ಯುಎಇಅಜ್ಮಾನ್; ತುಂಬೆ ಮೆಡಿಸಿಟಿಯ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆದ 'BCF...

ಅಜ್ಮಾನ್; ತುಂಬೆ ಮೆಡಿಸಿಟಿಯ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆದ ‘BCF ಸ್ಪೋರ್ಟ್ಸ್‌ ಫೆಸ್ಟಿವಲ್‌-2025’

ಅಜ್ಮಾನ್(ಯುಎಇ): ಅನಿವಾಸಿ ಕನ್ನಡಿಗರ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬ್ಯಾರೀಸ್ ಕಲ್ಚರಲ್ ಫೋರಮ್ (BCF) ವತಿಯಿಂದ ಇತ್ತೀಚಿಗೆ ಅಜ್ಞಾನಿನ ತುಂಬೆ ಮೆಡಿಸಿಟಿಯ ಕ್ರೀಡಾಂಗಣದಲ್ಲಿ ವರ್ಷಪ್ರತಿ ನಡೆಯುವಂತೆ ಈ ವರ್ಷವೂ ಅದ್ದೂರಿಯ BCF ಸ್ಪೋರ್ಟ್ಸ್ ಮೀಟ್ ಆಯೋಜಿಸಲಾಗಿತ್ತು.

ಬೃಹತ್‌ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರು ಮತ್ತು ಭಾರತದಿಂದ ಬಂದ ಹಲವಾರು ವಿಶೇಷ ಅತಿಥಿಗಳು, ಕ್ರೀಡಾಸಕ್ತರು ಸೇರಿದ ಈ ಕ್ರೀಡಾಕೂಟವು UAEಯ ಅಜ್ಮಾನಿನ ತುಂಬೆ ಮಡಿಸಿಟಿ ಕ್ರೀಡಾಂಗಣದಲ್ಲಿ ನಡೆಯಿತು.

BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಮತ್ತು ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದೀನ್ ಅವರ ಮುಂದಾಳುತನದಲ್ಲಿ BCF ನ ಪೋಷಕರಾಗಿದ್ದ ಮರ್ಹೂಂ ಬಿ.ಎಂ.ಮಮ್ತಾಝ್ ಅಲಿ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಹಾಗೂ UAEಯಲ್ಲಿ ನೆಲೆಸಿರುವ ಸಾವಿರಾರು ಕನ್ನಡಿಗರು ಸೇರಿ ಕನ್ನಡಿಗರ ಹಿರಿಮೆ ರಾರಾಜಿಸಲ್ಪಟ್ಟಿತು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮೊಯ್ದಿನ್ ಬಾವ, ಕರ್ನಾಟಕ ರಾಜ್ಯ ಆಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ಮುಖ್ಯ ಆಕರ್ಷಣೆಯಾಗಿ ವಿಶೇಷ ಕ್ರೀಡಾಪಟು, 7 ವರ್ಷದ ಆಯಿಷಾ ಹಫೀಝ್ ಉಪಸ್ಥಿತರಿದ್ದರು. ಈ ಸಂದರ್ಭ ವಿಶೇಷವಾಗಿ ಕೆಲವು ಅತಿಥಿಗಳಿಗೆ ಸನ್ಮಾನ ಮಾಡಲಾಯಿತು.

BCF ಮುಖ್ಯ ಪೋಷಕ ಮತ್ತು ತುಂಬೆ ಗ್ರೂಪಿನ ಸ್ಥಾಪಕ ಅಧ್ಯಕ್ಷರಾದ ಹೆಸರಾಂತ ಅನಿವಾಸಿ ಉದ್ಯಮಿ ಡಾ.ತುಂಬೆ ಮೊಯಿದಿನ್ ಅವರನ್ನು “Global Citizenship and Innovation Award” ನೀಡಿ ಗೌರವಿಸಲಾಯಿತು.

ಅಂದಿನ ಗೌರವಾನ್ವಿತ ವಿಶೇಷ ಅತಿಥಿ ಕರ್ನಾಟಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ MLC ನಸೀರ್ ಅಹ್ಮದ್ ಅವರನ್ನು “Ethical Practices, Social Equity Award ನೀಡಿ ಸನ್ಮಾನಿಸಲಾಯಿತು.

ಮತ್ತೋರ್ವ ಗೌರವಾನ್ವಿತ ಅತಿಥಿ ಮಾಜಿ ಶಾಸಕ ಮತ್ತು BCF ನ ನೂತನ ಪೋಷಕರಾದ ಮೊಯ್ದಿನ್ ಬಾವರನ್ನು ‘BCF Patronship ಅವಾರ್ಡ್’ ನೀಡಿ ಗೌರವಿಸಲಾಯಿತು.

ಸಮಾರಂಭದ ಇನ್ನೋರ್ವ ವಿಶೇಷ ಅತಿಥಿ ಕರ್ನಾಟಕ ರಾಜ್ಯ ಆಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

BCF ಸ್ಪೋರ್ಟ್ಸ್ ಮೀಟ್ ನಲ್ಲಿ ಮುಖ್ಯ ಆಕರ್ಷಣೆಯಾಗಿ, ಕ್ರೀಡಾಪಟು ಗೋವಾದಲ್ಲಿ ನಡೆದ ಟಾಯಿಕ್ ಪಂದ್ಯಾಟದಲ್ಲಿ ಚಿನ್ನ ಗೆದ್ದ ಬಾಲಕಿ ಆಯಿಷಾ ಹಫೀಝ್ ರನ್ನು ಸನ್ಮಾನಿಸಲಾಯಿತು.

ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಕ್ರೀಡಾಕೂಟವು ರಾತ್ರಿ ಸುಮಾರು 9 ಗಂಟೆಗೆ ಮುಕ್ತಾಯವಾಯಿತು. ಕ್ರಿಕೆಟ್, ವಾಲಿ ಬಾಲ್, ಫುಟ್ ಬಾಲ್, ಕಬಡ್ಡಿ, ಹಗ್ಗ ಜಗ್ಗಾಟ, ಈಜು, ಟೆನಿಸ್, ಸ್ತೂಕರ್, ಟೇಬಲ್ ಟೆನಿಸ್, ಮೆಹಂದಿ, ಟೊಂಕ, ಲಗೋರಿ, ಮೊದಲಾದ ಹಲವಾರು ಸ್ಪರ್ಧೆಗಳು ನಡೆದವು.

ಗಂಡಸರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದ ಈ ಎಲ್ಲಾ ಕ್ರೀಡೆಗಳು ಬ್ಯಾರಿ ಸಮುದಾಯ ಆರೋಗ್ಯ ಕ್ರೀಡೆ, ಕಷ್ಟ ಸಹಿಷ್ಣುತೆಯ ಬಗ್ಗೆ ತೋರುವ ಉತ್ಸಾಹಕ್ಕೆ ಸಾಕ್ಷಿಯಾಯಿತು. ಅನಿವಾಸಿ ಕನ್ನಡಿಗರು, ಹಲವಾರು ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ನೇತಾರರು, ಮಹಿಳೆಯರು ಮಕ್ಕಳು ಭಾಗವಹಿಸಿದ ಈ ಕ್ರೀಡಾ ಕೂಟ ಕರ್ನಾಟಕದ ವಿವಿಧತೆಯಲ್ಲಿ ಏಕತೆಯ ಸೌಂದರ್ಯಕ್ಕೆ ಮೆರುಗು ನೀಡಿತು.

ಮಹಿಳೆಯರಿಗಾಗಿ ಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು. ನೂರಾರು ವಿಧದ ದೇಶೀಯ, ಸ್ಥಳೀಯ, ಬ್ಯಾರಿ, ಕರ್ನಾಟಕ, ಕಾಂಟಿನೆಂಟಲ್ ಉಪಹಾರ, ಸಿಹಿ ತಿಂಡಿ ಪದಾರ್ಥಗಳು ತಯಾರಿಸಿ ಅವುಗಳನ್ನು ಪ್ರದರ್ಶಿಸಿದ ರೀತಿ, ಆ ಪಾಕ ಪ್ರದರ್ಶನದ ಸೌಂದರ್ಯ ನೋಡುವವರ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. BCF ಮಹಿಳಾ ವಿಂಗ್ ಈ ಪಾಕ ಸ್ಪರ್ಧೆಯ ನೇತೃತ್ವ ವಹಿಸಿತ್ತು.

ಚಿನ್ನದ ಹುಡುಗಿ ಆಯಿಷಾ ಹಫೀಝ್
ವಿಶೇಷ ಅತಿಥಿ ಆಯಿಷಾ ಹಫೀಝ್ ಅಂದು ಸೇರಿದ ಕ್ರೀಡಾ ಪ್ರೇಮಿಗಳ ಆಕರ್ಷಣಾ ಕೇಂದ್ರವಾಗಿದ್ದಳು. ಗೋವಾದಲ್ಲಿ ನಡೆದ ಟಾಯಿಕೂ ಪಂದ್ಯದಲ್ಲಿ ದೇಶೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ ಈ ಹೆಣ್ಣು ಮಗುವಿನ ಸಾಧನೆಗಾಗಿ ಗೌರವಿಸಲು ವೇದಿಕೆಗೆ ಕರೆದಾಗ ಜನಸ್ತೋಮದ ಅಭಿನಂದನೆಯ ಘೋಷಣೆ ಮತ್ತು ಚಪ್ಪಾಳೆ ಮುಗಿಲು ಮುಟ್ಟಿತು. ಆರ್ಥಿಕವಾಗಿ ಬಹಳ ಕಷ್ಟದಲ್ಲಿರುವ ಈ ಮಗುವಿನ ತಂದೆ ತಾನು ಕಷ್ಟದಲ್ಲಿದ್ದರೂ ದೈಹಿಕವಾಗಿ ಸಮಸ್ಯೆ ಇದ್ದರೂ ಅದೆಲ್ಲವನ್ನೂ ಎದುರಿಸಿ ತನ್ನ ಮಗುವಿನಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಸಂಕಷ್ಟವನ್ನು ಸಹಿಸಿ ಅವಳಿಗೆ ಕ್ರೀಡೆಯಲ್ಲಿ ಮುಂದಕ್ಕೆ ಬರುವಂತೆ ಪ್ರೇರೇಪಿಸಿದ ಬಗ್ಗೆ ತಿಳಿಸಿದರು. ಆಕೆಯ ಸಹಾಯಕ್ಕಾಗಿ ಸೇರಿದ ಹಲವರು ಸ್ವಯಂ ಪ್ರೇರಿತರಾಗಿ ತಮ್ಮ ಕೈಯಲ್ಲಿದ್ದ ಚಿನ್ನದ ಬಲೆ, ಕಿವಿಯಲ್ಲಿದ್ದ ಬೆಂಡೋಲೆ ಕುತ್ತಿಗೆಯಲ್ಲಿದ್ದ ಮಾಲೆ ನೀಡಿ ಪ್ರೋತ್ಸಾಹಿಸಿದರು.

ಈ ಕ್ರೀಡಾಪ್ರತಿಭೆಯನ್ನು ಗುರುತಿಸಿ ಅವಳ ಮನೆಗೆ ಹೋಗಿ ಅಭಿನಂದಿಸಿ, ನಂತರ ಈ ಮಗು ಅಂತ‌ರ್ ರಾಷ್ಟ್ರೀಯ ಖ್ಯಾತಿಗೆ ಯೋಗ್ಯ ಎಂಬುವುದನ್ನು ತಿಳಿದು ಈ ಮಗುವಿಗೆ ಪಾಸ್ಪೋರ್ಟ್, ವೀಸಾ, ಟಿಕೆಟ್ ಮತ್ತು ಇತರ ಸವಲತ್ತು ಮಾಡಿಸಿ, BCF ನ ಈ ಕ್ರೀಡಾ ಕೂಟಕ್ಕೆ ಕರೆಯಿಸಿ ಈ ಮಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದುವಂತೆ ಮೊಯ್ದಿನ್ ಬಾವ ಅವರು ಮಾಡಿದ್ದು, ಈ ಮಗುವಿಗೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸಿ ಆಕೆ ಪ್ರಥಮ ಬಾರಿ ಸಾಮಾಜಿಕ ಜಾಲತಾಣದಲ್ಲಿ ವಿಜೃಂಭಿಸುವಂತೆ ಮಾಡಿದ BCF ಅನ್ನು ಅಭಿನಂದಿಸಿದರು.

ಸಭಾ ಕಾರ್ಯಕ್ರಮ ಉಸ್ಕಾನ್ ಮೂಳೂರು ಅವರ ಕುರಾನ್ ಪಠಣದೊಂದಿಗೆ ಪ್ರಾರಂಭವಾಯಿತು. BCF ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮೊಹಮ್ಮದ್ ಅವರ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ BCF ಅಧ್ಯಕ್ಷರಾದ ಡಾ.ಬಿ ಕೆ ಯೂಸುಫ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ BCF ನ ಪರಿಚಯ ನೀಡುತ್ತಾ, ಈ ಕಾರ್ಯಕ್ರಮದಲ್ಲಿ ಹಗಲಿರುಳೂ ದುಡಿದ BCF ಸ್ಪೋರ್ಟ್ಸ್ ಮೀಟ್ಸ್ ಕಮಿಟಿಯ ಚೆಯರ್ಮ್ಯಾನ್ ಅಸ್ಲಾಂ ಕಾರಾಜೆ, ಅಫಿಕ್ ಹುಸೈನ್ ಮತ್ತು ಇತರ ಸದಸ್ಯರನ್ನು ಮತ್ತು BCF ಲೇಡೀಸ್ ವಿಂಗ್ ತಂಡವನ್ನು ಅಭಿನಂದಿಸಿದರು.

ಅಂದಿನ ವಿಶೇಷಾನ್ವಿತ ಗೌರವ ಅತಿಥಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ MLC ನಸೀರ್ ಅಹ್ಮದ್ ಅವರು ತಮ್ಮ ಕೀ ನೋಟ್ ಭಾಷಣದಲ್ಲಿ BCF ನ ಪ್ರವರ್ತನಾ ಕಾರ್ಯವನ್ನು ಸೇವಾ ತತ್ಪರತೆಯನ್ನು ಕೊಂಡಾಡುತ್ತಾ ವಿದ್ಯೆ ಮತ್ತು ಸಾಮಾಜಿಕ ಸಾಮರಸ್ಯ ಇಂದಿನ ಅತೀ ಅಗತ್ಯದ ವಿಷಯವಾಗಿದ್ದು ಅದಕ್ಕಾಗಿ ಅದೆಷ್ಟೋ ವರ್ಷಗಳಿಂದ ಶ್ರಮಿಸುತ್ತಿರುವ BCF ಅನ್ನು ಅಭಿನಂದಿಸಿದರು.

ಮುಖ್ಯ ಅತಿಥಿ ಮೊಯ್ದಿನ್ ಬಾವ ಮಾತನಾಡುತ್ತಾ, BCF ನನ್ನನ್ನು ನಮ್ಮ ತಮ್ಮ ಮರ್ಹೂಂ ಮುತ್ತಾಝ್ ಅಲಿ ಅವರ ಸ್ಥಾನಕ್ಕೆ ನೇಮಿಸಿದ್ದಕ್ಕೆ ಧನ್ಯವಾದ ಹೇಳುತ್ತಾ BCF ಗಾಗಿ ತನ್ನಿಂದಾದ ಸಹಕಾರವನ್ನು ಯಾವತ್ತೂ ನೀಡುವುದಾಗಿ ಭರವಸೆ ಇಟ್ಟರು. ಮುಖ್ಯವಾಗಿ ಕ್ರೀಡಾಪಟು ಮಗು ಆಯಿಷಾ ಹಫೀಝ್ ಬಗ್ಗೆ ಮಾತಾಡುತ್ತಾ ಅವಳ ವಿಶೇಷವಾದ ಪ್ರತಿಭೆಯ ಕುರಿತಂತೆ ಮುಂದೊಂದು ದಿನ ಅವಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ತಾರೆಯಾಗಿ ಮೆರೆಯುವ ದಿನ ದೂರ ಇಲ್ಲ ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಡಾ. ಯು ಟಿ ಇಫ್ತಿಕಾರ್ ತಮ್ಮ ಭಾಷಣದಲ್ಲಿ BCF ನ ಅಮೋಘವಾದ ಸಮಾಜ ಸೇವಾ ಕಾರ್ಯವನ್ನು ತಾಗಿಸುತ್ತಾ ತನ್ನಿಂದ ಏನೆಲ್ಲಾ ಸಾಧ್ಯವೋ ಅದೆಲ್ಲ ಸಹಕಾರವನ್ನು BCF ಗೆ ನೀಡುವುದಾಗಿ ವಾಗ್ದಾನ ವಿತ್ತರು ಹಾಗೂ ಕರ್ನಾಟಕದಲ್ಲಿ ಒದಗಿಸಲ್ಪಡುವ ಅಲೈಡ್ ಮತ್ತು ಇತರ ಪಾರ ಮೆಡಿಕಲ್ ಕೋರ್ಸ್ ಪದವಿ ವಿದ್ಯಾಭ್ಯಾಸಕ್ಕೆ ಯಾರಿಗೆ ಆಸಕ್ತಿ ಇದೆಯೋ ಅವರಿಗೆ ಸರಕಾರದ ನಿಯಮದ ಅಡಿಯಲ್ಲಿ ತನ್ನಿಂದ ಸಾಧ್ಯವಾದಷ್ಟು ಸಹಕಾರ ಸಹಾಯ ನೀಡುವುದಾಗಿ ಭರವಸೆ ಇಟ್ಟರು.

BCF ಸ್ಪೋರ್ಟ್ಸ್ ಮೀಟ್ ಕಮಿಟಿಯ ಚೆಯರ್ಮ್ಯಾನ್ ಅಸ್ಲಾಂ ಕಾರಾಜೆ ತಮ್ಮ ಈ ಸೇವಾ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲ ತಂಡದ ಸದಸ್ಯರು ಮತ್ತು ಇತರ ಕ್ರೀಡಾ ಪ್ರೇಮಿಗಳಿಗೆ ಧನ್ಯವಾದ ಹೇಳಿದರು.

BCF ಪೋಷಕರಾದ ಇಬ್ರಾಹಿಂ ಗಡಿಯಾರ್, ಅಬು ಸಾಲಿಹ್ ಉಪಾಧ್ಯಕ್ಷರುಗಳು, ಇತರ ಪದಾಧಿಕಾರಿಗಳು, ಲೇಡೀಸ್ ವಿಂಗ್ ಮೊದಲಾದವರ ಸಹಕಾರ ಸಂಯೋಜನೆ ಈ ಕಾರ್ಯಕ್ರಮದ ಯಶಸ್ವಿಗೆ ಮುಖ್ಯ ಕಾರಣವಾಗಿದ್ದು, ಈ ಕಾರ್ಯಕ್ರಮದಲ್ಲಿ ಸೇರಿದ ಸುಮಾರು 2500 ಜನರಿಗೆ ಊಟವನ್ನು ತುಂಬೆ ಗ್ರೂಪ್ ಸ್ಥಾಪಕ ಚೆಯರ್ಮ್ಯಾನ್ ಮತ್ತು BCF ಪ್ರಧಾನ ಪೋಷಕರಾದ ಡಾ. ತುಂಬೆ ಮೊಯಿದೀನ್ ಅವರು ಒದಗಿಸಿದ್ದರು.

ಇಬ್ರಾಹಿಂ ಗಡಿಯಾರ್, ಅಬು ಸಾಲಿಹ್ ಮೊದಲಾದ ಹಲವಾರು ಉದ್ಯಮಿಗಳು ಈ ಕಾರ್ಯಕ್ರಮಕ್ಕೆ ಸ್ಪೋನ್ನರ್ಷಿಪ್ ನೀಡಿ ಸಹಕರಿಸಿದರು. BCF ಉಪಾಧ್ಯಕ್ಷರಾದ ಎಂ ಈ ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಮೀರುದ್ದೀನ್ 51, BCF ಮಹಿಳಾ ವಿಂಗ್ ಅಧ್ಯಕ್ಷ ಮುಮಾಝ್ ಕಾಪು ಅವರ ನೇತೃತ್ವದಲ್ಲಿ ಮಹಿಳಾ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದರು. ಇತರ ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಕ್ರೀಡೆಗಳಲ್ಲಿ ವಿಜೇತರಾದ ಎಲ್ಲ ತಂಡ ಮತ್ತು ಇತರ ವೈಯಕ್ತಿಕ ಕ್ರೀಡೆಗಳಲ್ಲಿ ಗೆದ್ದವರಿಗೆ ಪ್ರಶಸ್ತಿ ನೀಡಲಾಯಿತು. ಕೊನೆಯಲ್ಲಿ ನವಾಝ್ ಕೋಟೆಕಾರ್ ಧನ್ಯವಾದವಿತ್ತರು.

Hot this week

ಎ.12ರಂದು ದುಬೈನಲ್ಲಿ ‘ಆಕ್ಮೆ’ಯಿಂದ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ವಿಶೇಷ ಸಂಗೀತ, ನೃತ್ಯ, ಹಾಸ್ಯಮಯ ಕಾರ್ಯಕ್ರಮ

ದುಬೈ: ಖ್ಯಾತ ಗಾಯಕ ಹಾಗು ಉದ್ಯಮಿ ಆಗಿರುವ ದುಬೈಯ ‘ಆಕ್ಮೆ’ ಬಿಲ್ಡಿಂಗ್...

ದುಬೈಯಲ್ಲಿ ಸಂಭ್ರಮ, ಸಡಗರದ ಶ್ರೀರಾಮನವಮಿ ಆಚರಣೆ

ದುಬೈ: ರಾಮನವಮಿ ಪ್ರಯುಕ್ತ ಶಂಕರ ಸೇವಾ ಸಮಿತಿಯವರು ದುಬೈಯ ಭಕ್ತಾಧಿಗಳನ್ನೆಲ್ಲ ಸೇರಿಸಿಕೊಂಡು...

Prakash Godwin Pinto elected president of KCWA for 2025-27

Kuwait: The Kuwait Canara Welfare Association (KCWA) elected its...

AATA organize Tulu Script learning workshop in America

The All America Tulu Association (AATA), a nonprofit organization...

ಯುಎಇ, ಸೌದಿ, ಬಹರೈನ್, ಖತರ್, ಕುವೈತ್’ನಲ್ಲಿ ಸಂಭ್ರಮದ ಈದ್‌ ಉಲ್‌ ಫಿತ್ರ್ ಆಚರಣೆ

ದುಬೈ: ಯುಎಇ, ಸೌದಿ ಅರೇಬಿಯಾ, ಬಹರೈನ್, ಖತರ್, ಕುವೈತ್ ಸೇರಿದಂತೆ ಗಲ್ಫ್'ನಲ್ಲಿ...

Related Articles

Popular Categories