ಯುಎಇದುಬೈಯಲ್ಲಿ 'ಕೆಐಸಿ ಗ್ರ್ಯಾಂಡ್ ಇಫ್ತಾರ್' ಕೂಟ; ಸಂಘ-ಸಂಸ್ಥೆಗಳಿಗೆ ಸನ್ಮಾನ

ದುಬೈಯಲ್ಲಿ ‘ಕೆಐಸಿ ಗ್ರ್ಯಾಂಡ್ ಇಫ್ತಾರ್’ ಕೂಟ; ಸಂಘ-ಸಂಸ್ಥೆಗಳಿಗೆ ಸನ್ಮಾನ

ದುಬೈ: ಕರ್ನಾಟಕ ಇಸ್ಲಾಮಿಕ್ ಸೆಂಟರ್(ಕೆಐಸಿ) ಯುಎಇ ನ್ಯಾಷನಲ್ ಕಮಿಟಿ ವತಿಯಿಂದ ರವಿವಾರ ದುಬೈಯ ಔದ್ ಮೆಥಾದ ಪಾಕಿಸ್ತಾನ ಅಸೋಸಿಯೇಶನಿನಲ್ಲಿ ‘ಕೆಐಸಿ ಗ್ರ್ಯಾಂಡ್ ಇಫ್ತಾರ್’ ಕೂಟವನ್ನು ಆಯೋಜಿಸಲಾಗಿತ್ತು.

ಇಫ್ತಾರ್ ಕೂಟಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಖ್ಯಾತ ವಾಗ್ಮಿ ಎ.ಎಂ.ನೌಶಾದ್ ಬಾಖವಿ ಅವರು ಉಪವಾಸ ವೃತ ಹಾಗು ಇಸ್ಲಾಮಿನ ಕುರಿತಂತೆ ಮಾತನಾಡಿದರು. ಕರ್ನಾಟಕ ಇಸ್ಲಾಮಿಕ್ ಸೆಂಟರ್(ಕೆಐಸಿ) ಯುಎಇ ನ್ಯಾಷನಲ್ ಕಮಿಟಿಯ ಹಾಜಿ ಮೊಯಿದಿನ್ ಕುಟ್ಟಿ ದಿಬ್ಬ ಉದ್ಘಾಟನಾ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದುಬೈಯ ವಿಐಪಿ ಎಮಿಗ್ರಷನ್ ಆಫೀಸರ್ ಫಾರಿಷ್ ಯೂಸುಫ್ ತಾನಿ ಅಲ್ ಸುವೈದಿ, ದುಬೈ ಸಿಐಡಿ ಪೊಲೀಸ್ ಆಫೀಸರ್ ಸಲೀಮ್ ಅವಧ್ ಜುಮಾ ಅಲ್ ಸುವೈದಿ, ದುಬೈ ಕೋರ್ಟಿನ ನ್ಯಾಯಾಧೀಶ ಮೊಹಮ್ಮದ್ ಹಸ್ಸನ್ ಮೊಹಮ್ಮದ್, ದುಬೈ ಸಿವಿಲ್ ಡಿಫೆನ್ಸಿನ ಹಿರಿಯ ಅಧಿಕಾರಿ ರಾಶಿದ್ ಒಬೈದ್ ಅಲ್ ಖಯ್ಯತ್ ಅಲ್ ಅಹ್ಲಿ, ದುಬೈಯ ಉದ್ಯಮಿ ಬೆಹನಂ ನದ್ದಾಫಿ, ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಅಧ್ಯಕ್ಷ ಹಿದಾಯತ್ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೇನ್, ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಮುಶ್ತಾಕ್ ಕದ್ರಿ, ಇಮ್ರಾನ್ ಎರ್ಮಾಳ್, ಹಂಝ, ಬಿಸಿಫ್ ಗೌರವ ಸಲಹೆಗಾರ, ಉದ್ಯಮಿ ಇಬ್ರಾಹಿಂ ಗಡಿಯಾರ್, ದುಬೈ ಬ್ಯಾರಿ ಕಲ್ಚರಲ್ ಫೋರಂನ(ಬಿಸಿಫ್) ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಉಪಾಧ್ಯಕ್ಷ ಎಂ.ಇ.ಮೂಳೂರು, ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮೊಹಮ್ಮದ್, ಚೀನಾದ ಉದ್ಯಮಿ ಯೂಸುಫ್ ಆವ್, ಅಬುಧಾಬಿಯ ಇಂಡಿಯಾ ಸೋಶಿಯಲ್ & ಕಲ್ಚರಲ್ ಸೆಂಟರ್ ಅಧ್ಯಕ್ಷ ಜಯರಾಮ್ ರೈ, ಉದ್ಯಮಿ ಮೊಹಮ್ಮದ್ ಸಲೀಂ ಮೂಡಬಿದ್ರೆ, ಪೀಟರ್, ಹೇಮಂತ್, ದುಬೈ ಕನ್ನಡ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಮಲ್ಲಿಕಾರ್ಜುನ ಗೌಡ, ದಯಾ ಕಿರೋಡಿಯನ್, ಸುಗಂದ್ ರಾಜ್ ಬೇಕಲ್, ನೋಯೆಲ್ ಅಲ್ಮೇಡಾ, ದೀಪಕ್ ಪೂಜಾರಿ, ಏಮ್ ಇಂಡಿಯಾ ಫೋರಂ ಸಂಸ್ಥಾಪಕ ಅಧ್ಯಕ್ಷ ಶಿರಾಲಿ ಶೇಖ್ ಮುಝಾಫರ್, ಕೆಪಿಸಿಸಿ ಮೈನಾರಿಟಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೇಖ್ ವಾಹಿದ್ ದಾವೂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಇಸ್ಲಾಮಿಕ್ ಸೆಂಟರ್(ಕೆಐಸಿ) ಯುಎಇ ನ್ಯಾಷನಲ್ ಕಮಿಟಿ ಅಧ್ಯಕ್ಷ ಅಶ್ರಫ್ ಶಾ ಮಾಂತೂರ್ ಎಲ್ಲರನ್ನು ಸ್ವಾಗತಿಸಿ, ಕೆಐಸಿ ಮಾಡುತ್ತಿರುವ ಮಾನವೀಯ ಸೇವೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಫ್ತಾರ್ ಕೂಟದ ಚ್ಯಾರ್ಮೆನ್ ಅಶ್ರಫ್ ಆರ್ತಿಕೆರೆ ವಂದಿಸಿದರು.

ಸಂಘ ಸಂಸ್ಥೆಗಳಿಗೆ ಸನ್ಮಾನ
ಈ ಸಂದರ್ಭದಲ್ಲಿ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ), ಚೀನಾದ ಉದ್ಯಮಿ ಯೂಸುಫ್ ಆವ್, ದುಬೈ ಬ್ಯಾರಿ ಕಲ್ಚರಲ್ ಫೋರಂ(ಬಿಸಿಫ್), ಜಯರಾಮ್ ರೈ, ಕನ್ನಡ ಸಂಘದ ಶಶಿಧರ್ ನಾಗರಾಜಪ್ಪ ಹಾಗು ಇತರರಿಗೆ, ದಾರುನ್ನೂರು ಹಾಗು ಸಮಸ್ತದ ಅಧೀನ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬದ್ರುದ್ದೀನ್ ಎಂತಾರು, ಡಾ.ಖಾಲಿದ್ ಶೇಖ್, ಯುಎಇ ಡಿಕೆಎಸ್ಸಿ ಸಂಸ್ಥೆ, ಕೊಂಕಣಿ ಸಮುದಾಯದ ಜೋಸೆಫ್ ಹಾಗು ಡಾ.ಶೇಖ್ ವಾಹಿದ್ ದಾವೂದ್ ಅವರನ್ನು ಸನ್ಮಾನಿಸಲಾಯಿತು.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories