ಯುಎಇ'ಸಾಹೇಬಾನ್' ಯುಎಇಯಿಂದ ಫೆಬ್ರವರಿ 15ರಂದು ದುಬೈಯಲ್ಲಿ 'ಕುಟುಂಬ ಸ್ನೇಹಕೂಟ';...

‘ಸಾಹೇಬಾನ್’ ಯುಎಇಯಿಂದ ಫೆಬ್ರವರಿ 15ರಂದು ದುಬೈಯಲ್ಲಿ ‘ಕುಟುಂಬ ಸ್ನೇಹಕೂಟ’; ಹಲವು ಸಾಧಕರಿಗೆ ಸನ್ಮಾನ

ದುಬೈ: ಯುಎಇ ‘ಸಾಹೇಬಾನ್’ ಸಮುದಾಯದ ಆಶ್ರಯದಲ್ಲಿ ಫೆಬ್ರವರಿ 15ರ ಶನಿವಾರದಂದು ದುಬೈಯ ಅಲ್ ಖಿಸೆಸ್ ಅಮಿಟಿ ಸ್ಕೂಲಿನಲ್ಲಿ ‘ಕುಟುಂಬ ಸ್ನೇಹಕೂಟ'(Family get-together) ಆಯೋಜಿಸಲಾಗಿದೆ.

‘ಸಾಹೇಬಾನ್’ ದಕ್ಷಿಣ ಕನ್ನಡ ಮತ್ತು ಉಡುಪಿಯ ಉರ್ದು ಮಾತನಾಡುವ ಮುಸ್ಲಿಂ ಸಮುದಾಯವಾಗಿದ್ದು, ಈ ‘ಕುಟುಂಬ ಸ್ನೇಹಕೂಟ’ವು ಸಂಜೆ 4ರಿಂದ ರಾತ್ರಿ 11ರ ವರಗೆ ನಡೆಯಲಿದ್ದು, ಹಲವು ಕಾರ್ಯಕ್ರಮಗಳು ಈ ವೇಳೆ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ, ಪೋಷಕ H.M.ಆಫ್ರೋಝ್ ಅಸ್ಸಾದಿ ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ 10 ವರ್ಷದೊಳಗಿನ ಮಕ್ಕಳಿಗೆ ‘ರಾಜಕುಮಾರ ಮತ್ತು ರಾಜಕುಮಾರಿ’ ವೇಷ-ಭೂಷಣ(Prince and Princess), ಮಕ್ಕಳಿಗೆ ನಾಥ್ ಸ್ಪರ್ಧೆ, ದೇಶಭಕ್ತಿ ಗೀತೆ, ಭಾಗವಹಿಸುವ ಕುಟುಂಬದವರಿಗೆ ಸ್ಪರ್ಧೆ, ಸೇರಿದಂತೆ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

5 ಮಂದಿ ಗಣ್ಯ ಸಾಧಕರಿಗೆ ಸನ್ಮಾನ
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಹಿತಿ ಇರ್ಷಾದ್ ಮೂಡಬಿದ್ರೆ, ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸೂಪರ್ ಬೈಕ್ ರೇಸಿಂಗ್’ನಲ್ಲಿ ಸಾಧನೆ ಮಾಡುತ್ತಿರುವ ನಾಸಿರ್ ಸೈಯದ್, ಬ್ಯುಸಿನೆಸ್ ಕ್ಷೇತ್ರದಲ್ಲಿ ಅಬುಧಾಬಿಯ ಅಲ್ ಸಿತಾರಾ ಕಾಂಟ್ರಾಕ್ಟಿಂಗ್’ನ ಮೊಹಮ್ಮದ್ ಅಕ್ರಂ, ಶೈಕ್ಷಣಿಕ ಕ್ಷೇತ್ರದಲ್ಲಿ ಖ್ಯಾತ ವಿದ್ವಾಂಸ, ಸಾಮಾಜಿಕ ಚಿಂತಕ ದಿವಂಗತ ಪ್ರೊ.ಮುಝಫರ್ ಹುಸೇನ್ ಅಸ್ಸಾದಿ ಹಾಗು ಸಮುದಾಯ ಕಲ್ಯಾಣ ಕ್ಷೇತ್ರದಲ್ಲಿ ಅಬುಧಾಬಿಯ ಮೊಹಮ್ಮದ್ ಆಸಿಫ್ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು H.M.ಆಫ್ರೋಝ್ ಅಸ್ಸಾದಿ ತಿಳಿಸಿದರು.

ಸಾಧಕ ಮಕ್ಕಳಿಗೂ ಸನ್ಮಾನ
ಯುಎಇಯಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಮಕ್ಕಳಿಗೆ ಹಾಗು ಕ್ರೀಡೆಯಲ್ಲಿ ಸಾಧನೆ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ‘ಸಾಹೇಬಾನ್’ ಪೋಷಕರಾದ ಉದ್ಯಮಿ, ಹಿದಾಯತ್ ಗ್ರೂಪ್ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, ಅನಿವಾಸಿ ಉದ್ಯಮಿ, ಸಮಾಜ ಸೇವಕ, ದುಬೈಯ ನ್ಯಾಶ್‌ ಇಂಜಿನಿಯರಿಂಗ್‌ ಸಂಸ್ಥೆಯ ಮಾಲಕ ಕೆ.ಎಸ್.‌ ನಿಸಾರ್‌ ಅಹ್ಮದ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories