ದುಬೈ: ಖ್ಯಾತ ಗಾಯಕ ಅಶೋಕ್ ಅಂಚನ್ ಅವರ ನೇತೃತ್ವದಲ್ಲಿ, ಸಪ್ತ ಸ್ವರ ಹಾಡುಗಾರರ ತಂಡವು ಅಕ್ಟೋಬರ್ 12ರಂದು ಸಂಜೆ 4 ಗಂಟೆಗೆ ದುಬೈಯ ಜುಮೈರಾ ಎಮಿರೇಟ್ಸ್ ಥಿಯೇಟರ್ ನಲ್ಲಿ ‘ಅನ್ಮೋಲ್ ಯಾದೇ’ ಎಂಬ ಸ್ಮರಣೀಯ ಗೋಲ್ಡನ್ ಮೆಲೋಡೀಸ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಕನ್ನಡ, ತುಳು, ಕೊಂಕಣಿ ಹಾಗೂ ಹಿಂದಿ ಸೇರಿದಂತೆ ನಾಲ್ಕು ಭಾಷೆಗಳ ಮಧುರ ಗೀತೆಗಳನ್ನು 12ಕ್ಕೂ ಹೆಚ್ಚು ಪ್ರತಿಭಾವಂತ ಗಾಯಕರು ಹಾಗೂ ಗಾಯಕಿಯರು ತಮ್ಮ ಸುಮಧುರ ಧ್ವನಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಕಳೆದ ದಶಕದ ಜನಪ್ರಿಯ ಹಳೆಯ ಹಾಗೂ ಹೊಸ ಮೆಲೋಡಿ ಹಾಡುಗಳ ಸ್ಮರಣೀಯ ಸಂಗ್ರಹ ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ ಆಗಿದೆ.
ಈ ಕಾರ್ಯಕ್ರಮವನ್ನು ಎಂಎಂಇ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಪ್ರಸ್ತುತಪಡಿಸುತ್ತಿದ್ದು, ಕರ್ನಾಟಕ ಸಂಘ ದುಬೈಯ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಲೈವ್ ಆರ್ಕೆಸ್ಟ್ರಾ ಸಹಿತ ಅತ್ಯುನ್ನತ ಮಟ್ಟದ ಸೌಂಡ್ ಮತ್ತು ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.