ಇತರೆಬಸವ ಸಮಿತಿ ಯೂರೋಪ್ ಆಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಜರ್ಮನಿಯಲ್ಲಿ ಅದ್ದೂರಿಯಾಗಿ ನಡೆದ...

ಬಸವ ಸಮಿತಿ ಯೂರೋಪ್ ಆಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಜರ್ಮನಿಯಲ್ಲಿ ಅದ್ದೂರಿಯಾಗಿ ನಡೆದ ಬಸವ ಜಯಂತಿ

ಎರ್ಲಾಂಗನ್(ಜರ್ಮನಿ): ಇತ್ತೀಚೆಗೆ ಜರ್ಮನಿ ದೇಶದ ಎರ್ಲಾಂಗನಲ್ಲಿ ಬಸವ ಸಮಿತಿ ಯೂರೋಪ್ ವತಿಯಿಂದ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಜನ್ಮದಿನ ಸ್ಮರಣಾರ್ಥವಾಗಿ ಯುರೋಪಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇದೇ ವೇಳೆ ಬಸವಣ್ಣನವರ ಅನುಯಾಯಿಗಳ ಸಮ್ಮಿಲನಕ್ಕೂ ಕಾರ್ಯಕ್ರಮ ಸಾಕ್ಷಿಯಾಯಿತು.

ಯುರೋಪಿನ ಹಲವು ದೇಶಗಳಿಂದ ಬಸವ ಭಕ್ತರು ಒಗ್ಗೂಡಿ ಎರಡು ವರ್ಷಗಳ ಸತತ ಪ್ರಯತ್ನದಿಂದ ಬಸವ ಸಮಿತಿ ಯುರೋಪ್ ಎಂಬ ಸಂಘವನ್ನು ಸ್ಥಾಪಿಸಿ, ಯೂರೋಪಿನ ದೇಶಗಳಾದ ಜರ್ಮನಿ, ಬೆಲ್ಜಿಯಂ, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ ಮತ್ತು ಫ್ರಾನ್ಸ್ ದೇಶದ ಭಕ್ತರು ಈ ಕಾರ್ಯಕ್ರಮದಲ್ಲಿ ಜೊತೆಗೂಡಿದರು. ಮ್ಯೂನಿಖ್, ಮ್ಯಾಗ್ಡೆಬರ್ಗ್, ಫ್ರಾಂಕ್ಫರ್ಟ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಜರ್ಮನಿಯ ಎಲ್ಲಾ ಕನ್ನಡ ಸಂಘಗಳು ಈ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದು, ಸಕ್ರಿಯವಾಗಿ ಭಾಗವಹಿಸಿವೆ. 150ಕ್ಕಿಂತ ಅಧಿಕ ಬಸವ ಭಕ್ತರು ಹಾಗೂ ಅವರ ಕುಟುಂಬದವರು ಬಂದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಮುಂದಿನ ವರ್ಷಗಳಲ್ಲಿ ಈ ಸಮಾರಂಭವನ್ನು ಬೇರೆ‑ಬೇರೆ ದೇಶಗಳ ನಗರಗಳಲ್ಲಿ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.

ನಾವು ಕೇವಲ ಭಾರತದ ಜಾತ್ರೆಗಳಲ್ಲಿ ತೇರುಗಳನ್ನ ನೋಡಿದ್ದೆವು, ಆದರೆ ಮೊಟ್ಟ ಮೊದಲನೆಯ ಬಾರಿಗೆ ಜರ್ಮನಿಯಲ್ಲಿ ಬಸವಣ್ಣನವರ ತೇರು ಕಂಡು ಎಲ್ಲರಿಗು ಆಶ್ಚರ್ಯವಾಯಿತು. ಬಸವೇಶ್ವರವರ ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡು ಪುಳಕಿತರಾದರು. ಆ ಮಧುರ ಕ್ಷಣವನ್ನ ಸವಿಯಲು ಭಕ್ತರೆಲ್ಲರೂ ಉತ್ಸುಕರಾಗಿದ್ದರು. ಮೆರವಣಿಗೆಯ ನೇತೃತ್ವವನ್ನು ವಹಿಸಿಕೊಂಡಂತಹ ವಿನಯಕುಮಾರ ಶೇಷಾದ್ರಿ ಶಾಸ್ತ್ರೂಪ್ತವಾಗಿ ಪೂಜೆ ಮಾಡಿ, ಶ್ರೀದೇವಿ ವಿನಯ ಶೇಷಾದ್ರಿ ಅವರು ಪ್ರಸಾದ ಹಂಚಿದರು. ನಟ್ರಾಸ್ ತಂಡ, ಲೆಜಿಮ್, ಕಂಸಾಳೆ ಮತ್ತು ಓಂ ಧೋಲ್ ತಾಶಾ ನೃತ್ಯ ತಂಡದ ಕುಣಿತ ಎಲ್ಲರ ಮನಸೆಳೆಯಿತು. ಶಿವಸ್ತೋತ್ರ ಪಠಿಸುವ ಮೂಲಕ ಅರವಿಂದ ರಮೇಶ ಗಮನಸೆಳೆದರು.

ಚಂದನ ಬಾಳೆ ಮತ್ತು ಮಕ್ಕಳ ತಂಡ (ಕುಂಶಿ ಬಾಳೆ, ಅನೀಶ ಬಾಳೆ, ಅಯಾಂಶ ಬಾಳೆ, ಅನನ್ಯ ಸಾಗರಮಠ, ಅನಿಕಾ ಸಾಗರಮಠ, ದಿತೌಜಸ ಯೋಗೀಶ್ ಕುಮಾರ ಮತ್ತು ವೇದಾಂತ ದೇವತಿ, ಮನ್ವಿತ್ ಬಡಿಗೇರ) ದವರಿಂದ ವಚನಗಾಯಣದೊಂದಿಗೆ, ಮುಖ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನ ಪ್ರಾರಂಭಿಸಿದರು.

ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಅಭಿನವ ಕುಮಾರ್ (ಭಾರತೀಯ ರಾಯಭಾರಿ ಕಚೇರಿ, ಮ್ಯೂನಿಚ್, ಜರ್ಮನಿ) ನೆರವೇರಿಸಿದರು. ಸ್ವತಹ ಬಿಹಾರಿ ಆಗಿದ್ದರೂ ಬಸವಣ್ಣನವರ ಕಾರ್ಯವ್ಯೆಖರಿ, ಜಾತಿ ನೀರ್ಮೂಲನೆ, ತಮ್ಮ ಕಾಲಮಾನಕ್ಕಿಂತ ಬಹಳ ಮುಂದಿನ ವಿಚಾರವಂತರಾಗಿದ್ದರು ಮತ್ತು ಅನುಭವ ಮಂಟಪದ ಬಗ್ಗೆ ತಿಳಿದು ಅರಿತು ಗುಣಗಾನ ಮಾಡಿದರು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀರಾಮಿ ಭೂಕಾಕೆಮ್ (ಅಧ್ಯಕ್ಷರು, ವಲಸೆ ಪ್ರಾಧಿಕಾರ, ಎರ್ಲಾಂಗನ) ಅವರು ಬಸವಣ್ಣನವರ ಬಗ್ಗೆ ಮಾತನಾಡಿ, ನಾವು ಈ ದಿನಗಳಲ್ಲಿಎಲ್ಲರೂ ಒಂದೇ ಎಂದು ಹೇಳುತ್ತೇವೆ, ಆದರೆ ಬಸವಣ್ಣನರು 12ನೇ ಶತಮಾನದಲ್ಲಿಯೇ ಈ ಒಗ್ಗಟಿನ ಮಂತ್ರವನ್ನು ಘೋಷಣೆ ಮಾಡಿ ಕಾರ್ಯರೂಪಕ್ಕೆ ತಂದವರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು SPD – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ನಾಯಕಿ, ಕನ್ನಡಿಗರಾಗಿರುವ ಆಶಾ ರಮೇಶ್ ವಹಿಸಿದ್ದರು. ಇವರು ಮುಂದಿನ ವರ್ಷ 2026ರಲ್ಲಿ ರಾಷ್ಟೀಯ ಪಕ್ಷವಾದ SPDಯಿಂದ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ವೇಳೆ ವಿನ್ಶಿ ಫೌಂಡೇಶನ್’ನಿಂದ ವಿನಯ ಶಿರಹಟ್ಟಿಮಠ ಮತ್ತು ಶಿಲ್ಪಾ ಶಿರಹಟ್ಟಿಮಠ ಬರೆದ “ಬಸವ ಭಾಷೆಯ ಚಲನಶೀಲತೆ” ಎಂಬ ಪುಸ್ತಕವನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಸುಧಾರಣಾ ಇತಿಹಾಸದಲ್ಲಿ ಬಸವಣ್ಣವರ ವಚನಗಳು ಒಂದು ಮಹತ್ವಪೂರ್ಣ ತಿರುವು, ಕೇವಲ ಧಾರ್ಮಿಕ ಉದ್ದೇಶಗಳಿಗಾಗಿ ಉಳಿಯದೆ ಜನಸಾಮಾನ್ಯರ ಬದುಕಿಗೆ ದಿಕ್ಸೂಚಿಯಾಗಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿಯಾಗಿ ಮತ್ತು ಮುಖ್ಯವಾಗಿ ಕನ್ನಡ ಭಾಷೆಯ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮಾಧ್ಯಮವಾಗಿ ರೂಪುಗೊಂಡಿದೆ. ಬಸವಣ್ಣನವರು ವಚನಗಳಲ್ಲಿ ಬಳಸಿದ ಭಾಷೆ, ಸೃಜನಶೀಲತೆ ಮತ್ತು ಚಲನಶೀಲತೆಯನ್ನು ಅಳವಡಿಸಿ ವಿಶೇಷ ವಿದ್ವತ್ಪೂರ್ಣ ಪ್ರಯತ್ನವಾಗಿದೆ ಈ ಪುಸ್ತಕ. ನಟ್ರಾಸ್ ತಂಡ, ಲೆಜಿಮ್, ಕಂಸಾಳೆ ಮತ್ತು ಓಂ ಧೋಲ್ ತಾಶಾ ನೃತ್ಯ ತಂಡ ಎಲ್ಲರಿಗೂ ಹೂಗುಚ್ಛ ಶಲ್ಯ ಮತ್ತು ನೆನೆಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಜಯಕುಮಾರ್ ತುಮಕೂರು ಚಿಕ್ಕರುದ್ರಯ್ಯ ಅವರು ಬಸವ ಸಮಿತಿ ಯುರೋಪ್ ನಡೆದುಬಂದ ಹಾದಿಯನ್ನು ತಿಳಿಸುತ್ತಾ, ದೊಡ್ಡವರ ಆಶೀರ್ವಾದದಿಂದ ನಾವು ಹೊರದೇಶದಲ್ಲಿ ನೆಲೆ ಕಂಡು ಕೊಂಡು ನಮ್ಮ ಮೂಲತತ್ವವಾದ ಬಸವತತ್ವವನ್ನು ಮರೆಯದೆ ಎತ್ತಿ ಹಿಡಿಯಲು ಮುಂದಾಗಬೇಕು. ಕೆಲಸಕ್ಕಾಗಿ ಬಂದು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ವಾಚನವನ್ನು ಪಾಲಿಸುತ್ತಿದ್ದೇವೆ. ಗೊತ್ತಿದ್ದೋ ಗೊತ್ತಿಲ್ದೇನೂ ಬಸವಣ್ಣ ತೋರಿದ ದಾರಿ ನಮ್ಮ ಜೀವನದ ಭಾಗವಾಗಿವೆ. ಮುಂದೆ ಗುರಿ, ಹಿಂದೆ ಗುರು, ಪಕ್ಕದಲ್ಲಿ ಪ್ರೋತ್ಸಾಹಿಸುವ ಹೆಂಡತಿ ಇದ್ದರೆ ಏನಾದರೂ ಸಾಧನೆ ಮಾಡಬಹುದು ಎಂದು ಹೇಳುತ್ತಾ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಪರಿಚಯಿಸಿ ಅವರಿಗೆ ಹೂಗುಚ್ಛ ಮತ್ತು ನೆನೆಪಿನ ಕಾಣಿಕೆ ಕೊಟ್ಟು ಗೌರವಿಸಿದರು.

ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಂಚಾಕ್ಷರಿ ಲಕ್ಷ್ಮೇಶ್ವರಮಠ(ಪೋಲೆಂಡ್-ಪೋಲೆಂಡ್ ಕನ್ನಡ ಸಂಘದ ಸ್ಥಾಪಕ ಸದಸ್ಯ), ಪ್ರಶಾಂತ ಶಿವನಾಗಣ್ಣ(ಪೋಲೆಂಡ್- ಪೋಲೆಂಡ್ ಕನ್ನಡ ಸಂಘದ ಸದಸ್ಯ, ಬಸವ ಸಮಿತಿಯ ಡಿಜಿಟಲ್ ಮತ್ತು ಹಣಕಾಸಿನ ವಿಭಾಗದ ಮುಖ್ಯಸ್ಥ), ಹೇಮೇಗೌಡ ರುದ್ರಪ್ಪ(ಇಟಲಿ- ಇಟಲಿ ಕನ್ನಡ ಸಂಘದ ಅಧ್ಯಕ್ಷ, ಸಂಸ್ಥಾಪಕ), ನವೀನ್ ಓದೊಗೌಡ್ರ(ಇಟಲಿ- ಇಟಲಿ ಕನ್ನಡ ಸಂಘದ ಕಾರ್ಯದರ್ಶಿ), ಸತೀಶ್ ಪಲ್ಲೇದ(ಆಸ್ಟ್ರಿಯಾ-ಪೋಲೆಂಡ್ ಕನ್ನಡ ಸಂಘದ ಸಂಸ್ಥಾಪಕರಲ್ಲೋರ್ವ), ದೀಪಕ್ ಜಗದೀಶ್ ಗೋಶ್ವಾಲ್(ಬೆಲ್ಜಿಯಂ-ಬೆಲ್ಜಿಯಂ ಕನ್ನಡ ಸಂಘದ ಸ್ಥಾಪಕರಲ್ಲೋರ್ವ), ವಿಜಯಕುಮಾರ ತುಮಕೂರು ಚಿಕ್ಕರುದ್ರಯ್ಯ(ಜರ್ಮನಿ-ಕಾರ್ಯಕ್ರಮದ ಮುಖ್ಯ ರೂವಾರಿ), ಪ್ರಿಯಾ ಚಂದ್ರಶೇಖರ(ಜರ್ಮನಿ- ಸಾಂಸ್ಕೃತಿಕ ಕಾರ್ಯಕ್ರಮದ ಊಸ್ತುವಾರಿ), ವೇದ ಕುಮಾರಸ್ವಾಮಿ(ಜರ್ಮನಿ-ರೈನ್ ಮೇನ್ ಕನ್ನಡ ಸಂಘದ ಅಧ್ಯಕ್ಷ), ಶಶಿಕಾಂತ ಗುಡ್ಡದಮಠ(ಜರ್ಮನಿ- ಜರ್ಮನ್-ಇಂಡಿಯನ್ ಸೊಸೈಟಿಯ ಸದಸ್ಯ) ಉಪಸ್ಥಿತರಿದ್ದರು.

ಊಟದ ವ್ಯವಸ್ಥೆ: ವಿವೇಕೋದಯ ವಿಟ್ಟಗೊಂಡನ ಕೊಪ್ಪದ್ ಮಠ, ಉಷಾರಾಣಿ ಕಂಠಿಮಠ, ಶಿವಕುಮಾರ್ ಸಾವರ್ಗೆ, ಪ್ರದೀಪ್ ಕುಮಾರ್ ಬಸ್ತಿಹಳ್ಳಿ ಶಿವಕುಮಾರ್ ಹಾಗು ದಿಲೀಪ್ ಸದಾಶಿವಯ್ಯ ಮೇಲ್ವಿಚಾರಣೆಯಲ್ಲಿ ಮತ್ತು ವಿನ್ಶಿ ಫೌಂಡೇಶನ್ ಪ್ರಾಯೋಜನೆಯಯಲ್ಲಿ ತಯಾರಿಸಿರುವ ಚಪಾತಿ, ಕಡ್ಲೆಕಾಳು ಹುಸಲಿ, ಎಣ್ಣೆಗಾಯಿ ಪಲ್ಯ, ಪಾಲಕ್ ಪಪ್ಪು , ಹೆಸರುಕಾಳು ಪಲ್ಯ, ಹುಗ್ಗಿ ಅನ್ನ , ಧಾರವಾಡ ಪೇಡಾ, ಅನ್ನ, ಸಾಂಬಾರು, ರಸಂ, ಮೊಸರು, ಹಪ್ಪಳ, ಉಪ್ಪಿನಕಾಯಿ ರಸದೌತಣದ ದಾಸೋಹದತ್ತ ನಡೆದರು.

ಸಾಯಂಕಾಲ ಉತ್ತರಕರ್ನಾಟಕದ ಗಿರ್ಮಿಟ್ ಮತ್ತು ಟೀ ವಿಶೇಷವಾಗಿತ್ತು. ಜನರಿಂದ ಊಟದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬಂದಕಾರಣ ಬಸವಣ್ಣನವರ ದಾಸೋಹತತ್ವವು ಪರಿಪೂರ್ಣತೆ ಹೊಂದಿತು.

ಊಟದ ನಂತರ ಚಾಮುಂಡಿ ಸ್ಕೂಲ್ ಆಫ್ ಮ್ಯೂಸಿಕ್ ಚಂದನ ಬಾಳೆ ಮತ್ತು ಮಕ್ಕಳ ತಂಡದಿಂದ ಅಕ್ಕಮಹಾದೇವಿಯ ಮತ್ತು ಬಸವಣ್ಣನ ವಚನಗಳನ್ನು ಕ್ಲಾಸಿಕಲ್ ರೂಪದಲ್ಲಿ ಭಾವಮಯವಾಗಿ ಹಾಡಿದರು. ವಚನ ನೃತ್ಯದ ಮೂಲಕ ಸಾಧನೀ ಶಿವಕುಮಾರ್ ಮತ್ತು ತಾರುಣಿ ಶಿವಕುಮಾರ್ ಅಕ್ಕ – ತಂಗಿಯರು(ಮಾತಂಗಿ ನೃತ್ಯ ಶಾಲೆಯಿಂದ) ಭರತನಾಟ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪುಟಾಣಿ ಮಕ್ಕಳಾದ ಸಾನ್ವಿ ರಾಜಾಪುರ, ರಿಗ್ವೇದ ಪಲ್ಲೇದ, ರಿತ್ವಿಕ್ ಪಲ್ಲೇದ, ಪ್ರಾಯುಷಿ, ಪ್ರಣವ ಶಿವಪ್ರಸಾದ, ಸಾಯಿ ಪ್ರಣವ, ಇಶಿಕಾ, ತ್ರಿಶಿಕಾ, ಸಮರ್ಥ, ಮನ್ವಿತ್ ಮತ್ತು ಇತರರು ವಚನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಪ್ರಮಾಣಪತ್ರ ಮತ್ತು ಪ್ರಶಸ್ತಿಯನ್ನು ಪಡೆದರು.

ಯುರೋಪ್ ನಲ್ಲಿ ಮೊದಲ ಬಾರಿಗೆ ವಚನ ನೃತ್ಯ, ಮತ್ತು ವಚನ ಗಾಯನ ಅಯೋಜಿತ ಹೆಗ್ಗಳಿಕೆ ಬಸವ ಸಮಿತಿಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ವಚನ ಸಾಹಿತ್ಯದ ಬಗೆಗೆ ಕಾರ್ಯಗಾರ ಮತ್ತು ಶಿಬಿರಗಳನ್ನು ಆಯೋಜಿಸುವ ಆಲೋಚನೆಯನ್ನು ಸಮಿತಿ ಹಮ್ಮಿಕೊಂಡಿದೆ. ನಂತರ ಭಾವತರಂಗ ತಂಡದ ಸದಸ್ಯರಾದ ವಿನಯಕುಮಾರ ಶೇಷಾದ್ರಿ, ವಿಜಯಕುಮಾರ್, ಶ್ರೀಗೌರಿ ರಘು, ಸಿಂಚನಾ ವಿನಯಕುಮಾರ್, ನಾಗಪೂಜಿತ, ರಾಹಿಲ್ ಸೋನಿ, ದೀಪಾಂಜನ್ ದತ್ತಾ ರಾಯ್ ವಚನ-ಭಾವಗೀತೆಗಳನ್ನು ಹಾಡಿ ಮನರಂಜಿಸಿದರು.

ಲಜೀಮ್ ಮತ್ತು ಕಂಸಾಳೆ ಗುಂಪು ಪ್ರದರ್ಶಕರು: ರಶ್ಮಿ ಗಾವಂಡೆ, ಶ್ರೇಯಾ ಮೊರೆ, ಶ್ವೇತಾ ಧಿವಾರೆ, ನೂತನ್ ಕುಂಬಾರ, ಕವಿತಾ ಭೋಪಾಲೆ, ಮೌಸಮಿ ದೇಶಪಾಂಡೆ, ಅರ್ಚನಾ ಸೊಂಟಕ್ಕೆ, ಶುಭಾಂಗಿ ಪಾಟೀಲ.
ಧೋಲ್ ತಾಶಾ ತಂಡದ ಕಲಾವಿದರು: ಅಭಿಂದ್ಯಾ ಅಭ್ಯಂಕರ್, ಪುಷ್ಕರಾಜ್ ಭಿಡೆ, ಸುಶಾಂತ್ ನೆಮಾಡೆ, ಅಪೂರ್ವಾ ಭಿಡೆ, ಧ್ರುವ ದೇಶಪಾಂಡೆ, ತೇಜಸ್ ಕುಟೆ, ಸಾರ್ಥಕ್ ಶಿಂಧೆ, ಶ್ವೇತಾ ಚಾಲಿಸಗಾಂವ್ಕರ.
ಸ್ವಯಂಸೇವಕರಾಗಿ ರಾಕೇಶ್ ಉಮಾಶಂಕರ್, ನೂಂಪಿಕ ಕರಿಯೋಬನಳ್ಳಿ ಬಸವರಾಜ, ನಂದಿನಿ ನಾಗರಾಜು, ಮೇಘನಾ ಷಡಾಕ್ಷರಯ್ಯ ನಾಗೇಶ, ಗೌತಮ, ಶ್ರೀವತ್ಸ, ಆಶಾ ವೆಂಕಟೇಶ, ಮನೋಜ, ಶ್ರೇಯಸ, ಶಶಿಕಿರಣ, ಹರೀಶ ನೆವಾಡ, ಬಾಲಸುಬ್ರಮಣ್ಯಂ, ರಮೇಶ, ವಿಂದು ಕೃಷ್ಣ, ಸಂತೋಷ ಚಂದ್ರಕಾಂತ, ಸುಮಾ ಸಾವರ್ಗಿ ಸಹಕರಿಸಿದರು.

ಈ ಕಾರ್ಯಕ್ಕೆ ಪ್ರಾಯೋಜಕರದಂತಹ ಸಂಗಮ ಮತ್ತು ಚಾಯ್ ರೋಟಿಯಿಂದ ಸಿಮ್ರಾನ್ ಮಾಮಿ, ಪಾಟೀಲ್ ಫೈನಾನ್ಸ್ ನಿಂದ ಸೋಮನಗೌಡ ಪಾಟೀಲ, ಸ್ವರಾಸ್ನಿಂದ ಪ್ರದೀಪ ಚೌಹಾಣ್ ಮತ್ತು ಸ್ಪೈಸ್ಮಾರ್ಟ್ನಿಂದ ಗೋಪಾಲ, ಪವಿತ್ರಾ ಪರಮೇಶ, ವರುಣ, ಅಭಿಷೇಕ್, ಸ್ವಾತಿ, ಅನ್ನಪೂರ್ಣ, ನಾಗರಾಜು, ಪ್ರೇಮಕುಮಾರಿ, ಚಿಕ್ಕರುದ್ರಯ್ಯ ಅವರು ನೆನಪಿನ ಕಾಣಿಕೆ ವಸ್ತುಗಳು ಮತ್ತು ಶಲ್ಯಗಳನ್ನು ಪ್ರಾಯೋಜಿಸಿದ್ದರು. ಶಿವಾಜಿ ಮತ್ತು ವಿಮಲ ಬೆಂಗಳೂರಿನಿಂದ ಲಾಜಿಸ್ಟಿಕ್ಸ್ ಅನ್ನು ಸಂಯೋಜಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಜಿಲ್ಲೆಯ ನವೀನ, ಶಿವಕುಮಾರ, ವಿಜಯ ಅವರು ಫ್ಯೂಚುರಾ ಡಿಜಿಟಲ್ ಸಹಯೋಗದೊಂದಿಗೆ ಎಲ್ಲಾ ಬ್ಯಾನರಗಳು, ಪ್ರಮಾಣಪತ್ರಗಳನ್ನು ಸಂಯೋಜಿಸಿದ್ದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಶಿವಪ್ರಸಾದ ಬಸಪ್ಪ ಹಾಗು ವಂದನಾರ್ಪಣೆಯನ್ನು ಪಂಚಾಕ್ಷರಿ ಲಕ್ಷ್ಮೇಶ್ವರಮಠ ಮತ್ತು ಹೇಮೇಗೌಡ್ರು ರುದ್ರಪ್ಪ ನಡೆಸಿ ಕೊಟ್ಟರು.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories