ಯುಎಇಫೆಬ್ರವರಿ 1ರಂದು ಶಾರ್ಜಾದಲ್ಲಿ 'ಮಾರ್ಗದೀಪ ಪ್ರೀಮಿಯರ್ ಲೀಗ್-4' ಕ್ರಿಕೆಟ್...

ಫೆಬ್ರವರಿ 1ರಂದು ಶಾರ್ಜಾದಲ್ಲಿ ‘ಮಾರ್ಗದೀಪ ಪ್ರೀಮಿಯರ್ ಲೀಗ್-4’ ಕ್ರಿಕೆಟ್ ಟೂರ್ನಮೆಂಟ್; ಜರ್ಸಿ ಬಿಡುಗಡೆ

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ ನಡೆಯುವ ಮಾರ್ಗದೀಪ ಪ್ರೀಮಿಯರ್ ಲೀಗ್-4 (MPL-Season-4) ಕ್ರಿಕೆಟ್ ಟೂರ್ನಮೆಂಟ್ ನ ಜರ್ಸಿ ಬಿಡುಗಡೆ ಇತ್ತೀಚೆಗೆ ನಡೆಯಿತು.

ದುಬೈನ ಎಂ.ಎಂ.ಸಿ.ಟಿ.ಗ್ರೌಂಡ್ ನಲ್ಲಿ ನಡೆದ ಜರ್ಸಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ರೋಷನ್ ಕಂಪ, ರಾಮಕ್ಷತ್ರಿಯ ಸಂಘ ಯುಎಇ ಅಧ್ಯಕ್ಷರಾದ ಈಶ್ವರ್ ಬಲ್ಕಿ, ರಕ್ಷಿತ್ ಪುತ್ತೂರು, ರೇಷ್ಮಾ ಹಾಗೂ ವೇದ, ಸಂತೋಷ್ ಶೆಟ್ಟಿ ಪೊಳಲಿ ಬಿಡುಗಡೆಗೊಳಿಸಿದರು.

ಮಹೇಶ್ ಚಂದ್ರಗಿರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಗಂಧರಾಜ ಬೇಕಲ್ ಸ್ವಾಗತಿಸಿದರು. ಸ್ಪೋರ್ಟ್ಸ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುದುರೆಕೋಡು ಕಾರ್ಯಕ್ರಮದ ಜವಾಬ್ದಾರಿಯನ್ನು ವಹಿಸಿದರು. ಫೆಬ್ರವರಿ 1ರಂದು ಶಾರ್ಜಾದ ಬತಾಯ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ.

ಬಿಡುಗಡೆ ಕಾರ್ಯಕ್ರಮವನ್ನು ಹರಿಕೋಟೆ ನಿರೂಪಿಸಿದರು. ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು, ಕಾರ್ಯದರ್ಶಿ ಸುನೀಲ್ ರಾವ್, ರಾಜೇಶ್ ರಾವ್, ಅಜೀತ್ ಕೊರಕಾಡ್ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Hot this week

ದುಬೈ; ನವೆಂಬರ್ 1ರಂದು 71ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾದ ಕರ್ನಾಟಕ ಸಂಘ ದುಬೈ

ದುಬೈ: ಯುಎಇಯಲ್ಲಿರುವ ಕನ್ನಡಿಗರ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಸಂಘಟನೆಯಾದ ಕರ್ನಾಟಕ...

ಕನ್ನಡ ಕಲಿಕೆಯ ಜೊತೆ ಖತರ್‌ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಿ: ಭಾರತೀಯ ರಾಯಭಾರಿ ವಿಪುಲ್ ಮನವಿ

ದೋಹಾ: ಖತರ್‌ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ‘ಕರ್ನಾಟಕ ಸಂಘ...

ಬಹರೈನ್‌; ‘ಕೆಸಿಎಫ್’ನಿಂದ ಈದ್ ಮಿಲಾದ್ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ

ಮನಾಮ: ಕರ್ನಾಟಕ ಕಲ್ಬರಲ್ ಫೌಂಡೇಶನ್ (ಕೆಸಿಎಫ್) ಬಹರೈನ್‌ ವತಿಯಿಂದ ಪ್ರವಾದಿ ಮುಹಮ್ಮದ್‌ರವರ...

ಅಮೇರಿಕ; ಭಕ್ತಿ, ಬಸವತತ್ವ, ನಾಟಕ-ನೃತ್ಯ ವೈಭವದಿಂದ ಕಂಗೊಳಿಸಿದ VSNA ಮಹಾಸಮ್ಮೇಳನದ ಎರಡನೇ ದಿನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಸ್ಯಾನ್‌ಫೋರ್ಡ್ (ಉತ್ತರ ಕೆರೊಲಿನಾ: 48ನೇ ವೀರಶೈವ ಸೊಸೈಟಿ...

ಕನ್ನಡ ಸಂಘ ಬಹರೈನ್‌ನ ‘ಯಕ್ಷ ವೈಭವ 2026’ ಮುಹೂರ್ತ ಪೂಜೆ ಸಂಪನ್ನ

ಬಹರೈನ್‌: ಕನ್ನಡ ಸಂಘ ಬಹರೈನ್ ಅರ್ಪಿಸುವ ‘ಯಕ್ಷ ವೈಭವ 2026’ ರ...

Related Articles

Popular Categories