ಯುಎಇದುಬೈ; ಯುಎಇ ಬಂಟ್ಸ್‌ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ...

ದುಬೈ; ಯುಎಇ ಬಂಟ್ಸ್‌ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ

ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಜಾತಿ ಸಂಘಟನೆಗಳಲ್ಲಿ ಹಿರಿಯ ಸಂಘಟನೆಯಾದ ಯುಎಇ ಬಂಟ್ಸ್ ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆಯು ಇತ್ತೀಚೆಗೆ ನಗರದ ಜೆ.ಎಸ್.ಎಸ್.ಇಂಟರ್ನ್ಯಾಷನಲ್ ಪ್ರೈವೇಟ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಯುಎಇ ಏಳು ಎಮಿರೇಟ್ಸ್ ಗಳ ಬಂಟ ಬಾಂಧವರು ಮತ್ತು ಯುಎಇಯ ತುಳು ಕನ್ನಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನಗೊಂಡಿತು.

ರಘು ಭಟ್ ಮತ್ತು ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ನಡೆದ ಪೂಜಾ ವಿಧಿ ವಿಧಾನಗಳನ್ನು ಯುಎಇ ಬಂಟ್ಸ್ ನ ಸುಮಂಗಲೆಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಾವಿರಾರು ಸೇರಿದ ಭಕ್ತರ ಪೂಜೆಯ ಪ್ರತಿನಿಧಿಯಾಗಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಆರತಿ ದಿನೇಶ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ, ಸಂಗೀತ ಸತೀಶ್ ಶೆಟ್ಟಿ ಭಾಗವಹಿಸಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯ ಸದಸ್ಯ ಸದಸ್ಯೆಯರಿಂದ ಭಜನಾ ಸೇವೆ ನಡೆಯಿತು.ವಿಧೂಷಿ ಸ್ವಪ್ನ ಕಿರಣ್ ಮತ್ತು ವಿಧೂಷಿ ರೂಪ ಕಿರಣ್ ರವರ ನಿರ್ದೇಶನದಲ್ಲಿ ಮೂಡಿ ಬಂದ ಯುಎಇ ಬಂಟ್ಸ್ ನ ಮಕ್ಕಳ ನೃತ್ಯ ಭಜನೆ ಕಣ್ಮನ ಸೆಳೆಯಿತು.

ಶ್ರೀ ಸತ್ಯನಾರಾಯಣ ಮಹಾಪೂಜೆಗೆ ಸಹಕರಿಸಿದ ಎಲ್ಲಾ ಪೋಷಕರಿಗೆ ಸಂಘದ ಗೌರವ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಉಪಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ,ಕಾರ್ಯದರ್ಶಿ ರವಿರಾಜ್ ಶೆಟ್ಟಿ ಶಾಲು ಹೊದಿಸಿ ವಿಶೇಷ ಪ್ರಸಾದ ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಚಿತ್ರ ಪ್ರಸನ್ನ ಶೆಟ್ಟಿ ಮತ್ತು ಶಶಿ ರವಿರಾಜ್ ಶೆಟ್ಟಿ ಆರಂಭದಿಂದ ಅಂತ್ಯದವರೆಗೆ ಅಚ್ಚುಕಟ್ಟಾಗಿ ನಿರೂಪಿಸಿದರು.ಕೊನೆಗೆ ದೇವರ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಿತು.

ಕಾರ್ಯಕ್ರಮದ ಯಶಸ್ಸಿಗೆ ದುಡಿದ ಕೋರ್ ಕಮಿಟಿ ಸದಸ್ಯರಿಗೆ,2025-26ನೇ ಸಾಲಿನ ಸಂಘಟನಾ ಸಮಿತಿಯ ಸದಸ್ಯ ಸದಸ್ಯೆಯರಿಗೆ ಮತ್ತು ಯುಎಇ ಬಂಟ್ಸ್ ನ ಕಾರ್ಯಕರ್ತರಿಗೆ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಕೃತಜ್ಞತೆ ಸಲ್ಲಿಸಿದರು.

ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ

Hot this week

ನವೆಂಬರ್ 6ರಂದು ಕರ್ನಾಟಕ ಸಂಘ ಖತರ್‌ನ 71ನೇ ರಾಜ್ಯೋತ್ಸವ ‘ಕರುನಾಡ ವೈಭವ-2026’ 

ದೋಹಾ: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ...

ಜುಬೈಲ್; ‘AQWA 40-ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್’: ದಿಲ್‌ಪಸಂದ್ ಮೂಳೂರು ಚಾಂಪಿಯನ್, HMC ಅದಮಾರ್ ರನ್ನರ್‌ಅಪ್

ಜುಬೈಲ್ (ಸೌದಿ ಅರೇಬಿಯಾ): ಮೂಳೂರಿನ ಅಲ್-ಖಮರ್ ವೆಲ್ಫೇರ್ ಅಸೋಸಿಯೇಷನ್ (AQWA KSA)...

ಅಮರ ಮಧುರ ಗೀತೆ: ನೆನಪಿನಂಗಳದಲ್ಲಿ ಮತ್ತೆ ಅರಳಲಿವೆ ಹಳೆಯ ಕನ್ನಡ ಹಾಡುಗಳು; ಅ.29ರಂದು ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ

ಮನಾಮ(ಬಹರೈನ್): ಕೆಲವು ಹಾಡುಗಳು ಕೇವಲ ಸಂಗೀತವಲ್ಲ; ಅವು ಬದುಕಿನ ಅಮೂಲ್ಯ ನೆನಪುಗಳು....

ಕರ್ನಾಟಕ ಸಂಘ ಶಾರ್ಜಾದಿಂದ ‘ಮಯೂರ ಸವಿರುಚಿ 2026’: ಬೆಂಕಿರಹಿತ ಅಡುಗೆಯಲ್ಲಿ ಸೃಜನಶೀಲತೆ ಮೆರೆದ ಸ್ಪರ್ಧಿಗಳು

ಕರ್ನಾಟಕ ಸಂಘ ಶಾರ್ಜಾದ ವತಿಯಿಂದ ನಡೆದ ವಿನೂತನ ವಿಶೇಷ ಕಾರ್ಯಕ್ರಮ ದುಬೈ :...

Related Articles

Popular Categories