ಮಸ್ಕತ್: ಕರ್ನಾಟಕ ಸಂಘ ಮಸ್ಕತ್ತಿನ ಕನ್ನಡ ಶಾಲೆಯ 2024-2025 ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆ ಗುರುವಾರ ಯಶಸ್ವಿಯಾಗಿ ನಡೆಯಿತು.


ಇಂದು ಬೆಳಗ್ಗೆ ಬೆಳಗ್ಗೆ10.30 ರಿಂದ 1ರ ವರಗೆ ಮಸ್ಕತ್’ನ ಅಲ್ ಘುಬ್ರ ಆರ್ಟ್ ಲಿವಿಂಗ್ ಪ್ರೈವೇಟ್ ಸ್ಕೂಲ್’ನಲ್ಲಿ ನಡೆದ ಶೈಕ್ಷಣಿಕ ವರ್ಷದ(2024-25)ವಾರ್ಷಿಕ ಪರೀಕ್ಷೆಯಲ್ಲಿ ಸುಮಾರು 120 ಕ್ಕೂ ಅಧಿಕ ಮಕ್ಕಳು ಪರೀಕ್ಷೆ ಬರೆದಿದ್ದಾರೆ.
ಮಕ್ಕಳಿಗೆ ವರ್ಷದುದಕ್ಕೂ ಕನ್ನಡ ಓದಲು ಹಾಗು ಬರೆಯಲು ಕಲಿಸಿಕೊಟ್ಟು ಪರೀಕ್ಷೆ ಬರೆಯಲು ಶ್ರಮಿಸಿದ ಎಲ್ಲ ಶಿಕ್ಷಕಿಯರಿಗೂ ಕರ್ನಾಟಕ ಸಂಘ ಮಸ್ಕತ್ ಅಧ್ಯಕ್ಷ ಮಂಜುನಾಥ್ ಸಂಗಟಿ ಹಾಗು ಆಡಳಿತ ಮಂಡಳಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.





