ಬಹರೈನ್: ‘ಬಹರೈನ್ ಕನ್ನಡ ಸಂಘ’ದ 2025-26ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರಾಗಿ ಅಜಿತ್ ಬಂಗೇರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಹೊಸದಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿ
ಉಪಾಧ್ಯಕ್ಷರು: ನಿತಿನ್ ಶೆಟ್ಟಿ
ಪ್ರಧಾನ ಕಾರ್ಯದರ್ಶಿ: ರಾಮಪ್ರಸಾದ್ ಅಮ್ಮೆನಡ್ಕ
ಜೊತೆ ಕಾರ್ಯದರ್ಶಿ: ಹರಿನಾಥ ಸುವರ್ಣ
ಕೋಶಾಧಿಕಾರಿ: ಈಶ್ವರ್ ಅಂಚನ್
ಜೊತೆ ಖಜಾಂಚಿ: ಪುಲಿಕೇಶಿ
ಸಾಂಸ್ಕೃತಿಕ ಕಾರ್ಯದರ್ಶಿ: ಹರಿಣಿ ಉತ್ಕರ್ಷ ಶೆಟ್ಟಿ
ಸಹಾಯಕ ಸಾಂಸ್ಕೃತಿಕ ಕಾರ್ಯದರ್ಶಿ: ಹರೀಶ್ ಗೌಡ
ಕ್ರೀಡಾ ಕಾರ್ಯದರ್ಶಿ: ನಿತೇಶ್ ಶೆಟ್ಟಿ
ಸಮಿತಿ ಸದಸ್ಯರು:
ಲೋಕೇಶ್ ಸಮಯ್
ಹರಿಶ್ಚಂದ್ರಗೌಡ
ಪುರುಷೋತ್ತಮ ಜೋಗಿ

ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಅಜಿತ್ ಬಂಗೇರ, ಹೊಸ ಸಮಿತಿಯ ಮೇಲೆ ಸದಸ್ಯರು ಇಟ್ಟಿರುವ ನಂಬಿಕೆಗೆ ಕೃತಜ್ಞತೆ ಸಲ್ಲಿಸಿದರಲ್ಲದೆ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಉನ್ನತಿಗಾಗಿ ಸಂಘ ಕಟಿಬದ್ಧವಾಗಿದೆ ಎಂದರು.

ಕನ್ನಡ ಸಂಘ ಬಹರೈನ್’ನಲ್ಲಿ ಸೇವೆ ಮಾಡಲು ಆಯ್ಕೆಯಾಗಿರುವುದು ನಮಗೆ ಬಹಳ ಹೆಮ್ಮೆಯ ವಿಷಯ. ಹಿಂದಿನ ಸಮಿತಿಯ ಅತ್ಯುತ್ತಮ ಕಾರ್ಯವನ್ನು ಮುಂದುವರೆಸಲು ಮತ್ತು ನಮ್ಮ ಸಮುದಾಯದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು, ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು ಮತ್ತು ನಮ್ಮ ಎಲ್ಲಾ ಸದಸ್ಯರಿಗೆ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಈ ವೇಳೆ ನಿರ್ಗಮಿತ ಅಧ್ಯಕ್ಷ ಅಮರನಾಥ್ ರೈ ತನ್ನ ಅವಧಿಯಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ವಿವರಿಸಿ, ನೂತನ ಸಮಿತಿಗೆ ಶುಭ ಹಾರೈಸಿದರು.