ಯುಎಇದುಬೈನಲ್ಲಿ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಂದ...

ದುಬೈನಲ್ಲಿ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಂದ ಯಶಸ್ವಿಯಾಗಿ ನಡೆದ 13ನೇ ವರ್ಷದ ರಕ್ತದಾನ ಶಿಬಿರ

ದುಬೈ: ಯುಎಇಯಲ್ಲಿ ಹಾಗೂ ಕರಾವಳಿಯಲ್ಲಿ ಹೆಸರು ವಾಸಿಯಾಗಿರುವ ಹೋಟೆಲ್ ಉದ್ಯಮ ಸಂಸ್ಥೆ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಕಳೆದ 13 ವರ್ಷದಿಂದ ತನ್ನ ತಂದೆ-ತಾಯಿಯ ಮದುವೆಯ ವಾರ್ಷಿಕ ದಿನದಂದು ದುಬೈನಲ್ಲಿ ನಡೆಸಿಕೊಂಡು ಬರುತ್ತಿರುವ ರಕ್ತದಾನ ಶಿಬಿರದ ಕಾರ್ಯಕ್ರಮವು ಮೇ 22ರಂದು ದುಬೈಯ ಫಾರ್ಚೂನ್ ಪ್ಲಾಝದಲ್ಲಿ ಯಶಸ್ವಿಯಾಗಿ ನಡೆಯಿತು.

ದುಬೈ ಹೆಲ್ತ್ ಅಥೋರಿಟಿಯ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವು ಬೆಳಗ್ಗೆ 9 ರಿಂದ ಮಧ್ಯಾಹ್ನ 2ರ ವರೆಗೆ ಯಶಸ್ವಿಯಾಗಿ ಜರುಗಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಸಿಬ್ಬಂದಿ ವರ್ಗದವರು, ದುಬೈ ತುಳು-ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪ್ರವೀಣ್ ಶೆಟ್ಟಿಯವರ ಸ್ನೇಹಿತರು, ಹಿತೈಷಿಗಳು ಶಿಬಿರದಲ್ಲಿ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ನನ್ನ ಮಾತಪಿತರಾದ ಸರೋಜಿನಿ ಶೆಟ್ಟಿ ಮತ್ತು ನಾರಯಣ ಶೆಟ್ಟಿಯವರ ಮದುವೆಯ ವರ್ಷದ ಈ ಶುಭ ದಿನದಂದು ಕಳೆದ ಹದಿಮೂರು ವರ್ಷಗಳಿಂದ ಈ ಕಾರ್ಯಕ್ರಮವನ್ನು ದುಬೈನಲ್ಲಿ ಆಚರಿಸಿಕೊಂಡು ಬರುತ್ತಿದ್ದೇನೆ. ಈ ವರ್ಷ ನನಗೆ ವಿಶೇಷ ವರ್ಷ ನನ್ನ ಪೋಷಕರು ವೈವಾಹಿಕ ಜೀವನಕ್ಕೆ ಕಾಲಿಟ್ಟು 60ನೇ ವರ್ಷ ಆಚರಿಸುತ್ತಿದ್ದಾರೆ. ಇಂದು ನಾವು ದಾನ ಮಾಡಿದ ಪ್ರತಿ ಹನಿ ರಕ್ತವು ನಾಳೆಯ ಜೀವವನ್ನು ಉಳಿಸುವ ಶಕ್ತಿಯನ್ನು ಹೊಂದಿದೆ. ನನ್ನ ಈ ರಕ್ತದಾನ ಶಿಬಿರಕ್ಕೆ ಕೈ ಜೋಡಿಸಿ ನಿಂತ ನನ್ನ ಎಲ್ಲ ಸಿಬ್ಬಂದಿಗಳು, ತುಳು, ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ನನ್ನ ಸ್ನೇಹಿತರಿಗೆ ಹಾಗೂ ರಕ್ತದಾನ ಮಾಡಿದ ಎಲ್ಲ ರಕ್ತದಾನಿಗಳಿಗೆ ಧನ್ಯವಾದ ತಿಳಿಸಿದರು.

ದುಬೈ ಹೆಲ್ತ್ ಅಥೋರಿಟಿಯ ಸಿಬ್ಬಂದಿ ವರ್ಗದವರು ಮಾತನಾಡುತ್ತಾ, ಕಳೆದ ಕೆಲವು ವರ್ಷಗಳಿಂದ ಫಾರ್ಚೂನ್ ಗ್ರೂಪ್ ಸಂಸ್ಥೆಯ ಸದಸ್ಯರು ರಕ್ತದಾನ ಮಾಡುತ್ತಾ ಇದ್ದಾರೆ. ವರ್ಷದಿಂದ ವರ್ಷಕ್ಕೆ ದಾಖಲೆಯ ಸಂಖ್ಯೆಯಲ್ಲಿ ರಕ್ತದಾನ ಮಾಡುವ ದಾನಿಗಳಿಗೆ ಶುಭವನ್ನು ಹಾರೈಸಿ ಸಂಸ್ಥೆಯನ್ನು ಶ್ಲಾಘಿಸಿದರು.

ಯುಎಇಯ ತುಳು-ಕನ್ನಡ ಸಂಘ ಸಂಸ್ಥೆಗಳ ರಕ್ತದಾನ ಶಿಬಿರದ ಯಶಸ್ವಿ ಸಂಘಟಕ ಬಾಲಕೃಷ್ಣ ಸಾಲಿಯಾನ್ ಅವರ ನೇತೃತ್ವದಲ್ಲಿ ಶಿಬಿರವು ಯಶಸ್ವಿಯಾಗಿ ನಡೆಯಿತು.

ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಯುಎಇ ಬಂಟ್ಸ್ ನ ರಮಾನಂದ ಶೆಟ್ಟಿ, ವಾಸು ಶೆಟ್ಟಿ, ವಸಂತ ಶೆಟ್ಟಿ, ಕನ್ನಡಿಗರು ಕನ್ನಡ ಕೂಟ ದುಬೈಯ ಸಾದನ್ ದಾಸ್, ಕರ್ನಾಟಕ ಸಂಘ ದುಬೈಯ ಶಶಿಧರ್ ನಾಗರಾಜಪ್ಪ, ನಾಗರಾಜ ರಾವ್ ಉಡುಪಿ, ಪರ್ವ ಗ್ರೂಪ್ ನ ನೀಲೇಶ್ ಎಚ್.ಪಿ, ಯಕ್ಷಗಾನ ಅಭ್ಯಾಸ ಕೇಂದ್ರದ ಸಂದೀಪ್ ಶೆಟ್ಟಿ ಕೊಟ್ಟಿಂಜ, ಗಮ್ಮತ್ ಕಲಾವಿದೆರ್ ನ ರಾಜೇಶ್ ಕುತ್ತಾರ್, ಪತ್ರಕರ್ತರು-ಅಂಕಣಕಾರರಾದ ಇರ್ಷಾದ್ ಮೂಡಬಿದ್ರೆ, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿ ಶಿಬಿರಕ್ಕೆ ಶುಭವನ್ನು ಹಾರೈಸಿದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಪ್ರಾಚಿ ಶೆಟ್ಟಿ ಸ್ವಾಗತಿಸಿ, ಧನ್ಯವಾದವಿತ್ತರು.

ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories