ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಆಶ್ರಯದಲ್ಲಿ ರವಿವಾರ ಶಾರ್ಜಾದ ಅಲ್ ಬತಾಯಿ ಬಿಸಿಸಿ ಕ್ರೀಡಾಂಗಣದಲ್ಲಿ(BCC Ground al batayih- Sharjha) ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’ ಕ್ರಿಕೆಟ್ ಪಂದ್ಯಾಟ ಅದ್ದೂರಿಗಾಗಿ ನಡೆಯಿತು.






ಗ್ರೀನ್ ಟೀಮ್ ಪ್ರಾಯೋಜಕತ್ವದಲ್ಲಿ ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಅಧ್ಯಕ್ಷ ಮೊಹಮ್ಮದ್ ಆಶಿಕ್ ಅವರ ಸಾರಥ್ಯದಲ್ಲಿ ನಡೆದ ‘ಬದ್ರಿಯಾ ಪ್ರೀಮಿಯರ್ ಲೀಗ್(BPL)-ಸೀಸನ್ 8’ ಕ್ರಿಕೆಟ್ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಅಲ್ ದನಾ XI ತಂಡವು ರಾಯಲ್ ಥಂಡರ್ ಕುಡ್ಲವನ್ನು ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
ರವಿವಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ ವರಗೆ ನಡೆದ ಈ ಪಂದ್ಯಾಕೂಟದಲ್ಲಿ ಯುಎಇಯ ಒಟ್ಟು 5 ಆಹ್ವಾನಿತ ಬಲಿಷ್ಠ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಿದವು.
ಜಹ್ನಾಝ್ ಹಾಗು ರಮೀಝ್ ಮಾಲಕತ್ವದ ‘ಡೈಮಂಡ್ XI ಬ್ರಿಗೇಡ್’, ಲತೀಫ್ BL, ಅರ್ಫಾ, ಝಹೀರ್ ಮಾಲಕತ್ವದ ‘ರಾಯಲ್ ಥಂಡರ್ಸ್ ಕುಡ್ಲ’, ಇಕ್ಬಾಲ್ ಮಾಲಕತ್ವದ ‘ಲಾಝ್ ಬ್ರದರ್ಸ್’, ಹನೀಫ್ ಮಾಲಕತ್ವದ ‘ಡಿಜಿಫೀಟ್ ಡೇರ್ ಡೆವಿಲ್ಸ್’ ಹಾಗು ಸೌದ್ ಮಾಲಕತ್ವದ ‘ಅಲ್ ದನಹ್ XI’ ತಂಡಗಳು ಪಂದ್ಯಾಟದಲ್ಲಿ ಸೆಣಸಾಟ ನಡೆಸಿತು.





ಪಂದ್ಯಾಟದ ವೈಯಕ್ತಿಕ ಬಹುಮಾನ….
ಮ್ಯಾನ್ ಆಫ್ ದ ಮ್ಯಾಚ್ / ಪಂದ್ಯದ ಉತ್ತಮ ಆಟಗಾರ – ಬಾತಿಷಾಮ್
ಟೂರ್ನಮೆಂಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್ – ಸಫ್ವಾನ್ ಶೇಖ್
ಟೂರ್ನಮೆಂಟ್‌ನ ಅತ್ಯುತ್ತಮ ಬೌಲರ್ – ಅಶಿಕ್ ರಿಪ್ಪನ್ ಪೇಟೆ
ಟೂರ್ನಮೆಂಟ್‌ನ ಅತ್ಯುತ್ತಮ ಕ್ಯಾಚ್ –ಮುನಾಝ್
ಪ್ಲೇಯರ್ ಆಫ್ ದ ಸೀರೀಸ್ / ಸರಣಿಯ ಅತ್ಯುತ್ತಮ ಆಟಗಾರ – ಸಫ್ವಾನ್ ಸುಳ್ಯ





ಉದ್ಘಾಟನಾ ಸಮಾರಂಭ
ಉದ್ಘಾಟನಾ ಸಮಾರಂಭದಲ್ಲಿ ಗಡಿಯಾರ್ ಗ್ರೂಪ್ ಆಫ್ ಕಂಪನಿಯ ಇಬ್ರಾಹಿಂ ಗಡಿಯಾರ್, ಈಗಲ್ ರಿಯಲ್ ಎಸ್ಟೇಟ್ ನ ಅಬುಸಾಲಿಹ್, ಬಿಸಿಎಫ್ ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ, ಅಫೀಕ್ ಹುಸೇನ್, ನವಾಝ್ ಕೋಟೆಕರ್, ರಫೀಕ್ ಮುಲ್ಕಿ, ಹಿದಾಯ ಫೌಂಡೇಶನ್ ನ ಖಾಸೀಂ, ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಅಧ್ಯಕ್ಷ ಮೊಹಮ್ಮದ್ ಆಶಿಕ್ ಉಪಸ್ಥಿತರಿದ್ದರು.


‘ಬದ್ರಿಯಾ ಶ್ರೇಷ್ಠ ಪ್ರಶಸ್ತಿ-2025’ ಪ್ರದಾನ
ಈ ಸಂದರ್ಭದಲ್ಲಿ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಹನೀಫ್ ಬಿಕರ್ಣಕಟ್ಟೆ ಮತ್ತು ನವಾಝ್ ಕೋಟೆಕರ್ ಅವರಿಗೆ ‘ಬದ್ರಿಯಾ ಶ್ರೇಷ್ಠ ಪ್ರಶಸ್ತಿ-2025’ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಆಶಿಕ್ ಅವರು ನಿರೂಪಿಸಿದರು.





ಬಹುಮಾನ ವಿತರಣೆ
ಸಮಾರೋಪ ಸಮಾರಂಭದಲ್ಲಿ ಚಾಂಪಿಯನ್ ಆಗಿ ಮೂಡಿಬಂದ ಅಲ್ ದನಾ XI ತಂಡಕ್ಕೆ ಯುಎಇ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಅವರು ಕಪ್ ನೀಡಿ ಅಭಿನಂದಿಸಿದರು. ರನ್ನರ್ ಅಪ್ ತಂಡ ರಾಯಲ್ ಥಂಡರ್ ಕುಡ್ಲಕ್ಕೆ ಉದ್ಯಮಿ ಸಲೀಂ(ಮೂಡಬಿದ್ರೆ) ಶಾರ್ಜಾ ಅವರು ಕಪ್ ನೀಡಿ ಗೌರವಿಸಿದರು. ಈ ವೇಳೆ ಸಮದ್. ಬೀರಲಿ, ಮೂಸಾ ಪರ್ವಾಯಿ, ಶಾಫಿ, ‘ಬದ್ರಿಯಾ ಫ್ರೆಂಡ್ಸ್ ಯುಎಇ’ ಅಧ್ಯಕ್ಷ ಮೊಹಮ್ಮದ್ ಆಶಿಕ್ ಉಪಸ್ಥಿತರಿದ್ದರು.


















