ಯುಎಇದುಬೈಯಲ್ಲಿ ಫೆ.9ರಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್...

ದುಬೈಯಲ್ಲಿ ಫೆ.9ರಂದು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಿಂದ ವಿನೂತನ ಕಾರ್ಯಕ್ರಮ!

ಯುವ ಉದ್ಯಮಿಗಳಿಗೆ ಸುವರ್ಣಾವಕಾಶ

ದುಬೈ: ಯುಎಇಯ ‘ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ’ ವಿಭಾಗವು ಬ್ಯಾರಿ ಸಮುದಾಯದ ಉದ್ಯಮಿಗಳನ್ನು ಪ್ರೇರೇಪಿಸಲು ‘ಬ್ಯಾರಿ ಶಾರ್ಕ್ ಥಿಂಕ್‌’ (Beary Shark Think) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ದುಬೈಯ ಪ್ರತಿಷ್ಠಿತ ಎತಿಸಲಾತ್ ಅಕಾಡೆಮಿಯಲ್ಲಿ ಫೆ.9ರಂದು ನಡೆಯುವ ‘ಬ್ಯಾರಿ ಮೇಳ-2025’ರಲ್ಲಿ ‘ಬ್ಯಾರಿ ಶಾರ್ಕ್ ಥಿಂಕ್‌’ ಕಾರ್ಯಕ್ರಮವು ನಡೆಯಲಿದೆ.

‘ಬ್ಯಾರಿ ಶಾರ್ಕ್ ಥಿಂಕ್‌’ ವಿದ್ಯಾರ್ಥಿಗಳು, ಯುವ ಉದ್ಯಮಿಗಳು ಮತ್ತು ಮಹಿಳಾ ಉದ್ಯಮಿಗಳಿಗೆ ತಮ್ಮ ನವೀನ ವ್ಯವಹಾರ ಕಲ್ಪನೆಗಳನ್ನು ಪ್ರಸ್ತುತಪಡಿಸಲು ಒಂದು ಅನನ್ಯ ವೇದಿಕೆಯಾಗಿದೆ. ಇದು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು, ಯುವ ಉದ್ಯಮಿಗಳಿಗೆ ಉತ್ತೇಜಿಸಲಿದೆ.

ಬ್ಯಾರಿಸ್ ಚೇಂಬರ್ ಯುಎಇ ವಿಭಾಗದ ಅಧ್ಯಕ್ಷ ಹಿದಾಯತ್ ಅಡ್ಡೂರ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಬ್ಯಾರಿ ಶಾರ್ಕ್ ಥಿಂಕ್‌ ಹೊಸತನವನ್ನು ಪ್ರೇರೇಪಿಸುವ ಮತ್ತು ನಮ್ಮ ಸಮುದಾಯಕ್ಕೆ ಅವಕಾಶಗಳನ್ನು ಸೃಷ್ಟಿಸುವ ವೇದಿಕೆಯಾಗಿದೆ. ಯುವ ಪ್ರತಿಭೆಗಳನ್ನು ಪೋಷಿಸಲು ಮತ್ತು ಅವರ ಆಲೋಚನೆಗಳಿಗೆ ವೇದಿಕೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಬ್ಯಾರೀಸ್ ಚೇಂಬರ್ ಯುಎಇ ವಿಭಾಗದ ಉಪಾಧ್ಯಕ್ಷರಾದ ಬಶೀರ್ ಕಿನ್ನಿಂಗಾರ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ವಿದ್ಯಾರ್ಥಿಗಳು, ಯುವ ಉದ್ಯಮಿಗಳು ಮತ್ತು ಮಹಿಳಾ ಉದ್ಯಮಿಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿದ್ದೇವೆ ಮತ್ತು ವ್ಯಾಪಾರ ಜಗತ್ತಿನಲ್ಲಿ ತಮ್ಮ ಛಾಪು ಮೂಡಿಸಲು ಅವರನ್ನು ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದ್ದಾರೆ.

ಈ ಕಾರ್ಯಕ್ರಮ ಬ್ಯಾರಿ ಮೇಳ 2025ರ ಪ್ರಮುಖ ಭಾಗವಾಗಿದ್ದು, ಬ್ಯಾರಿ ಮೇಳದಲ್ಲಿ ಬ್ಯಾರಿ ಬಿಸಿನೆಸ್ ಪ್ರಶಸ್ತಿ ಪ್ರದಾನ, ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಯುವ ಉದ್ಯಮಿಗಳು ತಮ್ಮ ಉದ್ಯಮದ ಬಗ್ಗೆ 2025ರ ಜನವರಿ 25ರ ಮೊದಲು MS Word ಅಥವಾ PPT ಸ್ವರೂಪದಲ್ಲಿ [email protected] ಪ್ರಸ್ತಾಪವನ್ನು ಸಲ್ಲಿಸಬಹುದಾಗಿದೆ.

ಈ ಕುರಿತು ಹೆಚ್ಚಿನ ವಿವರಗಳು, ಮಾಹಿತಿ ಮತ್ತು ಪ್ರಶ್ನೆಗಳಿಗೆ ಸಂಪರ್ಕ ಸಂಖ್ಯೆ +971 56 413 1544, +971 55 111 8555 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

Related Articles

Popular Categories