ಯುಎಇಯುಎಇಯಲ್ಲಿ 3ನೇ ವರ್ಷದ 'ಬಡಗುತಿಟ್ಟು ಯಕ್ಷಗಾನೋತ್ಸವ'; ಅಕ್ಟೋಬರ್ 11,...

ಯುಎಇಯಲ್ಲಿ 3ನೇ ವರ್ಷದ ‘ಬಡಗುತಿಟ್ಟು ಯಕ್ಷಗಾನೋತ್ಸವ’; ಅಕ್ಟೋಬರ್ 11, 12ರಂದು ಅಬುಧಾಬಿ-ದುಬೈಯಲ್ಲಿ ‘ದಕ್ಷಯಜ್ಞ’-‘ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನ

ದುಬೈ: ಯುಎಇಯ ಕನ್ನಡಿಗರ ಸಹಕಾರದೊಂದಿಗೆ ದುಬೈ ಮತ್ತು ಅಬುಧಾಬಿಯಲ್ಲಿ ಮೂರನೇ ವರ್ಷ ಬಡಗುತಿಟ್ಟು ಯಕ್ಷಗಾನೋತ್ಸವವನ್ನು ಆಯೋಜಿಸಲಾಗಿದೆ. ಸಂಸ್ಕೃತಿ, ಕಲೆ ಹಾಗೂ ಯಕ್ಷಗಾನದ ಪರಂಪರೆಯನ್ನು ವಿದೇಶದ ಭೂಮಿಯಲ್ಲಿ ಹರಡುವ ಉದ್ದೇಶದಿಂದ ಈ ವಿಶೇಷ ಸಾಂಸ್ಕೃತಿಕ ಸಂಭ್ರಮವನ್ನು ನಡೆಸಲಾಗುತ್ತಿದೆ.

ಅಬುಧಾಬಿ ಅಲ್ ರೀಮ್ ಐಲ್ಯಾಂಡ್ ನ GEMS World Academyಯಲ್ಲಿ ಅಕ್ಟೋಬರ್ 11ರ ಶನಿವಾರ ಸಂಜೆ 4 ಗಂಟೆಗೆ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ದುಬೈಯ ಅಲ್ ಖೈಲ್ ರೋಡಿನ GEMS New Millennium ಸ್ಕೂಲ್ ನಲ್ಲಿ ಅಕ್ಟೋಬರ್ 12ರ ರವಿವಾರ ಮಧ್ಯಾಹ್ನ 2.30 ಗಂಟೆಗೆ ‘ಮಾರುತಿ ಪ್ರತಾಪ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಕಳೆದ ಎರಡು ವರ್ಷಗಳಲ್ಲಿ ಯುಎಇ ಕನ್ನಡಿಗರಿಗೆ ಅದ್ಭುತ ಯಕ್ಷಗಾನ ಕಲೆಗಳನ್ನು ಪರಿಚಯಿಸಿದ್ದ ಆಯೋಜಕರು ಈ ಬಾರಿಯೂ ಅದೇ ಉತ್ಸಾಹದೊಂದಿಗೆ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದಾರೆ. ಪ್ರವೇಶ ಹಾಗೂ ಪಾರ್ಕಿಂಗ್ ಉಚಿತ, ಎಲ್ಲಾ ಕನ್ನಡಿಗರು ಮತ್ತು ಯಕ್ಷಗಾನ ಪ್ರೇಮಿಗಳಿಗೆ ಮುಕ್ತ ಆಹ್ವಾನವನ್ನು ಸಂಘಟಕರು ಪ್ರಕಟಣೆ ಮೂಲಕ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವಿನಾಯಕ ಹೆಗಡೆ: 056 764 8855, ಪ್ರಶಾಂತ್ ಭಟ್: 056 366 5540, ಗಣಪತಿ ಭಟ್: 050 475 2611 ಅವರನ್ನು ಸಂಪರ್ಕಿಸಬಹುದು.

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories