ವಾಷಿಂಗ್ಟನ್, ಡಿಸಿ: ಅಮೆರಿಕವು ಇಸ್ರೇಲ್‌ಗೆ ಆಕ್ರಮಣಕಾರಿ ಶಸ್ತ್ರಾಸ್ತ್ರಳನ್ನು ಪೂರೈಸುವುದನ್ನು ಕೂಡಲೇ ನಿಲ್ಲಿಸಬೇಕೆಂದು ಯುನೈಟೆಡ್ ಸ್ಟೇಟ್ಸ್‌ನ ಡೆಮಾಕ್ರಟಿಕ್ ಪಕ್ಷದ ೨೦ ಶಾಸಕರು ಜೋ ಬೈಡನ್ ಆಡಳಿತವನ್ನು ಒತ್ತಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ಗೆ ಡೆಮಾಕ್ರಟಿಕ್ ಪಕ್ಷದ ಶಾಸಕರು ಪತ್ರ ಬರೆದಿದ್ದು, ಯುದ್ಧಾಪರಾಧ ಎಸಗುವ ದೇಶಗಳಿಗೆ ಮಿಲಿಟರಿ ಸಹಾಯ ಒದಗಿಸುವುದನ್ನು ನಿರ್ಬಂಧಿಸುವ ಮತ್ತು ಅವರಿಗೆ ಮಾನವೀಯ ನೆರವು ನೀಡುವುದನ್ನು ತಡೆಹಿಡಿಯುವ ತನ್ನದೇ ಕಾನೂನನ್ನು ಎತ್ತಿ ಹಿಡಿಯಲು ಕರೆ ನೀಡಿದೆ.
ಇಸ್ರೇಲ್‌ಗೆ ಮಾರಕ ಶಸ್ತ್ರಾಸ್ತ್ರಗಳ ಪೂರೈಕೆ ಮುಂದುವರಿಸುವುದರಿಂದ ಫೆಲಸ್ತೀನ್ ಜನರು ಹೆಚ್ಚಿನ ಸಂಕಷ್ಟಕ್ಕೆ ಈಡಾಗುತ್ತಾರೆ. ಅಲ್ಲದೇ ತನ್ನ ಕಾನೂನು, ನೀತಿ ಮತ್ತು ಅಂತರ್‌ರಾಷ್ಟ್ರೀಯ ನಿಯಮಗಳನ್ನು ಆಯ್ದ ದೇಶಗಳಿಗಷ್ಟೇ ಸೀಮಿತಗೊಳಿಸುತ್ತದೆ ಎಂದು ಜಗತ್ತಿಗೆ ಸಂದೇಶ ನೀಡಿದಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದೆ.
ನಮ್ಮ ನೀತಿಯನ್ನು ಇಸ್ರೇಲ್‌ಗೆ ಅನ್ವಯಿಸುವುದರಲ್ಲಿ ವಿಫಲರಾದರೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಝಾದ ಮೇಲೆ ಯುದ್ಧ ಮುಂದುರಿಸುತ್ತಾರೆ. ಅಲ್ಲದೇ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಇಸ್ರೇಲ್‌ನ್ನು ಪ್ರತ್ಯೇಕಿಸುವುದರಿಂದ ಆ ಪ್ರದೇಶದಲ್ಲಿ ಮತ್ತಷ್ಟು ಅಸ್ಥಿರತೆ ಉಂಟಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಗಾಝಾದಲ್ಲಿ ಪರಿಸ್ಥಿತಿ ಸುಧಾರಿಸಲು ವಾಷಿಂಗ್ಟನ್ ವಿವರಿಸಿದ ಷರತ್ತುಗಳನ್ನು ಪೂರೈಸಲು ಇಸ್ರೇಲ್ ವಿಫಲವಾಗಿದೆ ಎಂದು ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಹೇಳಿದ್ದರೂ, ಬಿಡೆನ್ ಆಡಳಿತವು ಗಡುವು ಮುಗಿದ ಬಳಿಕ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮುಂದುವರಿಸುವುದಾಗಿ ತಿಳಿಸಿದೆ.
Today, I'm leading 20 Members of Congress to demand that the Biden Admin withhold offensive weapons from the Israeli military.
— Congressman Greg Casar (@RepCasar) December 17, 2024
U.S. law is clear: if the Netanyahu government does not allow sufficient food & medicine to enter Gaza, then the U.S. cannot send weapons. pic.twitter.com/NHhhZMuGt1