ದುಬೈ: ಕೆಐಸಿ(ಕರ್ನಾಟಕ ಇಸ್ಲಾಮಿಕ್ ಸೆಂಟರ್) ಅಲ್ ಕೌಸರ್ ಯೂತ್ ವಿಂಗ್ ಯುಎಇ ಹಾಗು ಕೆಐಸಿ ಯುಎಇ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ಕೆಐಸಿ ಪ್ರಚಾರಾರ್ಥ ‘KIC FAMILY MULAQATH – 2025’ ಕಾರ್ಯಕ್ರಮವನ್ನು ಜನವರಿ 5ರಂದು ದುಬೈ ಮುಶ್ರೀಫ್ ಪಾರ್ಕ್ ಕವನೀಜ್ – ರಾಶಿದಿಯಾದಲ್ಲಿ ಹಮ್ಮಿಕೊಂಡಿದೆ.


ಪ್ರಸಕ್ತ ಕಾರ್ಯಕ್ರಮದಲ್ಲಿ ಕೆಐಸಿ ಹಿತೈಷಿಗಳು, ಪೋಷಕರು, ಅನಿವಾಸಿ ಸಹೋದರ ಸಂಘ ಸಂಸ್ಥೆಗಳ ನೇತಾರರು ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿ ಹಿರಿಯರು, ಕಿರಿಯರು, ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಮನೋರಂಜನಾ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಆಮಂತ್ರಣ ಪತ್ರ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಶಾರ್ಜಾ ಕೆಐಸಿ ಸಮಾರಂಭದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಳ್ ಅವರ ನೇತೃತ್ವದಲ್ಲಿ ನಡೆಯಿತು. ಸಮಾರಂಭದಲ್ಲಿ ಸಿರಾಜುದ್ದೀನ್ ಫೈಝಿ ಬಂಟ್ವಾಳ , ಕೆಐಸಿ ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಶರೀಫ್ ಕೊಡಿನೀರ್, ಶಾರ್ಜಾ ಸಮಿತಿ ಅಧ್ಯಕ್ಷ ಮೂಸಾ ಪೆರವಾಯಿ, ಕೆಐಸಿ ಅಲ್ ಕೌಸರ್ ಯೂತ್ ವಿಂಗ್ ಅಧ್ಯಕ್ಷ ಆಸೀಫ್ ಮರೀಲ್, ಕೆಐಸಿ ಶಾರ್ಜಾ ಸಮಿತಿ ನೇತಾರರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅನಿವಾಸಿ ಕೆಐಸಿ ಹಿತೈಷಿಗಳು, ಅನಿವಾಸಿ ದೀನೀ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕಾರ್ಯಕ್ರಮದ ಆಯೋಜಕರು ವಿನಂತಿಸಿಕೊಂಡಿದ್ದಾರೆ.