ಇತರೆದಿ. ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಕುರಿತ ʼದಿ...

ದಿ. ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಕುರಿತ ʼದಿ ಬಂದರ್ ಲೆಗಸಿʼ ಪುಸ್ತಕ ಬಿಡುಗಡೆ

ದುಬೈ: ದಿವಂಗತ ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಮತ್ತು ಪರಂಪರೆಯನ್ನು ಒಳಗೊಂಡ “ದಿ ಬಂದರ್ ಲೆಗಸಿ” ಎಂಬ ಹೊಸ ಪುಸ್ತಕ ಬಿಡುಗಡೆಯಾಗಿದೆ ಎಂದು ತುಂಬೆ ಗ್ರೂಪ್ ಸ್ಥಾಪಕ ಮತ್ತು ಅಧ್ಯಕ್ಷ ಡಾ. ತುಂಬೆ ಮೊಯ್ದೀನ್ ಅವರು ತಿಳಿಸಿದ್ದಾರೆ.

ಮೊಯ್ದೀನ್ ಚೆಯ್ಯಬ್ಬ ಅವರು ದಿವಂಗತ ಹಸನ್ ಹಾಜಿ, ಬಿ.ಅಹಮದ್ ಹಾಜಿ, ಬಿ.ಅಬ್ದುಲ್ ಖಾದರ್ ಹಾಜಿ ಅವರ ತಂದೆ ಮತ್ತು ಡಾ.ತುಂಬೆ ಮೊಯ್ದೀನ್ ಅವರ ತಾತ. “ದಿ ಬಂದರ್ ಲೆಗಸಿ” ಪುಸ್ತಕವು ಮೊಯ್ದೀನ್ ಚೆಯ್ಯಬ್ಬ ಅವರ ಪ್ರಾರಂಭಿಕ ದಿನಗಳಿಂದ ಹಿಡಿದು ಬಂದರ್ ನಲ್ಲಿನ ಅವರ ಕ್ರಿಯಾತ್ಮಕ ಜೀವನದ ವರೆಗೆ ಇರುವ ಸಂಪೂರ್ಣ ಚಿತ್ರಣವನ್ನು ಒದಗಿಸುತ್ತದೆ. ದಕ್ಷಿಣ ಕರ್ನಾಟಕದ ಪರಿವರ್ತನೆ ಮತ್ತು ಸಮೃದ್ಧಿಗೆ ಮೊಯ್ದೀನ್ ಚೆಯ್ಯಬ್ಬ ಅವರ ಕೊಡುಗೆ ಬಗ್ಗೆ ಈ ಪುಸ್ತಕ ಬೆಳಕು ಚೆಲ್ಲಿದೆ.

ಈ ಪುಸ್ತಕದಲ್ಲಿ ಮೊಯ್ದೀನ್ ಚೆಯ್ಯಬ್ಬ ಅವರ ಕುಟುಂಬದ ಸದಸ್ಯರು ತಮ್ಮ ನೆನಪುಗಳು ಮತ್ತು ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ʼದಿ ಬಂದರ್ ಲೆಗಸಿ” ಎಂಬ ಈ ಅತ್ಯಾಸಕ್ತಿಕ ಪಯಣವು, ಓದುಗರಿಗೆ ಮೊಯ್ದೀನ್ ಚೆಯ್ಯಬ್ಬ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಹೆಮ್ಮೆಯುಂಟುಮಾಡುತ್ತದೆ.

ಈ ಪುಸ್ತಕವು ಕರಾವಳಿಯ ಪಟ್ಟಣಗಳಲ್ಲಿ ಮೊಯ್ದೀನ್ ಚೆಯ್ಯಬ್ಬ ಅವರ ಸಹನಶೀಲತೆ, ವ್ಯವಹಾರ ನೈಪುಣ್ಯತೆಯನ್ನು ವಿವರಿಸುತ್ತದೆ. ಅವರು ಅವಕಾಶಗಳನ್ನು ಬಳಸಿಕೊಂಡ ರೀತಿ, ಯುದ್ಧ ಕಾಲದ ಸವಾಲುಗಳನ್ನು, ಮತ್ತು ಬದಲಾವಣೆಯ ಅಗತ್ಯತೆಯನ್ನು ಹೇಗೆ ಎದುರಿಸಿದರು ಎಂಬುದನ್ನು ತಿಳಿಸುತ್ತದೆ.

“ದಿ ಬಂದರ್ ಲೆಗಸಿ” ಪುಸ್ತಕವು ನಮ್ಮ ಕುಟುಂಬದ ಯುವ ಸದಸ್ಯರಿಗೆ ಪ್ರೇರಣಾದಾಯಕ ಬೆಳಕಾಗಿದೆ. ಸಹನೆ, ಸಮರ್ಪಣೆ, ಮತ್ತು ಯಶಸ್ಸಿನ ಕಥೆಗಳ ಮೂಲಕ ನಾವು ಅವರಿಗೆ ತಮ್ಮ ಜೀವನದಲ್ಲಿ ಮಹತ್ವವನ್ನು ಸಾಧಿಸಲು ಪ್ರೇರೇಪಿಸುತ್ತೇವೆ.

ಈ ಪುಸ್ತಕವು ಓದುಗರಿಗೆ ಆಳವಾದ ರಸಮಯತೆಯನ್ನು ತರಬಲ್ಲದು ಎಂಬ ನಂಬಿಕೆಯಲ್ಲಿದ್ದೇವೆ. ಈ ಪುಸ್ತಕವನ್ನು ಯಶಸ್ವಿಯಾಗಿ ಸಿದ್ಧಪಡಿಸಲು ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಡಾ. ತುಂಬೆ ಮೊಯ್ದೀನ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories