ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ “ಹುಟ್ಟುೂರ ಸನ್ಮಾನ” ಕಾರ್ಯಕ್ರಮದಲ್ಲಿ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪ ಅವರಿಗೆ ಭವ್ಯ ಸನ್ಮಾನ ಮಾಡಲಾಯಿತು.

ಕನ್ನಡಿಗರ ಕೂಟ, ದುಬೈನ ದೀರ್ಘ ಪರಂಪರೆಯಾದ ಕರ್ನಾಟಕದ ಗಣ್ಯರನ್ನು ಅವರ ಹುಟ್ಟೂರಲ್ಲೇ ಗೌರವಿಸುವ ಸಂಸ್ಕೃತಿ ಈ ವರ್ಷವೂ ಮುಂದುವರಿಯಿತು. ಕನ್ನಡ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ಕೂಟದ ಬದ್ಧತೆ ಮತ್ತೊಮ್ಮೆ ಸ್ಪಷ್ಟವಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು ಅರುಣ್ ಕುಮಾರ್ MK ಮತ್ತು ಸಂಯುಕ್ತ ಪ್ರಧಾನ ಕಾರ್ಯದರ್ಶಿ ದೀಪಕ್ ಸೋಮಶೇಖರ ಉಪಸ್ಥಿತರಿದ್ದರು.
ಪ್ರಸಿದ್ಧ ಜನಪದ ಗಾಯಕ ಗೋ.ನಾ. ಸ್ವಾಮಿ ಅವರ ಮನಮುಟ್ಟಿದ ಹಾಡುಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು. ಜನಪ್ರಿಯ ಗಾಯಕ ಮತ್ತು ಮಿಮಿಕ್ರಿ ಕಲಾವಿದ ರವೀ ಸಂತು ಕಾರ್ಯಕ್ರಮವನ್ನು ಮನರಂಜನಾತ್ಮಕವಾಗಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿವಾದಿ ಹಾಗೂ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ V.B. ಸೋಮಶೇಖರ್, ಕೂಟದ ಹಿರಿಯ ಸದಸ್ಯ ತಿಮ್ಮಪ್ಪ ಗೌಡ, ಇಟಲಿ ಕನ್ನಡ ಸಂಘದ ಸದಸ್ಯ ಮಂಜುನಾಥ ಹಾಜರಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.





ಪದ್ಮಶ್ರೀ ಭೀಮವ್ವ ಅವರು ಕನ್ನಡಿಗರ ಕೂಟ, ದುಬೈಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿ, “ಹುಟ್ಟುೂರ ಸನ್ಮಾನ” ನೀಡಿದಕ್ಕಾಗಿ ಸಂಘದ ಅಧ್ಯಕ್ಷರು ಮತ್ತು ಸಂಪೂರ್ಣ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣ್ ಕುಮಾರ್ MK ಅವರು, ಕನ್ನಡ ಜನಪದ ಮತ್ತು ಕಲಾ ಪರಂಪರೆಯನ್ನು ಉಳಿಸಲು ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು ಮತ್ತು ಕಾರ್ಯಕ್ರಮಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲಾ ಸಮಿತಿ ಸದಸ್ಯರು ಮತ್ತು ಸಲಹಾ ಮಂಡಳಿಯವರಿಗೆ ಕೂಡ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

