ಯುಎಇದುಬೈನಲ್ಲಿ ಫೆಬ್ರವರಿ 22ರಂದು 'ಯುಎಇ ಬಂಟ್ಸ್'ನಿಂದ ವಾರ್ಷಿಕ 'ಸ್ಪೋರ್ಟ್ಸ್...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ “ಸ್ಪೋರ್ಟ್ಸ್ ಡೇ-2026” ಫೆಬ್ರವರಿ 22ರಂದು ನಡೆಯಲಿದೆ.

ಈ ಬಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬೈನ ಖಿಸೆಸ್ ನ ಎತಿಸಲಾತ್ ಮೈದಾನದಲ್ಲಿ ಫೆಬ್ರವರಿ 22ರಂದು ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎಂದರು.

ಯುಎಇಯಲ್ಲಿ ಇರುವ ಎಲ್ಲಾ ಬಂಟ ಸಮುದಾಯದ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೆ ಸಾಕ್ಷಿಯಾಗಬೇಕು ಎಂದು ಅವರು ಈ ವೇಳೆ ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು ಸ್ಪೋರ್ಟ್ಸ್ ನ ಸಂಘಟಕರಾದ ವಿವೇಕ್ ಶೆಟ್ಟಿ, ಪ್ರಸಾದ್ ಶೆಟ್ಟಿ, ದಿನಕರ ಶೆಟ್ಟಿ ಉಪಸ್ಥಿತರಿದ್ದರು.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

ಯುಎಇಯಾದ್ಯಂತ ಹೊಸ ವರ್ಷ ಆಚರಣೆಗೆ ಕ್ಷಣಗಣನೆ; ಆಕಾಶವನ್ನೇ ಬೆಳಗಿಸಲು ಸಜ್ಜಾಗಿರುವ ಕಣ್ಮನ ಸೆಳೆಯುವ ಪಟಾಕಿ ಪ್ರದರ್ಶನಗಳು

ದುಬೈ: 2026ನ್ನು ಅದ್ಧೂರಿಯಾಗಿ ಸ್ವಾಗತಿಸಲು ಯುಎಇ ಸಜ್ಜಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ...

Related Articles

Popular Categories