ದುಬೈ: ಅಕ್ಟೋಬರ್ 25ರಂದು ದುಬೈನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕದ ವತಿಯಿಂದ ನಡೆಯುವ 4ನೇ “ದುಬೈ ಗಡಿನಾಡ ಉತ್ಸವ”ದ ಲೋಗೋ ವನ್ನು ಅಬೂಹೈಲ್ ಸ್ಪೋರ್ಟ್ಸ್ ಬೈನಲ್ಲಿ ನಡೆದ ಸಮಾರಂಭದಲ್ಲಿ ದುಬೈನ ಹಿರಿಯ ಉದ್ಯಮಿ, ಸಮಾಜ ಸೇವಕ ಜೇಮ್ಸ್ ಮೆಂಡೋನ್ಸ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ದುಬೈ ಗಡಿನಾಡ ಉತ್ಸವ ಕಾರ್ಯಕ್ರಮವನ್ನು ನೋಡುತ್ತಾ ಬಂದಿದ್ದೆನೆ. ನಾಲ್ಕನೇ ವರ್ಷದ ಕಾರ್ಯಕ್ರಮದ ಕ್ಷಣಗಣನೆಯಲ್ಲಿ ನೀವೆಲ್ಲ ಇದ್ದಿರಿ. ಒಂದು ಒಳ್ಳೆಯ ಕಾರ್ಯಕ್ರಮವಾಗಿ ಮೂಡಿಬರಲಿ ಎಂದು ಶುಭ ಹಾರೈಸಿದರು.
ಅಕಾಡೆಮಿಯ ದುಬೈ ಘಟಕದ ಅಧ್ಯಕ್ಷ ಅಮರ ದೀಪ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶಿವಶಂಕರ ನಕ್ರಾಜೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್ ಸುಬ್ಬಯಕಟ್ಟೆ, ದುಬೈ ಗಡಿನಾಡ ಉತ್ಸವದ ಸಂಚಾಲಕ ಝಡ್ ಎ ಕಯ್ಯಾರ್, ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಾಜೂರಿ, ಕೋಶಾಧಿಕಾರಿ ಅಶ್ರಫ್ ಪಿ ಪಿ, ಪಧಾಧಿಕಾರಿಗಳಾದ ಅಲಿ ಸಾಗ್, ಸುಗಂಧ ರಾಜ್ ಬೇಕಲ್, ಮಂಜುನಾಥ ಕಾಸರಗೋಡು, ಮನ್ಸೂರ್ ಪೆರ್ಲ, ವಿಜಯಕುಮಾರ ಶೆಟ್ಟಿ ಗಾಣದ ಮೂಲೆ, ಅನೀಶ್ ಅಡಪ್ಪ ಮಡಂದೂರು, ಶಾಕೀರ್ ಬಾಯಾರ್ ಮುಂತಾದವರು ಉಪಸ್ಥಿತರಿದ್ದರು.