ಯುಎಇದುಬೈ; ಅ.11ರಂದು 'ಗಮ್ಮತ್ ಕಲಾವಿದೆರ್ ದುಬೈ' ತಂಡದಿಂದ 'ಪೋನಗ...

ದುಬೈ; ಅ.11ರಂದು ‘ಗಮ್ಮತ್ ಕಲಾವಿದೆರ್ ದುಬೈ’ ತಂಡದಿಂದ ‘ಪೋನಗ ಕೊನೊಪರಾ..?’ ನಾಟಕ

ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ ಬಂದಿರುವ ‘ಗಮ್ಮತ್ ಕಲಾವಿದೆರ್ ದುಬೈ’ ಯುಎಇ ತಂಡವು ಅಕ್ಟೋಬರ್ 11ರಂದು ಮತ್ತೊಮ್ಮೆ ಮನರಂಜನೆ ನೀಡಲು ತಯಾರಾಗಿ ನಿಂತಿದೆ.

ಅಕ್ಟೋಬರ್ 11ರಂದು ಸಂಜೆ 5 ಗಂಟೆಗೆ ನಗರದ ಎಮಿರೇಟ್ಸ್ ಥೀಯೇಟರ್ ಉಮ್ ಅಲ್ ಸೈಫ್ ನ ಸಭಾಂಗಣದಲ್ಲಿ “ಪೋನಗ ಕೊನೊಪರಾ..?” ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ನಾಟಕ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಯವರು ಮಾಧ್ಯಮದೊಂದಿಗೆ ಮಾತನಾಡುತ್ತಾ, ಖ್ಯಾತ ರಂಗ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ರಚನೆಯ “ಪೋನಗ ಕೊನೊಪರಾ” ಈ ನಾಟಕವು ವಿಶೇಷ ಶೈಲಿಯಲ್ಲಿ ಮೂಡಿಬಂದಿದೆ. ಈ ನಾಟಕವು ಯುಎಇಯ ನಾಟಕ ಅಭಿಮಾನಿಗಳಿಗೆ ಇಷ್ಟವಾಗಬಹುದು. ಯುಎಇಯಲ್ಲಿ ಇರುವ ತುಳುವರು ಈ ನಾಟಕವನ್ನು ನೋಡಲೇಬೇಕು ಎಂದು ವಿನಂತಿಸಿದ್ದರಲ್ಲದೆ, ಕಾರ್ಯಕ್ರಮಕ್ಕೆ ಊರಿಂದ ಮುಖ್ಯ ಅತಿಥಿಯಾಗಿ ಖ್ಯಾತ ಜ್ಯೋತಿಷ್ಯರು, ಮುಂಬಯಿ ಸೈನ್ ಕನ್ನಡ‌ ಸಂಘದ ಅಧ್ಯಕ್ಷರಾದ ಡಾ.ಎಂ.ಜೆ.ಪ್ರವೀಣ್ ಭಟ್, ಖ್ಯಾತ ಮುಳುಗು ತಜ್ಞ, ಸಮಾಜ ಸೇವಕರಾದ ಈಶ್ವರ್ ಮಲ್ಪೆ, ಪತ್ರಕರ್ತ ವಾಲ್ಟರ್ ನಂದಳಿಕೆಯವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories