ದುಬೈ: ಯುಎಇ, ಸೌದಿ ಅರೇಬಿಯಾ, ಬಹರೈನ್, ಖತರ್, ಕುವೈತ್ ಸೇರಿದಂತೆ ಗಲ್ಫ್’ನಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ರವಿವಾರ ಬಹಳ ಸಂಭ್ರಮ-ಸಡಗರದಿಂದ ಆಚರಿಸಲಾಯಿತು.

ಯುಎಇಯ ದುಬೈ, ಅಬುಧಾಬಿ, ಶಾರ್ಜಾ, ಅಜ್ಮಾನ್, ಉಮ್ ಅಲ್ ಖುವೈನ್, ಫುಜೈರಃ, ರಾಸ್ ಅಲ್ ಖೈಮಃದಲ್ಲಿ ಬೆಳಗ್ಗೆ ಎಲ್ಲ ಈದ್ಗಾ, ಮಸೀದಿಗಳಲ್ಲಿ ಈದ್ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಈದ್ ಅಲ್ ಫಿತ್ರ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಗಲ್ಫ್ ರಾಷ್ಟ್ರವಾದ ಒಮಾನ್ ಹಾಗು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಇಂಡೋನೇಷ್ಯಾ, ಇರಾಕ್, ಜೋರ್ಡನ್, ಸಿರಿಯಾ, ಈಜಿಪ್ಟ್, ಲಿಬಿಯಾ, ಟುನೀಶಿಯ, ಆಲ್ಜೀರಿಯಾ, ಬ್ರೂನಿ, ಮಲೇಷ್ಯಾ, ಇರಾನ್, ಮೊರಾಕೊ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಬೇರೆಬೇರೆ ದೇಶಗಳಲ್ಲಿ ನಾಳೆ(ಸೋಮವಾರ) ಈದ್ ಅಲ್ ಫಿತ್ರ್ ಹಬ್ಬವನ್ನು ಆಚರಿಸಲಾಗುತ್ತಿದೆ.