ಅಟ್ಲಾಂಟ: ಅಟ್ಲಾಂಟಾದ ಕನ್ನಡಿಗರ ನೃಪತುಂಗ ಕನ್ನಡ ಕೂಟ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದ ಕಾರ್ಯಕ್ರಮಗಳು ಫೆ. 8 ಶನಿವಾರ ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆಯಿತು.
ರಂಗೋಲಿ ಸ್ಪರ್ಧೆ, ಚಿಣ್ಣರಿಂದ ಚಿತ್ರ ಬಿಡಿಸುವ ಸ್ಪರ್ಧೆ, ಚೆಸ್ ಸ್ಪರ್ಧೆ, ಪ್ರಶ್ನಾವಳಿ ಸ್ಪರ್ಧೆ, ಅಂತಾಕ್ಷರಿ, ಗಾಯನ, ನೃತ್ಯ ಹೀಗೆ ಹಲವು ಸ್ಪರ್ಧೆಗಳಿದ್ದವು.
ಕರ್ನಾಟಕದಿಂದ ಬಂದಿದ್ದ ರಾಘವೇಂದ್ರ ಆಚಾರ್ಯ ಅವರ ಸ್ಟ್ಯಾಂಡ್ ಅಪ್ ಕಾಮೆಡಿ ಹಾಗೂ ಅಟ್ಲಾಂಟದ ಕನ್ನಡತಿ ಮಹಿಮಾ ಹೊಳ್ಳ ಅವರು ಅದ್ಭುತ ಭರತನಾಟ್ಯ ಪ್ರದರ್ಶನ ನಡೆಯಿತು.
ಇದೇ ಸಂದರ್ಭದಲ್ಲಿ ಅಟ್ಲಾಂಟ ನಗರದ ವಿವಿಧ ಭಾಗದಲ್ಲಿ ಸ್ವಯಂ ಸೇವಾ ಮನೋಭಾವದಿಂದ ವಾರಾಂತ್ಯದಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಸುಮಾರು 10 ಕನ್ನಡ ಶಾಲೆಗಳನ್ನು ನಡೆಸುವ ಎಲ್ಲಾ ಶಿಕ್ಷಕರನ್ನೂ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಕನ್ನಡ ಕೂಟ ತಂಡದಿಂದ ಉತ್ತಮ ಭೋಜನದ ವ್ಯವಸ್ಥೆ ಮಾಡಲಾಗಿತ್ತು.



