ಇತರೆಜರ್ಮನಿ; ರೈನ್ ಮೈನ್ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ...

ಜರ್ಮನಿ; ರೈನ್ ಮೈನ್ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಲೋಕನಾಥ ರಾವ್ ಚೌಹಾಣ್ ಆಯ್ಕೆ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದ ವಾರ್ಷಿಕ ಸಭೆಯು ಇತ್ತೀಚೆಗೆ ಜರ್ಮನಿಯ ಫ್ರಾಂಕ್ಫರ್ಟ್ ನ ಸಾಲ್ಬೌ ರೋನೆಬರ್ಗ್ ನಲ್ಲಿ ನಡೆಯಿತು.

ಪ್ರತಿ 2 ವರ್ಷಕ್ಕೊಮ್ಮೆ ಸಂಘದ ಉಸ್ತುವಾರಿಯನ್ನು, ಹೊಸ ಸಮಿತಿಯನ್ನು ರಚಿಸಿ ಅವರಿಗೆ ಜವಾಬ್ದಾರಿಯನ್ನು ವರ್ಗಾಯಿಸುವುದು ನಿಯಮವಾಗಿದ್ದು, ಅದರಂತೆ ರೈನ್ ಮೈನ್ ಕನ್ನಡ ಸಂಘದ ನೂತನ ಸಮಿತಿಯ ಅಧ್ಯಕ್ಷರಾಗಿ ಲೋಕನಾಥ ರಾವ್ ಚೌಹಾಣ್ ಆಯ್ಕೆಯಾದರು.

ಸುಮಾರು 70ಕ್ಕಿಂತಲೂ ಅಧಿಕ ಸದಸ್ಯರು ಒಟ್ಟುಗೂಡಿ ಕಳೆದ 2 ವರ್ಷಗಳ ಕಾರ್ಯಕ್ರಮಗಳ ಬಗ್ಗೆ ಅವಲೋಕಿಸಿ, ಸುಂದರ ನೆನಪುಗಳ ಮೆಲುಕು ಹಾಕಿದರು. ಕಾರ್ಯಕ್ರಮಗಳ ಖರ್ಚು ವೆಚ್ಚಗಳ ಲೆಕ್ಕಾಚಾರದ ಚರ್ಚೆ ಮುಖ್ಯವಾಗಿ ನಡೆಯಿತು. ಹೊಸ ಸಮಿತಿಯ ಆಯ್ಕೆಗಾಗಿ ಮತದಾನದ ಮೇಲ್ವಿಚಾರಣೆ ವಿಶ್ವಾಸ್ ಭಟ್, ಸುನೀಲ್ ಪಾಟೀಲ್ ವಹಿಸಿಕೊಂಡಿದ್ದರು. ವಿರಾಜ್ ಬೇಕಲ್ ಹಾಗೂ ಪ್ರಿಯಾಂಕ ವಿನಯ್ ಅವರು ಮತ ಎಣಿಕೆಗೆ ಸಹಕರಿಸಿದರು.

ರೈನ್ ಮೈನ್ ಕನ್ನಡ ಸಂಘದ ನೂತನ ಉಪಾಧ್ಯಕ್ಷರಾಗಿ ಗುರುರಾಜ್ ಚಂದ್ರಶೇಖರ್, ಕಾರ್ಯದರ್ಶಿಯಾಗಿ ಮಂಜುನಾಥ್ ಷಡಕ್ಷರಯ್ಯ, ಜಂಟಿ ಕಾರ್ಯದರ್ಶಿಯಾಗಿ ವಿಜಯ್ ಹುಗ್ಗಿ, ಖಜಾಂಚಿಯಾಗಿ ಭರತ್ ಗಿರಿಯಾಪುರ, ಮಂಡಳಿಯ ಸದಸ್ಯರಾಗಿ ಗುಂಡು ರಾವ್ ಮತ್ತು ರಕ್ಷಿತ್ ಗೊಟ್ಟಕುಂಟೆ ಆಯ್ಕೆಯಾದರು.

ಸಮಿತಿಯ ನಿಕಟ ಪೂರ್ವ ಪದಾಧಿಕಾರಿಗಳಾದ ವೇದಕುಮಾರ್, ರಿಯಾಜ್ ಶಿರಸಂಗಿ, ಅಕ್ಷಯ್ ಕಬಾಡಿ, ಲೋಕನಾಥ್, ವಿಶ್ವನಾಥ್ ಬಾಳೆಕಾಯಿ, ಜಯಂತ್ ಬದ್ರಿ, ಸಹಕಾರ್ಯಕಾರಿ ಸಮಿತಿಯ ಪೂಜಾ ಚಿರಂತ್, ವಿಶ್ವಾಸ್ ಭಟ್, ವೆಂಕಟೇಶ್ ಬಿರಾದರ್, ಗಣೇಶ್ ಇಟಗಿ, ಗುಂಡು ರಾವ್ ಅವರು ಉಪಸ್ಥಿತರಿದ್ದು, ವಾರ್ಷಿಕ ಸಭೆಯು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕರಿಸಿದರು.

ಪ್ರತೀ 2 ವರ್ಷಕ್ಕೊಮೆ ಹೊಸದೊಂದು ತಂಡ ಮುಂದೆ ಬಂದು ತನ್ನ ನಿರಂತರತೆಯನ್ನು ಸದಾ ಸದಸ್ಯರ ಬೇಡಿಕೆಗಳಂತೆ ಮುಂದುವರೆಸಿಕೊಂಡು ಬರುತ್ತಿದೆ. ಹೊಸ ಹುರುಪು, ಹುಮ್ಮಸ್ಸಿನಿಂದ ಬಂದ ತಂಡಕ್ಕೆ ಶುಭ ಹಾರೈಸಿ ಎಲ್ಲರು ವರ್ಗಾಯಿಸಿಕೊಟ್ಟರು

ವರದಿ: ಶೋಭಾ ಚೌಹಾಣ್, ಫ್ರಾಂಕ್ಫರ್ಟ್, ಜರ್ಮನಿ

Hot this week

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ...

Related Articles

Popular Categories