ದುಬೈ: ‘ನಮ್ಮ ಕುಂದಾಪ್ರ ಕನ್ನಡ ಬಳಗ’ ಗಲ್ಫ್ ವತಿಯಿಂದ ಯುಎಇನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಫರ್ಧೆಗಳು ರವಿವಾರ ದುಬೈಯ ಝಬೀಲ್ ಪಾರ್ಕ್’ನಲ್ಲಿ ನಡೆಯಿತು.





ಅನಿವಾಸಿ ಕುಂದಗನ್ನಡಿಗರು ಗಲ್ಫ್ ರಾಷ್ಟ್ರಗಳಲ್ಲಿ ತಮ್ಮ ಭಾಷಿಗರನ್ನು ಒಗ್ಗೂಡಿಸುದರ ಜೊತೆಗೆ ಭಾಷೆಯ ಅಸ್ಥಿತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಹಲವಾರು ವರ್ಷಗಳಿಂದ ಕೊಲ್ಲಿ ರಾಷ್ಟ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಅಂತೆಯೇ ಪ್ರತಿ ವರ್ಷದಂತೆ ಈ ವರ್ಷವು ಕೂಡ ವಿಶೇಷ ರೀತಿಯಲ್ಲಿ ಫ್ಯಾಮಿಲಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಫರ್ಧೆಗಳು ಅದ್ದೂರಿಯಾಗಿ ನಡೆಯಿತು.





ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಅರಬರ ನಾಡಿನಲ್ಲಿ ನೆಲೆಸಿರುವ ಕುಂದಗನ್ನಡಿಗರು ಭಾಗವಹಿಸಿದ್ದರು. ಆಟೋಟ ಸ್ಫರ್ಧೆಗಳಿಗೆ 5 ತಂಡಗಳಾಗಿ ಮಾಡಲಾಗಿದ್ದು, ಪ್ರತೀ ತಂಡಗಳಿಗೆ ಕುಂದಾಪುರದ ವಿಶೇಷತೆಗಳಲ್ಲಿ ಒಂದಾದ ಪಂಚಗಂಗಾವಳಿ ನದಿಗಳಾದ ಸೌರ್ಪಣಿಕ, ವಾರಾಹಿ, ಖೇಟಾ, ಕುಬ್ಜಾ ಮತ್ತು ಚಕ್ರಾ ಎಂದು ಕುಂದಾಪುರದಲ್ಲಿ ಸಂಗವಿಸುವ ಐದು ನದಿಗಳ ಹೆಸರು ನೀಡಲಾಗಿತ್ತು.
ಗ್ರಾಮೀಣ ಆಟೋಟ ಸ್ಫರ್ಧೆಗಳ ಜೊತೆಗೆ ವೈಯಕ್ತಿಕ ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದೇ ರೀತಿ ಚಾಂಪಿಯನ್ ಆಗಿ ಮನೋಜ್ ದೇವಾಡಿಗ ನಾಯಕತ್ವದ ವಾರಾಹಿ ತಂಡ ಹೊರಹೊಮ್ಮಿದರೆ, ರನ್ನರ್ಸ ಆಗಿ ಪ್ರವೀಣ್ ಆಚಾರ್ಯ ನಾಯಕತ್ವದ ಕುಬ್ಜಾ ತಂಡ ಹೊರಹೊಮ್ಮಿತು.









ಕಾರ್ಯಕ್ರಮವನ್ನು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಸ್ಥಾಪಕ ಅಧ್ಯಕ್ಷ ಸದಾನ್ ದಾಸ್ ಉದ್ಘಾಟಿಸಿದರು. ಸಂಜೆ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಾನ್ ದಾಸ್
ಉಪಾಧ್ಯಕ್ಷ ದಿನೇಶ್ ದೇವಾಡಿಗ, ಕಾರ್ಯದರ್ಶಿ ಸುಧಾಕರ ಪೂಜಾರಿ ಪಡುಕೋಣೆ , ಕೋಶಾಧಿಕಾರಿ ಸುಜಿತ್ ಕುಮಾರ್ ಕಾಳವಾರ ಸದಸ್ಯರಾದ ವಾಸು ಕುಮಾರ್ ಶೆಟ್ಟಿ, ಮಂಜುನಾಥ, ಸತೀಶ್ ಹಂಗಳೂರು, ಚಂದ್ರಶೇಖರ ಕೋಡಿ, ಮನೋಜ್, ವಿಘ್ನೇಶ್ ಕುಂದಾಪುರ ಮತ್ತು ಆಶಾ ಜೊತೆಗಿದ್ದರು.

ಮುಖ್ಯ ಅತಿಥಿಗಳಾಗಿ ಶಿರೂರು ಅಸೋಶಿಯಶನ್’ನ ಅಧ್ಯಕ್ಷ ಮುನಾಫ್ ಹಾಗು ಸುರೇಶ್ ಡಿಹೆಚ್ಎಲ್ ಹಾಗೂ ಜನಾರ್ಧನ ಬಾರಕೂರು ಭಾಗವಹಿಸಿದ್ದರು. ಸಂಘದ ಸದಸ್ಯ ವಿಘ್ನೇಶ್ ಕುಂದಾಪುರ ಕಾರ್ಯಕ್ರಮವನ್ನು ನಿರ್ವಹಣೆ ಮತ್ತು ನಿರೂಪಣೆಯನ್ನು ಮಾಡಿದರು.