ದುಬೈ: ಯುಎಇಯ ಕನ್ನಡಿಗರ ಸಹಕಾರದೊಂದಿಗೆ ದುಬೈ ಮತ್ತು ಅಬುಧಾಬಿಯಲ್ಲಿ ಮೂರನೇ ವರ್ಷ ಬಡಗುತಿಟ್ಟು ಯಕ್ಷಗಾನೋತ್ಸವವನ್ನು ಆಯೋಜಿಸಲಾಗಿದೆ. ಸಂಸ್ಕೃತಿ, ಕಲೆ ಹಾಗೂ ಯಕ್ಷಗಾನದ ಪರಂಪರೆಯನ್ನು ವಿದೇಶದ ಭೂಮಿಯಲ್ಲಿ ಹರಡುವ ಉದ್ದೇಶದಿಂದ ಈ ವಿಶೇಷ ಸಾಂಸ್ಕೃತಿಕ ಸಂಭ್ರಮವನ್ನು ನಡೆಸಲಾಗುತ್ತಿದೆ.

ಅಬುಧಾಬಿ ಅಲ್ ರೀಮ್ ಐಲ್ಯಾಂಡ್ ನ GEMS World Academyಯಲ್ಲಿ ಅಕ್ಟೋಬರ್ 11ರ ಶನಿವಾರ ಸಂಜೆ 4 ಗಂಟೆಗೆ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ದುಬೈಯ ಅಲ್ ಖೈಲ್ ರೋಡಿನ GEMS New Millennium ಸ್ಕೂಲ್ ನಲ್ಲಿ ಅಕ್ಟೋಬರ್ 12ರ ರವಿವಾರ ಮಧ್ಯಾಹ್ನ 2.30 ಗಂಟೆಗೆ ‘ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಕಳೆದ ಎರಡು ವರ್ಷಗಳಲ್ಲಿ ಯುಎಇ ಕನ್ನಡಿಗರಿಗೆ ಅದ್ಭುತ ಯಕ್ಷಗಾನ ಕಲೆಗಳನ್ನು ಪರಿಚಯಿಸಿದ್ದ ಆಯೋಜಕರು ಈ ಬಾರಿಯೂ ಅದೇ ಉತ್ಸಾಹದೊಂದಿಗೆ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದಾರೆ. ಪ್ರವೇಶ ಹಾಗೂ ಪಾರ್ಕಿಂಗ್ ಉಚಿತ, ಎಲ್ಲಾ ಕನ್ನಡಿಗರು ಮತ್ತು ಯಕ್ಷಗಾನ ಪ್ರೇಮಿಗಳಿಗೆ ಮುಕ್ತ ಆಹ್ವಾನವನ್ನು ಸಂಘಟಕರು ಪ್ರಕಟಣೆ ಮೂಲಕ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಿನಾಯಕ ಹೆಗಡೆ: 056 764 8855, ಪ್ರಶಾಂತ್ ಭಟ್: 056 366 5540, ಗಣಪತಿ ಭಟ್: 050 475 2611 ಅವರನ್ನು ಸಂಪರ್ಕಿಸಬಹುದು.