿಸಿದ ಮುಸ್ಕಾನ್ ಫಾತಿಮಾ(Gulf Topper -Commerce), 97.8% ಅಂಕಗಳಿಸಿದ ಜುವೇರಿಯಃ ಫಿರೋಝ್, 93.4% ಅಂಕಗಳಿಸಿದ ಸಿಹಾಮ್ ಅಕ್ಬರ್ ಅಲಿ, 92.8% ಅಂಕಗಳಿಸಿದ ಮೊಹಮ್ಮದ್ ರಫಾನ್ ಹಾಗು 92% ಅಂಕಗಳಿಸಿದ ಹಿಬಾ ಅಲ್ತಾಫ್ ಸಲಹ್ ಅವರನ್ನು ಸನ್ಮಾನಿಸಲಾಯಿತು.

















ಕ್ರೀಡಾ ಸಾಧಕ ಮಕ್ಕಳಿಗೆ ಸನ್ಮಾನ
ಮೊಹಮ್ಮದ್ ಐಮಾನ್(4X4 100 ಮೀಟರ್ ರಿಲೇ), ಮೊಹಮ್ಮದ್ ಐಝ್(DOFA- ಫುಟ್ಬಾಲ್ ಅಸೋಸಿಯೇಷನ್) ಅವರನ್ನು ಈ ವೇಳೆ ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ‘ಸಾಹೇಬಾನ್’ ಪೋಷಕರಾದ ಖ್ಯಾತ ಉದ್ಯಮಿ, ಹಿದಾಯತ್ ಗ್ರೂಪ್ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, ಇನ್ನೋರ್ವ ಖ್ಯಾತ ಅನಿವಾಸಿ ಉದ್ಯಮಿ, ಸಮಾಜ ಸೇವಕ, ದುಬೈಯ ನ್ಯಾಶ್ ಇಂಜಿನಿಯರಿಂಗ್ ಸಂಸ್ಥೆಯ ಮಾಲಕ ಕೆ.ಎಸ್. ನಿಸಾರ್ ಅಹ್ಮದ್ ಹಾಗು ‘ಸಾಹೇಬಾನ್’ ಯುಎಇಯ ಸಂಚಾಲಕ H.M.ಅಫ್ರೋಝ್ ಅಸ್ಸಾದಿ ಅವರನ್ನು ಕೂಡ ಈ ವೇಳೆ ಸ್ಮರಣಿಕೆ, ಹೂಗುಚ್ಛ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
‘ಸಾಹೇಬಾನ್’ ಯುಎಇ ಘಟಕದ ಸದಸ್ಯರು ಹಾಗೂ ಕಾರ್ಯಕ್ರಮದ ಕಾರ್ಯಕಾರಿ ಸಮಿತಿಯ ಸುಹೈಲ್ ಕುದ್ರೋಳಿ ಅವರು ಹಿದಾಯತುಲ್ಲಾ ಅಬ್ಬಾಸ್ ಅವರ ಬಗ್ಗೆ, ಅಲ್ತಾಫ್ ಖಲೀಫೆ ಅವರು ಕೆ.ಎಸ್. ನಿಸಾರ್ ಅಹ್ಮದ್ ಅವರ ಬಗ್ಗೆ ಹಾಗು ಮೊಹಮ್ಮದ್ ಸಮೀಉಲ್ಲಾ ಅವರು H.M.ಅಫ್ರೋಝ್ ಅಸ್ಸಾದಿ ಅವರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.






ಕಾರ್ಯಕ್ರಮದಲ್ಲಿ 10 ವರ್ಷದೊಳಗಿನ ಮಕ್ಕಳಿಗೆ ‘ರಾಜಕುಮಾರ ಮತ್ತು ರಾಜಕುಮಾರಿ’ ವೇಷ-ಭೂಷಣ(Prince and Princess), ಭಾರತೀಯ ದೇಶಭಕ್ತಿ ಗೀತೆಗಳ ನೃತ್ಯ, ಅರೆಬಿಕ್ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಪ್ರದರ್ಶನ ಗೊಂಡವು.
‘ಸಾಹೇಬಾನ್’ ಕುರಿತ ಕಿರುಚಿತ್ರವನ್ನು ಈ ವೇಳೆ ಕಾರ್ಯಕ್ರಮದಲ್ಲಿ LED ಮೂಲಕ ಬಿತ್ತರಿಸಲಾಯಿತು. ‘ಸಾಹೇಬಾನ್’ನ ಅಲ್ತಾಫ್ MS ಸ್ವಾಗತಿಸಿದರು. ಮೊಹಮ್ಮದ್ ಫಾಯಿಝ್ ಹಾಗು ಫಾಝಿಲ್ ರಾಹಿಲ್ ಅಲಿ ಕಿರಾತ್ ಪಠಿಸಿದರು. ಮಂಗಳೂರಿನಿಂದ ಬಂದಿದ್ದ ಹಿಸ್ರಾರ್ ತಲ್ಲನಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ಮಕ್ಕಳ ಕಾರ್ಯಕ್ರಮದ ಸಂಯೋಜಕರಾಗಿ ರೀಹಾ ಅಲ್ತಾಫ್ (Prince and Princess Coordinator), ಹೀನಾ ಕೌಸರ್(Indian Patriotic Dance Coordinator), ಫೌಝಿಯಾ ರಾಹಿಲ್(Arabic Dance Coordinator), ಫೌಝಿಯಾ ಶಾ(Dua Coordinator) ಸಹಕರಿಸಿದರು.
ಸಂಘಟಕರಾದ ಅಲ್ತಾಫ್ M.S., ಅಜ್ಮಲ್ ಮೊಹಮ್ಮದ್, ಅಲ್ತಾಫ್ ಖಲೀಫೆ, ಮೊಹಮ್ಮದ್ ಸಮೀಉಲ್ಲಾ, ಸುಹೈಲ್ ಕುದ್ರೋಳಿ, ಆಸೀಫ್ ಮೊಹಮ್ಮದ್ ಹುಸೈನ್, ಸಮೀರ್ ಷರೀಫ್, ನಯೀಮ್ ಖಾನ್, ಅಬ್ದುಲ್ ಅಹೆದ್, ಫೈಝನ್ ಖತೀಬ್ ಹಾಗು ಮಹಿಳಾ ಸಂಘಟಕರಾಗಿ ಪರ್ವೀನ್ ಅಸ್ಸಾದಿ, ಸಹರ ಆಸೀಫ್ ಹಾಗು ರೀನಾ ಅಲ್ತಾಫ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕರಿಸಿದರು.