ದುಬೈ: ಬಹು ನಿರೀಕ್ಷಿತ ‘ಯುನೈಟೆಡ್ ಕಾಪು ಟ್ರೋಫಿ- ಸೀಸನ್ 6’ ಫೆಬ್ರವರಿ 16ರಂದು ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಯೋರ್ಕರ್ ಎಫ್‌ಎಕ್ಸ್ ಪ್ರಸ್ತುತಿಯ ಯುನೈಟೆಡ್ ಕಾಪು ಯುಎಇ ಆಶ್ರಯದಲ್ಲಿ ಶಾಫಿ, ಫೈಸಲ್ ಕಾಪು, ಅಡಿಲ್ ಕಾಪು, ಆಶಿಕ್ ಕಾಪು, ಮತ್ತು ಶಕೀರ್ ವಿಟ್ಲ ಅವರ ನೇತೃತ್ವದಲ್ಲಿ, ಈ ಕ್ರಿಕೆಟ್ ಪಂದ್ಯಾಕೂಟ ನಡೆಯುತ್ತಿದ್ದು, ಇದರಲ್ಲಿ ಯುಎಇಯ ಹಲವು ತಂಡಗಳು ಪಾಲ್ಗೊಳ್ಳುತ್ತಿವೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ದುಬೈಯ ಅಲ್ ಖಿಸೆಸ್ಸ್ ನಲ್ಲಿನ ದಿ ಸ್ವಾಗತ್ ರೆಸ್ಟೋರೆಂಟ್(Dhe Swagat Restaurant Qusais)ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ‘ಯುನೈಟೆಡ್ ಕಾಪು ಟ್ರೋಫಿ’ ಅನಾವರಣ, ಕ್ರಿಕೆಟ್ ತಂಡಗಳ ಜೆರ್ಸಿ(ಟಿ-ಶರ್ಟ್) ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ವಿವಿಧ ತಂಡಗಳ ಮಾಲೀಕರು, ನಾಯಕರು ಹಾಜರಿದ್ದರು.



ಈ ವರ್ಷ ಹತ್ತು ಬಲಾಢ್ಯ ತಂಡಗಳು ಚಾಂಪಿಯನ್ ಶಿಪ್ ಗೆದ್ದುಕೊಳ್ಳಲು ಹೋರಾಟ ನಡೆಸಲಿವೆ. ಅಲ್ ಸಿತಾರಾ ಫ್ರೆಂಡ್ಸ್ ಉಡುಪಿ, ಎಂಕಾನ್, ಬ್ಲಿಟ್ಜ್ ವಾರಿಯರ್ಸ್, ಡಿಜೆಎಸ್ ನವೀನ್ ಇಲೆವೆನ್ ಕ್ರಿಕೆಟರ್ಸ್, ಡೋನಿಯಾ ಬ್ರದರ್ಸ್, ಫ್ರೆಂಡ್ಸ್ ಕಾಪು, ಕಟೀಲ್ ಫ್ರೆಂಡ್ಸ್, ನವಚೇತನಾ ಫ್ರೆಂಡ್ಸ್, ಸೀ ಬಾಯ್ಸ್ ಮತ್ತು ವಿದ್ವರ್ ಬಾಯ್ಸ್. ಲೀಗ್-ಕಂ-ನಾಕೌಟ್ ಮಾದರಿಯಲ್ಲಿ ಪ್ರತಿ ತಂಡವು ಎರಡು ಲೀಗ್ ಪಂದ್ಯಗಳನ್ನು ಆಡಿದ ನಂತರ ನಾಕೌಟ್ ಹಂತಕ್ಕೆ ತೇರ್ಗಡೆಯಾಗುತ್ತದೆ.
ಟೂರ್ನಮೆಂಟ್ ವಿಜೇತ ಚಾಂಪಿಯನ್ಸ್ ತಂಡಕ್ಕೆ AED12,000 ಮತ್ತು ರನ್ನರ್ಸ್-ಅಪ್‌ಗೆ AED 6,000 ಬಹುಮಾನ ನೀಡಲಾಗುತ್ತದೆ, ಜೊತೆಗೆ ಭಾರತದಲ್ಲಿ ವಿಶೇಷವಾಗಿ ತಯಾರಿಸಲಾದ ಕಸ್ಟಮೈಸ್‌ಡ್ ಕ್ರಿಸ್ಟಲ್ ಟ್ರೋಫಿ ನೀಡಲಾಗುತ್ತದೆ. ಈ ಪಂದ್ಯಾಟ ಪ್ರೇಕ್ಷಕರನ್ನು ಹೆಚ್ಚಿನ ರೋಚಕ ಅನುಭವಕ್ಕೆ ಕೊಂಡೊಯ್ಯಲು ಪ್ರೇಕ್ಷಕ ರೇಫಲ್ ಡ್ರಾವನ್ನು ಆಯೋಜಿಸಲಾಗಿದೆ.







ಹಲವು ವರ್ಷಗಳಿಂದ ‘ಯುನೈಟೆಡ್ ಕಾಪು ಟ್ರೋಫಿ’ಯನ್ನು ಆಯೋಜಿಸಲಾಗುತ್ತಿದ್ದು, ಹಿಂದಿನ ಚಾಂಪಿಯನ್‌ಗಳ ವಿವರ:
ಹೀಟ್‌ಶೀಲ್ಡ್ ಕಟೀಲ್ (2020), ಟೀಮ್ ಎಕ್ಸ್ಪರ್ಟ್ (2021), ಟೀಮ್ ಎಲೆಗಂಟ್ (2022), ಕಟೀಲ್ ಫ್ರೆಂಡ್ಸ್ (2023)7 ಮತ್ತು ಡಿಜೆಯಸ್ ನವೀನ್ ಇಲೆವೆನ್ (2024). ಈ ವರ್ಷದ ಸೀಸನ್ 6 ಪಂದ್ಯಾಟ ಕ್ರಿಕೆಟ್ ಪರಂಪರೆಯ ಮತ್ತೊಂದು ರೋಚಕ ಅಧ್ಯಾಯವನ್ನು ಬರೆಯಲಿದೆ.