ಸೌದಿ ಅರೇಬಿಯಾಜುಬೈಲ್; 'AQWA 40-ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್': ದಿಲ್‌ಪಸಂದ್ ಮೂಳೂರು...

ಜುಬೈಲ್; ‘AQWA 40-ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್’: ದಿಲ್‌ಪಸಂದ್ ಮೂಳೂರು ಚಾಂಪಿಯನ್, HMC ಅದಮಾರ್ ರನ್ನರ್‌ಅಪ್

ಜುಬೈಲ್ (ಸೌದಿ ಅರೇಬಿಯಾ): ಮೂಳೂರಿನ ಅಲ್-ಖಮರ್ ವೆಲ್ಫೇರ್ ಅಸೋಸಿಯೇಷನ್ (AQWA KSA) ವತಿಯಿಂದ ಆಯೋಜಿಸಲಾದ ‘AQWA 40-ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್’ ಅಲ್ ಫಲಾಹ್ ಕ್ರಿಕೆಟ್ ಮೈದಾನದಲ್ಲಿ ಯಶಸ್ವಿಯಾಗಿ ನಡೆಯಿತು.

AQWA ಸಂಸ್ಥೆಯ ಸ್ಥಾಪಕ ಸದಸ್ಯರಾದ ಅಬ್ದುಲ್ ಕರೀಮ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿದರು. ಕ್ರೀಡಾ ಮನೋಭಾವ, ಒಗ್ಗಟ್ಟು ಮತ್ತು ಸ್ನೇಹಸೌಹಾರ್ದದ ಸಂದೇಶ ಸಾರಿದ ಈ ಪಂದ್ಯಾವಳಿಯಲ್ಲಿ ಹಲವು ತಂಡಗಳು ಉತ್ಸಾಹದಿಂದ ಪಾಲ್ಗೊಂಡು ರೋಚಕ ಹಣಾಹಣಿಗೆ ಸಾಕ್ಷಿಯಾದವು.

ಅಂತಿಮ ಪಂದ್ಯದಲ್ಲಿ ‘ದಿಲ್‌ಪಸಂದ್ ಮೂಳೂರು’ ತಂಡವು ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ‘HMC ಅದಮಾರ್’ ತಂಡ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ವಿಜೇತ ತಂಡಗಳ ಸಹಿತ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ AQWA KSA ಅಭಿನಂದನೆ ಸಲ್ಲಿಸಿದೆ.

ಪಂದ್ಯಾವಳಿಯ ಯಶಸ್ಸಿಗೆ AMCC, Amplitude, Middle World ಮತ್ತು Hawel ಸಂಸ್ಥೆಗಳು ಪ್ರಾಯೋಜಕರಾಗಿ ಸಹಕಾರ ನೀಡಿದವು. ಸಂಘಟನಾ ಕಾರ್ಯದಲ್ಲಿ ಅಸೀಮ್ ಇಸ್ಮಾಯಿಲ್ ಮತ್ತು ಅವರ ತಂಡದ ಪರಿಶ್ರಮವನ್ನು AQWA ವಿಶೇಷವಾಗಿ ಶ್ಲಾಘಿಸಿದೆ.

ಇದರೊಂದಿಗೆ ತೆರೆಮರೆಯಲ್ಲಿ ಶ್ರಮಿಸಿದ ಅಬ್ದುಲ್ ಕರೀಮ್, ಮುಹಮ್ಮದ್ ಇಸ್ಮಾಯಿಲ್, ಹಾರಿಸ್ ಯೂಸುಫ್, ಮೊಹಮ್ಮದ್ ಅಲಿ, ಅಬ್ದುಲ್ ಖಾಲಿಕ್, ಅಬ್ದುಲ್ ಮುಬೀನ್, ಮುಹಮ್ಮದ್ ಸಿದ್ದೀಕ್, ಮನ್ಸೂರ್ ಸೇರಿದಂತೆ ಸಂಘಟನೆಯ ಎಲ್ಲಾ ಸದಸ್ಯರು ಹಾಗೂ ಸ್ವಯಂಸೇವಕರ ಸೇವೆಯನ್ನು ಸಮಿತಿ ಕೃತಜ್ಞತೆಯಿಂದ ಸ್ಮರಿಸಿದೆ.

ಪಂದ್ಯಾವಳಿಯಲ್ಲಿ ನಿಷ್ಪಕ್ಷಪಾತವಾಗಿ ತೀರ್ಪು ನೀಡಿದ ಅಂಪೈರ್‌ಗಳು ಹಾಗೂ ಸ್ಕೋರರ್‌ಗಳಿಗೂ ಆಯೋಜಕರು ಧನ್ಯವಾದ ಅರ್ಪಿಸಿದ್ದಾರೆ.

Hot this week

ಅಮರ ಮಧುರ ಗೀತೆ: ನೆನಪಿನಂಗಳದಲ್ಲಿ ಮತ್ತೆ ಅರಳಲಿವೆ ಹಳೆಯ ಕನ್ನಡ ಹಾಡುಗಳು; ಅ.29ರಂದು ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ

ಮನಾಮ(ಬಹರೈನ್): ಕೆಲವು ಹಾಡುಗಳು ಕೇವಲ ಸಂಗೀತವಲ್ಲ; ಅವು ಬದುಕಿನ ಅಮೂಲ್ಯ ನೆನಪುಗಳು....

ಕರ್ನಾಟಕ ಸಂಘ ಶಾರ್ಜಾದಿಂದ ‘ಮಯೂರ ಸವಿರುಚಿ 2026’: ಬೆಂಕಿರಹಿತ ಅಡುಗೆಯಲ್ಲಿ ಸೃಜನಶೀಲತೆ ಮೆರೆದ ಸ್ಪರ್ಧಿಗಳು

ಕರ್ನಾಟಕ ಸಂಘ ಶಾರ್ಜಾದ ವತಿಯಿಂದ ನಡೆದ ವಿನೂತನ ವಿಶೇಷ ಕಾರ್ಯಕ್ರಮ ದುಬೈ :...

ಅಜ್ಮಾನ್‌; ಅ.24ರಂದು ‘ಸೌಹಾರ್ದ ಸ್ವರ ಸಂಗಮ-2026’; ಹರೀಶ್ ಶೇರಿಗಾರ್, ಗಿರೀಶ್ ನಾರಾಯಣ್ ಅವರಿಗೆ ಸನ್ಮಾನ

ದುಬೈ: ಸೌಹಾರ್ದ ಲಹರಿ ಪ್ರಸ್ತುತಪಡಿಸುವ ‘ಸೌಹಾರ್ದ ಸ್ವರ ಸಂಗಮ-2026’ ಹಾಗೂ ದಿವಂಗತ...

ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲುಗೆ ಐಸಿಸಿ ಖತರ್‌ ಗೌರವ-ಸನ್ಮಾನ

ದೋಹಾ: ಖತರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ಅಪಾರ ಕೊಡುಗೆ ಹಾಗೂ ಕ್ರಿಯಾಶೀಲ...

Related Articles

Popular Categories