ಯುಎಇಶಾರ್ಜಾ; ನವೆಂಬರ್ 15ರಂದು 'ಶಾರ್ಜಾ ಕರ್ನಾಟಕ ಸಂಘ'ದ ರಾಜ್ಯೋತ್ಸವ;...

ಶಾರ್ಜಾ; ನವೆಂಬರ್ 15ರಂದು ‘ಶಾರ್ಜಾ ಕರ್ನಾಟಕ ಸಂಘ’ದ ರಾಜ್ಯೋತ್ಸವ; ಸುಂದರ್ ಶೆಟ್ಟಿಗೆ 2026ರ ‘ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’

ಶಾರ್ಜಾ: ಸಮಾಜಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ, ಕರ್ನಾಟಕ ಸಂಘ ಶಾರ್ಜಾ ನೀಡುವ 2026ರ ‘ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ’ಗೆ ಸಮಾಜಸೇವಕ ಹಾಗೂ ಉದ್ಯಮಿ ಸುಂದರ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸಂಘ ಶಾರ್ಜಾದ 24ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 15ರಂದು ಅಜ್ಮಾನ್‌ನ ನಾರ್ತ್ ಗೇಟ್ ಬ್ರಿಟಿಷ್ ಸ್ಕೂಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವು ಮಧ್ಯಾಹ್ನ 3:30ರಿಂದ ಆರಂಭವಾಗಲಿದೆ.

ವಿಶೇಷ ಸಾಧಕ ಗೌರವ
ಪ್ರತೀ ವರ್ಷದಂತೆ ಸಂಘದ ಸದಸ್ಯರಿಗೆ ಸಂಘದ ಸಂಘಟನೆ ಸೇವೆಗಾಗಿ ನೀಡುವ ಗೌರವವನ್ನು ನಮ್ಮ ಸಂಘದ ಸಕ್ರೀಯ ಸದಸ್ಯರಾದ ರಘರಾಮ್ ಶೆಟ್ಟಿಗಾರ್, ಕಲಾಸೇವೆಗಾಗಿ ಪ್ರಭಾಕರ ಸುವರ್ಣ ಮತ್ತು ಸಾಹಿತ್ಯ ಕ್ಷೇತ್ರದ ಅಬ್ದುಲ್ ಸಲಾಮ್ ಹಸನ್ ಬ್ಯಾರಿ ಅವರನ್ನೂ ಕೂಡ ಗುರುತಿಸಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ವಿಶೇಷ ಆಕರ್ಷಣೆ : ಅರ್ಷಿಯಾ ಖಾನ್ ರವರಿಂದ ಐತಲಕಡಿ ಕಾರ್ಯಕ್ರಮ
ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಡೈಜಿವರ್ಲ್ಡ್ ಹೆಸರಾಂತ ಟಿವಿ ಗೇಮ್ ಶೋ ಐತಲಕಡಿ ಕಾರ್ಯಕ್ರಮದ ಯಕ್ಷಪ್ರಿಯೇ ಆರ್ಷಿಯಾ ಖಾನ್ ವಿಶೇಷ ಆಹ್ವಾನಿತ ಅತಿಥಿಗಳಾಗಿ ಭಾಗವಹಿಸಿ ಐತಲಕಡಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಯುಎಇಯ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

Hot this week

KCWA holds Extra Ordinary General Body Meeting in Kuwait

Kuwait: The Kuwait Canara Welfare Association (KCWA) held its...

ನವೆಂಬರ್ 6ರಂದು ಕರ್ನಾಟಕ ಸಂಘ ಖತರ್‌ನ 71ನೇ ರಾಜ್ಯೋತ್ಸವ ‘ಕರುನಾಡ ವೈಭವ-2026’ 

ದೋಹಾ: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ...

ದುಬೈ; ಯುಎಇ ಬಂಟ್ಸ್‌ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ

ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಜಾತಿ ಸಂಘಟನೆಗಳಲ್ಲಿ ಹಿರಿಯ ಸಂಘಟನೆಯಾದ...

ಜುಬೈಲ್; ‘AQWA 40-ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್’: ದಿಲ್‌ಪಸಂದ್ ಮೂಳೂರು ಚಾಂಪಿಯನ್, HMC ಅದಮಾರ್ ರನ್ನರ್‌ಅಪ್

ಜುಬೈಲ್ (ಸೌದಿ ಅರೇಬಿಯಾ): ಮೂಳೂರಿನ ಅಲ್-ಖಮರ್ ವೆಲ್ಫೇರ್ ಅಸೋಸಿಯೇಷನ್ (AQWA KSA)...

ಅಮರ ಮಧುರ ಗೀತೆ: ನೆನಪಿನಂಗಳದಲ್ಲಿ ಮತ್ತೆ ಅರಳಲಿವೆ ಹಳೆಯ ಕನ್ನಡ ಹಾಡುಗಳು; ಅ.29ರಂದು ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ

ಮನಾಮ(ಬಹರೈನ್): ಕೆಲವು ಹಾಡುಗಳು ಕೇವಲ ಸಂಗೀತವಲ್ಲ; ಅವು ಬದುಕಿನ ಅಮೂಲ್ಯ ನೆನಪುಗಳು....

Related Articles

Popular Categories