ಒಮಾನ್ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 49 ಕೋಟಿ ರೂ....

ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 49 ಕೋಟಿ ರೂ. ಗೆದ್ದ ಉಡುಪಿಯ ಶಾಂತನು ಶೆಟ್ಟಿಗಾರ್!

ದುಬೈ: ಒಮಾನ್​​​ನಲ್ಲಿ ಕೆಲಸ ಮಾಡುತ್ತಿರುವ ಉಡುಪಿಯ ಕಟಪಾಡಿ ಮಟ್ಟು ಮೂಲದ ಶಾಂತನು ಶೆಟ್ಟಿಗಾರ್ ಅವರಿಗೆ ಅಬುದಾಬಿಯ ಬಿಗ್ ಟಿಕೆಟ್ ಡ್ರಾ (Abu Dhabi Big Ticket draw) ದಲ್ಲಿ 49 ಕೋಟಿ ರೂ.(Dh20 million) ಬಹುಮಾನ ಸಿಕ್ಕಿದೆ.

ಒಮಾನ್​​​ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್​​ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಾಂತನು ಶೆಟ್ಟಿಗಾರ್ ಅವರ ಅದೃಷ್ಟ ಖುಲಾಯಿಸಿದ್ದು, ಜನವರಿ 20ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಬಿಗ್‌ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಾಂತನು ಅವರು ಬರೋಬರಿ 49 ಕೋಟಿ ರೂ. ಬಹುಮಾನ ಗೆದ್ದುಕೊಂಡಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಒಮಾನ್ ರಾಜಧಾನಿ ಮಸ್ಕತ್ ನಲ್ಲಿ ನೆಲೆಸಿರುವ ಶಾಂತನು, ಪ್ರತಿ ತಿಂಗಳು ತನ್ನ ಆಪ್ತ ಸ್ನೇಹಿತನೊಂದಿಗೆ ಟಿಕೆಟ್ ಖರೀದಿಸುತ್ತಿದ್ದರು. ಬಹುಮಾನ ಸಿಕ್ಕಿರುವ ಸುದ್ದಿ ತಿಳಿದಾಗ ತಾನು ಮಾತೇ ಬರದಂತೆ ಅಚ್ಚರಿಗೊಂಡೆನು ಎಂದು ತನ್ನ ಸಂತಸವನ್ನು ಹಂಚಿಕೊಂಡಿದ್ದಾರೆ.

ಬಹುಮಾನದ ಮೊತ್ತವನ್ನು ತನ್ನ ಸ್ನೇಹಿತನ ಜೊತೆ ಹಂಚಿಕೊಳ್ಳಲು ನಿರ್ಧರಿಸಿದ್ದು, ಬಹುಮಾನದಿಂದ ಬಂದ ಹಣವನ್ನು ಹೇಗೆ ಬಳಸಬೇಕೆಂದು ಇದುವರೆಗೆ ಯೋಚಿಸಿಲ್ಲ ಎಂದಿದ್ದಾರೆ.

Hot this week

ಕರ್ನಾಟಕ ಸಂಘ ಶಾರ್ಜಾದ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ

ದುಬೈ: ಕರ್ನಾಟಕ ಸಂಘ ಶಾರ್ಜಾ ಇದರ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ರಮಝಾನ್-ಈದುಲ್ ಫಿತ್ರ್ ಅಂಗವಾಗಿ ಕನ್ನಡ ಸಂಘ ಬಹರೈನ್ ವತಿಯಿಂದ ಆಹಾರ ವಸ್ತುಗಳ ಕಿಟ್ ವಿತರಣೆ

ಬಹರೈನ್: ಪವಿತ್ರ ರಮಝಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಅಂಗವಾಗಿ ಪ್ರಸ್ತುತ...

400 ಭಾರತೀಯರನ್ನು ತಾಯ್ನಾಡಿಗೆ ಕಳುಹಿಸಿದ ಬಹರೈನ್ ಕನ್ನಡ ಸಂಘ!

ಬಹರೈನ್: ತಾಯ್ನಾಡಿಗೆ ಮರಳಲು ಬಯಸಿದ ಸುಮಾರು 400 ಭಾರತೀಯರಿಗೆ ಕನ್ನಡ ಸಂಘ...

ಗಲ್ಫ್ ಸಂಘರ್ಷದ ನಡುವೆಯೂ ಪ್ರಯಾಣಿಕರಿಗೆ ‘ಓಯಸಿಸ್’ ಆಗಿರುವ ಒಮಾನ್!

ಮಸ್ಕತ್: ಇರಾನ್–ಅಮೇರಿಕ ಸಂಘರ್ಷದ ಪರಿಣಾಮವಾಗಿ ಮಧ್ಯಪ್ರಾಚ್ಯದ ವಾಯುಪ್ರದೇಶದಲ್ಲಿ ಅನಿಶ್ಚಿತತೆ ಉಂಟಾದ ಹಿನ್ನೆಲೆಯಲ್ಲಿ...

ಜರ್ಮನಿ; ರೈನ್ ಮೈನ್ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಲೋಕನಾಥ ರಾವ್ ಚೌಹಾಣ್ ಆಯ್ಕೆ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದ ವಾರ್ಷಿಕ ಸಭೆಯು ಇತ್ತೀಚೆಗೆ ಜರ್ಮನಿಯ...

Related Articles

Popular Categories