ಯುಎಇಅಬುಧಾಬಿಯ ಬಿಗ್ ಟಿಕೆಟ್‌ನಲ್ಲಿ 70 ಕೋಟಿ ರೂ. ಗೆಲ್ಲುವ...

ಅಬುಧಾಬಿಯ ಬಿಗ್ ಟಿಕೆಟ್‌ನಲ್ಲಿ 70 ಕೋಟಿ ರೂ. ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಭಾರತೀಯ ಮೂಲದ ನರ್ಸ್!

ಉಚಿತ ಟಿಕೆಟಿನಿಂದ ಗೆದ್ದ ಬಂಪರ್ ಬಹುಮಾನ!

ದುಬೈ: 2025ರ ಮೊದಲ ‘ಅಬುಧಾಬಿಯ ಬಿಗ್ ಟಿಕೆಟ್ ರಾಫೆಲ್ ಡ್ರಾ’ದಲ್ಲಿ ಬಹರೈನ್’ನಲ್ಲಿರುವ ಭಾರತೀಯ ಮೂಲದ ನರ್ಸ್’ವೊಬ್ಬರು 30 ಮಿಲಿಯನ್ (ರೂ.70,05,91,200) ದಿರ್ಹಂ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.

ಈ ಬೃಹತ್ ಮೊತ್ತವನ್ನು ಗಳಿಸಿರುವುದು ಬಹರೈನ್’ನಲ್ಲಿ ಅಂಬ್ಯುಲೆನ್ಸ್’ವೊಂದರಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಮೂಲದ ಮನು ಮೋಹನನ್. ಅವರು ಡಿಸೆಂಬರ್ 26ರಂದು ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್ ಸಂಖ್ಯೆ 535948ಗೆ ಈ ಬೃಹತ್ ಮೊತ್ತದ ಹಣ ಸಿಕ್ಕಿದೆ. ಆನ್‌ಲೈನ್‌ನಲ್ಲಿ ಖರೀದಿಸಿದ 2 ಟಿಕೆಟ್’ಗೆ 1 ಟಿಕೆಟ್ ಉಚಿತವಾಗಿ ಸಿಕ್ಕಿದ್ದು, ಈ ಉಚಿತ ಟಿಕೆಟಿಗೆ ರಾಫೆಲ್ ಡ್ರಾದಲ್ಲಿ ಹಣ ಬಂದಿರುವುದು ಅವರ ಅದೃಷ್ಟ ಖುಲಾಯಿಸುವಂತೆ ಮಾಡಿದೆ.

ಕಳೆದ 7 ವರ್ಷಗಳಿಂದ ಬಹರೈನ್‌ನಲ್ಲಿ ನೆಲೆಸಿರುವ ಮೋಹನನ್, 5 ವರ್ಷಕ್ಕೂ ಹೆಚ್ಚು ಸಮಯದಿಂದ ಅಬುಧಾಬಿಯ ಬಿಗ್ ಟಿಕೆಟ್ ರಾಫೆಲ್ ಡ್ರಾದ ಟಿಕೆಟನ್ನು ತಮ್ಮ ಸ್ನೇಹಿತರೊಂದಿಗೆ ಸೇರಿ ಖರೀದಿಸುತ್ತಿದ್ದರು. ಡಿಸೆಂಬರ್ 26ರಂದು ತಮ್ಮ ಇತರ 16 ಮಂದಿ ಸ್ನೇಹಿತರೊಂದಿಗೆ ಹಣವನ್ನು ಒಟ್ಟುಗೂಡಿಸಿ ಆನ್‌ಲೈನ್‌ನಲ್ಲಿ 2 ಟಿಕೆಟ್ ಖರೀದಿಸಿದ್ದರು. ಅದರಲ್ಲಿ 1 ಟಿಕೆಟ್ ಉಚಿತವಾಗಿ ಸಿಕ್ಕಿತ್ತು. ಉಚಿತವಾಗಿ ಸಿಕ್ಕಿದ ಟಿಕೆಟ್ ಸಂಖ್ಯೆ 535948ಗೆ ಜಾಕ್ ಪಾಟ್ ಹಣ ಸಿಕ್ಕಿದೆ. ಅವರಿಗೆ ಸಿಕ್ಕಿರುವ 70 ಕೋಟಿ ರೂ.ಹಣವನ್ನು ಮನು ಮೋಹನ್ ಅವರು ಇತರ 16 ಮಂದಿಯೊಂದಿಗೆ ಹಂಚಿಕೊಳ್ಳಲಿದ್ದಾರೆ.

ಬಿಗ್ ಟಿಕೆಟ್ ರಾಫೆಲ್ ಡ್ರಾ ಘೋಷಣೆ ಆಗುತ್ತಿದ್ದಂತೆಯೇ ಕಾರ್ಯಕ್ರಮ ನಿರೂಪಕರು ಕರೆ ಮಾಡಿದಾಗ ಆಶ್ಚರ್ಯಗೊಂಡ ಮನು ಮೋಹನನ್, ನನಗೆ ಇಷ್ಟು ದೊಡ್ಡ ಮೊತ್ತದ ಹಣ ಗೆದ್ದಿರುವುದನ್ನು ನಂಬಲು ಆಗುತ್ತಿಲ್ಲ. ನಾನು 5 ವರ್ಷಗಳಿಂದ ಸುಮಾರು 15-16 ಸ್ನೇಹಿತರೊಂದಿಗೆ ಟಿಕೆಟ್ ಖರೀದಿಸುತ್ತಿದ್ದೇನೆ. ಈಗ ನನ್ನ ಅದೃಷ್ಟ ಖುಲಾಯಿಸಿದೆ ಎಂದು ಸಂತಸಪಟ್ಟರು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories