ಯುಎಇಯುಎಇಯಲ್ಲಿ ಹುಟ್ಟಿ ಬೆಳೆದರೂ ಅರಬಿಕ್ ಭಾಷೆ ಮಾತನಾಡಲು ಕಷ್ಟಪಡುತ್ತಿರುವವ...

ಯುಎಇಯಲ್ಲಿ ಹುಟ್ಟಿ ಬೆಳೆದರೂ ಅರಬಿಕ್ ಭಾಷೆ ಮಾತನಾಡಲು ಕಷ್ಟಪಡುತ್ತಿರುವವ ಅನ್ಯಭಾಷಿಕರು

ಡಿ.18 ವಿಶ್ವ ಅರಬಿಕ್ ಭಾಷಾ ದಿನಾಚರಣೆ

ದುಬೈ/ಯುಎಇ: ದೈನಂದಿನ ಆಗು ಹೋಗುಗಳಿಗೆ ಅರಬಿಕ್ ಭಾಷೆಯನ್ನೇ ಅತಿಯಾಗಿ ನೆಚ್ಚಿಕೊಂಡಿರುವ ಯುಎಇಯಂತಹ ರಾಷ್ಟ್ರದಲ್ಲೇ ಹುಟ್ಟಿ ಬೆಳೆದರೂ ಅರಬಿಕ್ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು ಕಷ್ಟಪಡುವ ಹಲವರಿದ್ದಾರೆ. ಈ ಪೈಕಿ ಹಲವರು ಅರಬಿಕ್ ಭಾಷೆಯನ್ನು ೧೦ನೇ ತರಗತಿವರೆಗೆ ಇಲ್ಲವೇ ಅದಕ್ಕಿಂತ ಹೆಚ್ಚಿನ ತರಗತಿಯಲ್ಲಿ ಕಲಿತಿದ್ದರೂ ಮಾತನಾಡಲು ಮಾತ್ರ ಹೆಣಗಾಡುತ್ತಿದ್ದಾರೆ ಎಂದು ಖಲೀಜ್ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ.

ಡಿ.೧೮ ವಿಶ್ವ ಅರಬಿಕ್ ಭಾಷಾ ದಿನಾಚರಣೆ. ೧೯೭೩ ಡಿ.೧೮ರಂದು ಯುನೈಟೆಡ್ ನೇಶನ್ಸ್‌ನ ೬ನೇ ಅಧಿಕೃತ ಭಾಷೆಗೆ ಅರಬಿಕ್ ಭಾಷೆಯನ್ನು ಸೇರಿಸಿದ ಹಿನ್ನೆಲೆಯಲ್ಲಿ ೨೦೧೨ರಿಂದ ಡಿ.೧೮ನ್ನು ವಿಶ್ವ ಅರಬಿಕ್ ಭಾಷಾ ದಿನಾಚರಣೆಯನ್ನಾಗಿ ಮಾಡಲಾಗುತ್ತಿದೆ. ವಿಶ್ವದಾದ್ಯಂತ ೩೬೦ ಮಿಲಿಯನ್ ಅರಬಿಕ್ ಭಾಷಿಕರಿದ್ದಾರೆ ಎಂದು ಖಲೀಜ್ ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

ವಿಶ್ವ ಅರಬಿಕ್ ಭಾಷಾ ದಿನಾಚರಣೆ ಹಿನ್ನೆಲೆಯಲ್ಲಿ  ಖಲೀಜ್ ಟೈಮ್ಸ್ ಯುಎಇಯಲ್ಲಿ ಹುಟ್ಟಿ ಬೆಳೆದ, ಶಿಕ್ಷಣ ಪೂರೈಸಿದ ಹಲವು ಅರಬಿಯೇತರ ಭಾಷಿಕರನ್ನು ಸಂದರ್ಶಿಸಿ ವರದಿ ಪ್ರಕಟಿಸಿದೆ.

ಈ ಪೈಕಿ ಹೆಚ್ಚಿನವರೂ ಅರೆಬಿಕ್ ಭಾಷೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಲಾಗದ ಹಿನ್ನೆಲೆಯಲ್ಲಿ ಖೇದ ವ್ಯಕ್ತಪಡಿಸಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ತನ್ನ ಏಳನೇ ವರ್ಷದಲ್ಲೇ ದುಬೈಗೆ ಬಂದಿದ್ದ ಭಾರತದ ಮಹಿಮಾ ಜೋಸ್, ಆರಂಭಿಕ ಹಂತದಲ್ಲಿ ಅರಬಿಕ್ ಭಾಷೆ ಮಾತನಾಡಲು ಕಷ್ಟಪಟ್ಟ ಬಗ್ಗೆ ಅನುಭವ ಹಂಚಿಕೊಂಡಿದ್ದಾಳೆ. ‘ನಾನು ಎರಡನೇ ತರಗತಿಗೆ ಸೇರಿಕೊಂಡಾಗ ನನಗೆ ಅರಬಿಕ್ ಭಾಷೆ ಬರುತ್ತಿರಲಿಲ್ಲ. ಇತರ ವಿದ್ಯಾರ್ಥಿಗಳು ಒಂದನೇ ತರಗತಿಯಿಂದಲೇ ಅರಬಿಕ್ ಕಲಿತಿದ್ದರಿಂದ ನನ್ನ ಕಲಿಕೆಯಲ್ಲಿ ಅಂತರವಿತ್ತು. ಆದರೆ ಈ ಅಂತರವನ್ನು ನಾನು ಖಾಸಗಿ ಟ್ಯೂಷನ್ ಪಡೆಯುವ ಮೂಲಕ ಸರಿದೂಗಿಸಿಕೊಂಡೆ. ಆದರೆ ನನ್ನ ಮನಸ್ಥಿತಿ ಕೇವಲ ಶೈಕ್ಷಣಿಕ ಉದ್ದೇಶದಿಂದಷ್ಟೇ ಅರಬಿಕ್ ಕಲಿಯುವುದಾಗಿತ್ತು. ದೀರ್ಘಾವಧಿಯಲ್ಲಿ ಈ ಭಾಷೆ ನಮಗೆ ಅಗತ್ಯ ಬೀಳಬಹುದೆಂಬ ಭಾವನೆ ನನ್ನಲ್ಲಿರಲಿಲ್ಲ’ ಎಂದು ೩೪ ವರ್ಷದ ಮಹಿಮಾ ಜೋಸ್ ಹೇಳಿಕೊಂಡಿದ್ದಾಳೆ.

ಮಹಿಮಾ ೧೦ನೇ ತರಗತಿವರೆಗೆ ಅರಬಿಕ್ ಭಾಷೆಯನ್ನು ಕಲಿತಿದ್ದರೂ ಆಕೆಯ ಉಚ್ಚಾರಣೆ, ಮಾತನಾಡುವ ಸಾಮರ್ಥ್ಯ ಸೀಮಿತವಾಗಿತ್ತು. ಮಹಿಮಾಗೆ ಎಂದೂ ಅರಬಿಕ್ ಮಾತನಾಡುವ ಅನಿವಾರ್ಯತೆ ಸೃಷ್ಟಿಯಾಗಿರಲಿಲ್ಲ. ಶಾಲಾ- ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ವ್ಯವಹರಿಸಿದರೆ ಮನೆಯಲ್ಲಿ ಮಾತೃಭಾಷೆ ಮಲಯಾಳಂ ಮಾತನಾಡುತ್ತಿದ್ದಳು. ಆದರೆ ಈಗ ದುಬೈಯಲ್ಲೇ ರಿಯಲ್ ಎಸ್ಟೇಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಮಾಗೆ ತಾನು ಸ್ಪಷ್ಟವಾಗಿ ಅರಬಿಕ್ ಕಲಿಯದ ಬಗ್ಗೆ ವಿಷಾದವಿದೆ. ಪ್ರಮುಖವಾಗಿ ಅರಬಿಕ್ ಗ್ರಾಹಕರೊಂದಿಗೆ ಸಂವಹನ ನಡೆಸುವಾಗ ಅರಬಿಕ್ ಭಾಷೆಯ ಅನಿವಾರ್ಯತೆ ಅರಿವಾಗುತ್ತಿದೆ ಎಂದು ಮಹಿಮಾ ಜೋಸ್ ಹೇಳಿದ್ದಾಳೆ.

‘ಶಾಲಾ ದಿನಗಳಲ್ಲಿ ಅರಬಿಕ್ ಕಲಿಯದಿರುವ ಬಗ್ಗೆ ವಿಷಾದವಿದೆ. ಅಂದು ಹೆಚ್ಚಿನ ಲಕ್ಷ್ಯವಿಟ್ಟಿದ್ದರೆ ಅರಬಿಕ್ ಚೆನ್ನಾಗಿ ಕಲಿಯಬಹುದಿತ್ತು. ಸ್ಪಲ್ಪ ಮಟ್ಟಿಗೆ ಅರಬಿಕ್ ಬರೆಯಲು ಮತ್ತು ಓದಲು ಬರುತ್ತಿದೆ. ಆದರೆ ವ್ಯಾಖ್ಯಾನಿಸಲು, ಸುಲಲಿತವಾಗಿ ಮಾತನಾಡಲು ಕಷ್ಟಪಡಬೇಕಾಗುತ್ತಿದೆ. ಇತರ ಭಾಷೆಗಳನ್ನು ಕಲಿಯುವುದೆಂದರೆ ಅದೊಂದು ಆಸ್ತಿ ಗಳಿಸಿಟ್ಟಂತೆ. ಅದು ನಮಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ’ ಎಂದು ಮಹಿಮಾ ಹೇಳಿಕೊಂಡಿದ್ದಾಳೆ.

ಇನ್ನು ಇರಾನ್ ಮೂಲದ ಸದ್ಯ ಮಿಲಾನ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಯುಎಇಯಲ್ಲೇ ಹುಟ್ಟಿ ಬೆಳೆದಿರುವ ಹಸ್ತಿ ಮೊಟೆವಸೆಲ್ ಶಾಲಾದಿನಗಳಲ್ಲಿ ಅರಬಿಕ್ ಭಾಷೆಯ ಪ್ರಾರಂಭಿಕ ಹಂತವನ್ನು ಕಲಿತಿದ್ದರು.

ಅದರೆ ಇತರ ಹಲವು ಭಾಷೆಗಳ ಜನರಿರುವ ಯುಎಇಯಲ್ಲಿ ಅರಬಿಕ್ ಭಾಷೆಯ ಕಲಿಯುವ ಸಂದಿಗ್ಧ ಪರಿಸ್ಥಿತಿ ಆಕೆಗೆ ಉಂಟಾಗಿರಲಿಲ್ಲ. ಆಕೆಗೆ ಗೊತ್ತಿದ್ದ ಭಾಷೆಯಲ್ಲಿ ಸಂವಹನ ಮಾಡುತ್ತಿದ್ದರಿಂದ ಅರಬಿಕ್ ಕಲಿಯುವ ಅನಿವಾರ್ಯತೆಯೂ ಸೃಷ್ಟಿಯಾಗಿರಲಿಲ್ಲ. ಆದರೆ ಈಗ ಆಕೆಗೆ ಅರೆಬಿಕ್‌ನ್ನು ಸಂಪೂರ್ಣವಾಗಿ ಕಲಿಯದಿರುವ ಬಗ್ಗೆ ಹಸ್ತಿ ಖೇದ ವ್ಯಕ್ತಪಡಿಸಿದ್ದಾಳೆ.

ಆದರೆ ಹಸ್ತಿಯ ಮಾತೃಭಾಷೆ ಪಾರ್ಸಿ ಆಗಿದ್ದು, ಪಾರ್ಸಿ ಅರಬಿಕ್ ಭಾಷೆಗೆ ಸ್ವಲ್ಪ ಮಟ್ಟದ ಸಾಮ್ಯತೆ ಇರುವುದರಿಂದ ಸೂಚನಾ ಫಲಕಗಳನ್ನು ಓದಳು ಆಕೆ ಸಮರ್ಥಳಾಗಿದ್ದಾರೆ. ‘ಶಾಲೆಯಲ್ಲಿ ಶೈಕ್ಷಣಿಕ ಉದ್ದೇಶಕ್ಕಷ್ಟೇ ಅರಬಿಕ್ ಕಲಿತಿದ್ದು, ಮನೆಯಲ್ಲಿ ಪಾರ್ಸಿ ಭಾಷೆ ಮಾತನಾಡುತ್ತಿದ್ದೆ. ಶಾಲಾ ದಿನಗಳಲ್ಲಿ ಅರಬಿಕ್ ಭಾಷೆಯನ್ನು ಚೆನ್ನಾಗಿ ಕಲಿಯಬೇಕಿತ್ತು ಎಂದು ಈಗ ಆಗುತ್ತಿದ್ದೆ’ ಎಂದು ಹಸ್ತಿ ಅಭಿಪ್ರಾಯ ಹಂಚಿಕೊಂಡಿದ್ದಾಳೆ.

‘ದೈನಂದಿನ ಆಗು- ಹೋಗುಗಳಿಗೆ ಇಂಗ್ಲಿಷ್ ಭಾಷೆಯನ್ನೇ ಯುಎಇಯಲ್ಲಿ ಹೆಚ್ಚಾಗಿ ಬಳಸುತ್ತಿರುವುದರಿಂದ ಅರಬಿಕ್ ಭಾಷೆ ಕಲಿಕೆಯ ಅನಿವಾರ್ಯತೆ ಸೃಷ್ಟಿಯಾಗುತ್ತಿಲ್ಲ. ಶೈಕ್ಷಣಿಕ ಕಲಿಕೆಯ ವೇಳೆ ಓದು-ಬರವಣಿಗೆಗಿಂತ ಹೆಚ್ಚಾಗಿ ಸಂವಹನಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಇತರ ಭಾಷಿಕರಲ್ಲಿ ಅರಬಿಕ್ ಭಾಷೆ ಮಾತನಾಡುವ ಆತ್ಮ ವಿಶ್ವಾಸ ಹೆಚ್ಚುತ್ತದೆ’ ಎಂದು ಜಿಇಎಂಎಸ್ ಅಲ್-ಖಲೀಜ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಸಿಇಒ ಗದೀರ್ ಅಬೂ ಶಮತ್ ಹೇಳಿದ್ದಾರೆ.

ಶೈಕ್ಷಣಿಕ ಸಂದರ್ಭದಲ್ಲಿ ಅನಿವಾಸಿ ವಿದ್ಯಾರ್ಥಿಗಳಿಗೆ ಅರಬಿಕ್ ಭಾಷೆಯನ್ನು ಆಲಿಸುವ ಮತ್ತು ಸಂವಹನ ಮಾಡಲು ತರಬೇತಿ ನೀಡುವ ಮೂಲಕ ಅವರನ್ನು ಅರಬಿಕ್ ಭಾಷೆಯಲ್ಲಿ ಹಿಡಿತ ಸಾಧಿಸುವಂತೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

Related Articles

Popular Categories