ರಿಯಾದ್ : ಸೌದಿ ಅರೇಬಿಯಾದಲ್ಲಿ ಶನಿವಾರ ಸಂಜೆ ಶವ್ವಾಲ್ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ರವಿವಾರ ಈದ್ ಉಲ್ ಫಿತರ್ ಆಚರಣೆ ಮಾಡಲಾಗುವುದು ಎಂದು ಸೌದಿ ಆರೇಬಿಯಾದ ಅಧಿಕೃತ ಸುದ್ದಿ ಸಂಸ್ಥೆ ಇನ್ ಸೈಡ್ ಹರಮೈನ್ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಘೋಷಣೆಯಾದ ಬೆನ್ನಲ್ಲೇ ಬಹರೈನ್, ಯುಎಇ, ಕತಾರ್ ಹಾಗೂ ಕುವೈತ್ ಗಳಲ್ಲಿ ಆದಿತ್ಯವಾರದಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ.