ಯುಎಇಕರ್ನಾಟಕ ಬಜೆಟ್-2026; 'ಪ್ರತ್ಯೇಕ ಸಚಿವಾಲಯ' ಘೋಷಣೆಯಾಗದಿರುವುದಕ್ಕೆ ಅನಿವಾಸಿ ಕನ್ನಡಿಗರಿಂದ...

ಕರ್ನಾಟಕ ಬಜೆಟ್-2026; ‘ಪ್ರತ್ಯೇಕ ಸಚಿವಾಲಯ’ ಘೋಷಣೆಯಾಗದಿರುವುದಕ್ಕೆ ಅನಿವಾಸಿ ಕನ್ನಡಿಗರಿಂದ ಆಕ್ರೋಶ; ಕೂಡಲೇ ‘ಪ್ರತ್ಯೇಕ ಸಚಿವಾಲಯ’ ಸ್ಥಾಪಿಸುವಂತೆ ಡಾ.ರೋನಾಲ್ಡ್ ಕೊಲಾಸೊ ಒತ್ತಾಯ

ದುಬೈ: ಈ ಬಾರಿಯ ಕರ್ನಾಟಕ ಬಜೆಟ್-2026ರಲ್ಲಿ ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಯಾಗಿರುವ ‘ಪ್ರತ್ಯೇಕ ಸಚಿವಾಲಯ’ ಘೋಷಣೆಯಾಗದಿರುವುದಕ್ಕೆ ಅನಿವಾಸಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್-2026ರಲ್ಲಿ ಅನಿವಾಸಿ ಕನ್ನಡಿಗರಿಗೆ ‘ಪ್ರತ್ಯೇಕ ಸಚಿವಾಲಯ’ ಸ್ಥಾಪನೆಯ ಕುರಿತು ಘೋಷಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅನಿವಾಸಿ ಕನ್ನಡಿಗರಿಗೆ ನಿರಾಸೆಯಾಗಿದೆ.

ಡಿಸೆಂಬರ್ 11ರಂದು ಬೆಳಗಾವಿ ಅಧಿವೇಶನದ ವೇಳೆ ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ‌ ಡಿ.ಕೆ.ಶಿವಕುಮಾರ್ ಹಾಗು ಗೃಹಸಚಿವರ ದ.ಜಿ.ಪರಮೇಶ್ವರ್ ಭೇಟಿಯಾದ ಸುಮಾರು ಹತ್ತಕ್ಕೂ ಹೆಚ್ಚು ದೇಶಗಳ 45 ಮಂದಿ ಕನ್ನಡಿಗ ಪ್ರತಿನಿಧಿಗಳ NRI ನಿಯೋಗವು ‘ಪ್ರತ್ಯೇಕ ಸಚಿವಾಲಯ’ಕ್ಕಾಗಿ ಒತ್ತಾಯಿಸಿತ್ತು. ಈ ವೇಳೆ ಶೀಘ್ರವೇ ‘ಪ್ರತ್ಯೇಕ ಸಚಿವಾಲಯ’ವನ್ನು ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವ ಕುಮಾರ್ ಭರವಸೆ ನೀಡಿದ್ದರು.

ಆದರೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆಯಾಗಲಿ, ಉಲ್ಲೇಖವಾಗಲಿ ವ್ಯಕ್ತಪಡಿಸದಿರುವುದು ಅನಿವಾಸಿ ಕನ್ನಡಿಗರಿಗೆ ಬೇಸರ ತಂದಿದೆ.

ಈ ಹಿಂದೆ ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೋಗಿದ್ದ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ಅವರು ಬೇಸರ ವ್ಯಕ್ತಪಡಿಸಿದ್ದು, ಈ ಬಾರಿ ಘೋಷಣೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ, ಆದರೆ ನಮ್ಮ ನಿರೀಕ್ಷೆಯನ್ನು ಕರ್ನಾಟಕ ಸರಕಾರ ಹುಸಿ ಮಾಡಿದೆ ಎಂದಿದ್ದಾರೆ.

ಕೇರಳ ಸರಕಾರ ಅಲ್ಲಿನ ಅನಿವಾಸಿಗರಿಗಾಗಿ ‘ಪ್ರತ್ಯೇಕ ಸಚಿವಾಲಯ’ ಸ್ಥಾಪಿಸುವ ಮೂಲಕ ಅವರ ಹಿತಕಾಯುತ್ತಿದೆ. ಅನಿವಾಸಿ ಕೇರಳಿಗರ ಕಷ್ಟ, ನೋವುಗಳಿಗೆ ವೇದಿಕೆಯನ್ನು ಒದಗಿಸಿ ಕೊಟ್ಟಿದೆ. ಅದೇ ರೀತಿ ಅನಿವಾಸಿ ಕನ್ನಡಿಗರ ಕಷ್ಟ, ನಷ್ಟಗಳಿಗೆ ಧ್ವನಿಯಾಗಲು ‘ಪ್ರತ್ಯೇಕ ಸಚಿವಾಲಯ’ ಸ್ಥಾಪಿಸುವಂತೆ ನಾವು ಮನವಿಯನ್ನು ಕೊಟ್ಟು ಒತ್ತಾಯಿಸಿದ್ದೆವು. ಆದರೆ ರಾಜ್ಯ ಸರಕಾರ ನಮ್ಮ ಬಹುಕಾಲದ ಬೇಡಿಕೆಗೆ ಮನ್ನಣೆ ನೀಡಿಲ್ಲ ಎಂದು ಬೇಸರವನ್ನು ತೋಡಿಕೊಂಡಿದ್ದಾರೆ.

‘ಪ್ರತ್ಯೇಕ ಸಚಿವಾಲಯ’ ಸ್ಥಾಪನೆಯಿಂದ ಕೇವಲ ಅನಿವಾಸಿ ಕನ್ನಡಿಗರಿಗೆ ಮಾತ್ರ ಪ್ರಯೋಜನ, ಲಾಭ ಅಗುದಲ್ಲ. ಬದಲಾಗಿ ಕರ್ನಾಟಕ ರಾಜ್ಯಕ್ಕೂ ಇದರಿಂದ ಬಹಳಷ್ಟು ಲಾಭ, ಪ್ರಯೋಜನ ಸಿಗಲಿದೆ ಎಂಬುದನ್ನು ಸರಕಾರ ಅರ್ಥ ಮಾಡಿಕೊಳ್ಳಲಿ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ‘ಪ್ರತ್ಯೇಕ ಸಚಿವಾಲಯ’ವನ್ನು ಘೋಷಣೆ ಮಾಡುವ ಮೂಲಕ ಅನಿವಾಸಿ ಕನ್ನಡಿಗರ ಬಹುಮುಖ್ಯ ಬೇಡಿಕೆಗೆ ಸ್ಪಂದಿಸಬೇಕು ಎಂದು ಡಾ.ರೋನಾಲ್ಡ್ ಕೊಲಾಸೊ ಒತ್ತಾಯಿಸಿದ್ದಾರೆ.

Hot this week

ಬೆಂಗಳೂರು; ಕನ್ನಡಿಗರ ಕೂಟ, ದುಬೈಯಿಂದ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪರಿಗೆ ಪ್ರತಿಷ್ಠಿತ ‘ಹುಟ್ಟೂರ ಸನ್ಮಾನ‌’ ಪ್ರದಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ “ಹುಟ್ಟುೂರ ಸನ್ಮಾನ”...

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

ಫ್ಲೋರಿಡಾ ತುಳು ಕೂಟದ 2ನೇ ವಾರ್ಷಿಕ ಪೊಟ್ಲಕ್ ಪಿಕ್ನಿಕ್ ಸಂಭ್ರಮ

ಅಮೇರಿಕದ ಫ್ಲೋರಿಡಾ ತುಳು ಕೂಟವು ಇತ್ತೀಚೆಗೆ ಕ್ಯಾಸೆಲ್‌ಬೆರ್ರಿ ಒರ್ಲಾಂಡೊದಲ್ಲಿ ತನ್ನ ಎರಡನೇ...

Related Articles

Popular Categories