ಯುಎಸ್‌ಎಫ್ಲೋರಿಡಾದಲ್ಲಿ ಅದ್ದೂರಿಯಾಗಿ ನಡೆದ ಮೂರು ದಿನಗಳ '8ನೇ ನಾವಿಕ...

ಫ್ಲೋರಿಡಾದಲ್ಲಿ ಅದ್ದೂರಿಯಾಗಿ ನಡೆದ ಮೂರು ದಿನಗಳ ‘8ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನ’

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್

ಫ್ಲೋರಿಡಾ: ಆಗಸ್ಟ್ 29, 30, ಮತ್ತು 31ರಂದು 8ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನವು ಅಮೇರಿಕದ ಫ್ಲೋರಿಡಾ ರಾಜ್ಯದ ಲೇಕ್ ಲ್ಯಾಂಡ್ ನಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ RP ಫಂಡಿಂಗ್ ಕನ್ವೆನ್ಷನ್ ಸೆಂಟರ್​ನಲ್ಲಿ ‘ಉಲ್ಲಾಸ- ಉತ್ಸಾಹ- ಉತ್ಸವ’ ಎಂಬ ಟ್ಯಾಗ್ ಲೈನ್ ನೊಂದಿಗೆ ಅದ್ದೂರಿಯಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ಎಸ್‌‍. ತಂಗಡಗಿ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಸಮೃದ್ಧಿ ಮಂಜುನಾಥ್, ರವಿಕುಮಾರ್ ಗಣಿಗ, ಎಸ್.ಆರ್.ಶ್ರೀನಿವಾಸ್ ಮುಂತಾದ ಗಣ್ಯರು ಭಾಗವಹಿಸಿದ್ದರು.

ಸಚಿವರಾದ ಶಿವರಾಜ್‌ ತಂಗಡಗಿ ಮಾತನಾಡಿ, ನಮ್ಮ ಭಾಷಣದಲ್ಲಿ ಸಾವಿರಾರು ಮೈಲುಗಳ ದೂರವಿರುವ ದೇಶಕ್ಕೆ, ಅನೇಕ ದಶಕಗಳ ಹಿಂದೆ ಬಂದು ನೆಲೆಸಿದರೂ ಸಹಿತ, ಕನ್ನಡತನವನ್ನು ಬಿಡದೇ, ಕನ್ನಡ ಸಂಸ್ಕೃತಿ, ಪರಂಪರೆ, ಭಾಷೆಯನ್ನು ಬೆಳೆಸುತ್ತಿರುವ ಅಮೇರಿಕ ಕನ್ನಡಿಗರನ್ನು ಹಾಡಿ ಹೊಗಳಿದರು.

ಸ್ಯಾಂಡಲ್ ವುಡ್ ನ ಖ್ಯಾತ ನಟ ರಕ್ಷಿತ್ ಶೆಟ್ಟಿ, ರಮ್ಯಾ, ರಮೇಶ್ ಅರವಿಂದ್, ಪ್ರಣಯರಾಜ ಶ್ರೀನಾಥ್, ವಿನಯ ರಾಜಕುಮಾರ್, ನಿವೇದಿತಾ ಗೌಡ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರು, ಸಮ್ಮೇಳನದಲ್ಲಿ ಭಾಗವಹಿಸಿದ್ದು, ಖ್ಯಾತ ಸಂಗೀತ ನಿರ್ದೇಶಕರಾದ ಮನೋಮೂರ್ತಿ, All Ok ತಂಡದವರು ಪ್ರೇಕ್ಷಕರನ್ನು ರಂಜಿಸಿದರು.

ನಾವು ವಿಶ್ವ ಕನ್ನಡಿಗರು (ನಾವಿಕ ) ಸಂಸ್ಥೆಯು ಫ್ಲೋರಿಡಾ ರಾಜ್ಯದಲ್ಲಿರುವ ನಾಲ್ಕು ಪ್ರಮುಖ ಕನ್ನಡ ಸಂಘಗಳಾದ ಶ್ರೀಗಂಧ ಕನ್ನಡ ಕೂಟ ಟಾಂಪ, ಒರ್ಲಾಂಡೋ ಕನ್ನಡ ಕೂಟ, ನಂದಿ ಕನ್ನಡ ಕೂಟ ಮಿಯಾಮಿ ಮತ್ತು ಸವಿಕನ್ನಡ ಕೂಟ ಜ್ಯಾಕ್ಸನ್ವಿಲ್ ಸಹಯೋಗದೊಂದಿಗೆ ಈ ಬೃಹತ್ ವಿಶ್ವ ಕನ್ನಡ ಸಮಾವೇಶವನ್ನು ಆಯೋಜಿಸಿತ್ತು.

ಅಮೇರಿಕ, ಕೆನಡಾ ಮತ್ತು ಕರ್ನಾಟಕದಿಂದ ಆಗಮಿಸಿದ್ದ ಸಾವಿರಾರು ಕನ್ನಡ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿದ್ದ ಮೂರು ದಿವಸಗಳ ಈ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಕ್ಕೂ ಹೆಚ್ಚು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಸಮ್ಮೇಳನದ ಭರ್ಜರಿ ಯಶಸ್ಸಿಗೆ ಕಾರಣರಾದ ಸರ್ವರಿಗೂ ನಾವಿಕ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮತ್ತು ಸಮ್ಮೇಳನದ ಸಂಚಾಲಕರಾದ ಹರ್ಷಿತ್ ಗೌಡ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಈ ಸಮಾವೇಶದಲ್ಲಿ ಮೆರವಣಿಗೆ, ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್, ವೈದ್ಯರ ವೇದಿಕೆ, ಫ್ಯಾಷನ್ ಶೋ, ನಾವಿಕ ಕೋಗಿಲೆ, ಯಕ್ಷಗಾನ, ಬೊಂಬಾಟ್ ಭೋಜನ ಸ್ಪರ್ಧೆ, ನಾಟಕಗಳು, ನೃತ್ಯಗಳು, ಕನ್ನಡ ಕಲಿ, ಸಂಗೀತಾ ಸ್ಪರ್ಧೆಗಳು, ಯೂಥ್ ಫೋರಮ್, ಸಾಹಿತ್ಯ ವೇದಿಕೆ, ದಾರಿ ದೀಪ, ಯುವ ಪ್ರತಿಭೆ, ಚೆಸ್, ಕ್ರಿಕೆಟ್ ಹೀಗೆ ಅನೇಕ ಕಾರ್ಯಕ್ರಮಗಳು ನಡೆದವು. ಈ ಸಮಾವೇಶದಲ್ಲಿ ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ವೈವಿದ್ಯಮಯ ಮನರಂಜನಾ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಈ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ “ಉಜ್ವಲ” ಮತ್ತು “ನಮ್ಮೊಳಗೊಂದು ಬೆಂಗಳೂರು” ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು

ನಾವಿಕ ಇತಿಹಾಸದಲ್ಲೇ ಪ್ರಥಮ ಬಾರಿಗೆ ಅಮೇರಿಕದಲ್ಲಿರುವ ಎಲ್ಲಾ ಕರ್ನಾಟಕ ಕೂಟಗಳ ಅಧ್ಯಕ್ಷರ ಸಭೆಯನ್ನು ಏರ್ಪಡಿಸಿ ಕನ್ನಡ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳನ್ನು, ಸವಾಲುಗಳನ್ನು ಪರಿಹರಿಸುವ ಬಗ್ಗೆ ಚರ್ಚಿಸಲಾಯಿತು ಮತ್ತು ಡಾ. ಗುರುರಾಜ ಕರ್ಜಗಿ ಅವರಿಂದ “ನಾಯಕತ್ವದ ಗುಣ ಹೇಗೆ ಬೆಳೆಸಿಕೊಳ್ಳಬೇಕು ಮತ್ತು ಸಂಘ ಸಂಸ್ಥೆಗಳನ್ನು ಹೇಗೆ ಕಟ್ಟಬೇಕು” ಎಂಬ ವಿಷಯದ ಮೇಲೆ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದ ಆಯೋಜನೆಯ ನೇತೃತ್ವವನ್ನು ಬೆಂಕಿ ಬಸಣ್ಣ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ, ನಾಡೋಜ ಮಹೇಶ್ ಜೋಶಿಯವರ ಕನಸಿನ ಕೂಸಾದ, “ವಿಶ್ವ ಕನ್ನಡ ಕೂಟಗಳ ಕೈಪಿಡಿ” ಸಂಚಿಕೆಯನ್ನು ಅಮೇರಿಕದಲ್ಲಿ ಬಿಡುಗಡೆ ಮಾಡಿ ಎಲ್ಲಾ ಕನ್ನಡ ಕೂಟಗಳಿಗೂ ವಿತರಿಸಲಾಯಿತು.

ಇದೇ ಮೊದಲ ಬಾರಿಗೆ ಸಮ್ಮೇಳನದ ಜೊತೆಗೆ ಐದು ದಿವಸಗಳ “ನಾವಿಕ ಕ್ರೂಸ್” ( Cruise) ನ್ನು ಬಹಮಾಸ್ ದ್ವೀಪಗಳಿಗೆ ಬೆಂಕಿ ಬಸಣ್ಣ, ಧರಣಿ ಮುರಂಡಿ ಮತ್ತು ಲಕ್ಷ್ಮಿಯವರ ನೇತೃತ್ವದಲ್ಲಿ ಏರ್ಪಡಿಸಲಾಗಿದೆ.

ಈ ನಾವಿಕ ಸಮ್ಮೇಳನವನ್ನು ಕಳೆದ ವರ್ಷ ನಿಧನ ಹೊಂದಿದ ನಾವಿಕ ಸಂಸ್ಥೆಯ ಸಹ-ಸಂಸ್ಥಾಪಕಿ ಹಾಗೂ ಪ್ರಥಮ ಮಹಿಳಾ ಅಧ್ಯಕ್ಷೆ ದಿ|| ಡಾ.ರೇಣುಕಾ ರಾಮಪ್ಪ ಗೌರವಾರ್ಥ ಸಮರ್ಪಿಸಲಾಯಿತು.

Hot this week

DKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅನ್ವರ್ ಸಾಹೇಬ್ ಕುಂಜಾಲ್ ಆಯ್ಕೆ

ಕುವೈತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC), ಇದರ ಕುವೈತ್ ರಾಷ್ಟ್ರೀಯ...

ಕರ್ನಾಟಕ ಸಂಘ ಖತರ್‌ನಿಂದ ರಮಝಾನ್‌ ಸೇವಾ ಕಾರ್ಯ: ಇಫ್ತಾರ್ ಆಹಾರ ಕಿಟ್‌ಗಳ ವಿತರಣೆ

ಕರ್ನಾಟಕ ಸಂಘ ಖತರ್‌ (KSQ), ರಮಝಾನ್‌ ಮಾಸದ ಪವಿತ್ರ ಚಟುವಟಿಕೆಗಳ ಭಾಗವಾಗಿ...

ಅಟ್ಲಾಂಟ ಒಕ್ಕಲಿಗರ ಕೂಟದಿಂದ ಪ್ರಥಮ ಸಮಾವೇಶ

ಕೆ. ಆರ್. ಶ್ರೀನಾಥ್, ಅಟ್ಲಾಂಟ ಅಟ್ಲಾಂಟ: ಫೆಬ್ರವರಿ 22ರ ರವಿವಾರದಂದು ಅಟ್ಲಾಂಟದಲ್ಲಿ ನೆಲಸಿರುವ...

AIM India Forum Delegation Meets Indian Ambassador to UAE

Abu Dhabi: A delegation from AIM India Forum met...

Konkani movie ‘My Dear Father’ thrills audience in Kuwait with double premiere shows

Kuwait: The Konkani film My Dear Father was screened...

Related Articles

Popular Categories