ಯುಎಇದುಬೈಯಲ್ಲಿ ಮೇಳೈಸಲಿದೆ ಬ್ಯಾರಿ ಮೇಳ; ಬ್ಯಾರಿ ಸಮುದಾಯದ ಉದ್ಯಮ...

ದುಬೈಯಲ್ಲಿ ಮೇಳೈಸಲಿದೆ ಬ್ಯಾರಿ ಮೇಳ; ಬ್ಯಾರಿ ಸಮುದಾಯದ ಉದ್ಯಮ ಕ್ಷೇತ್ರಕ್ಕೆ ಸಿಗಲಿದೆ ಬಹು ದೊಡ್ಡ ಕೊಡುಗೆ

ಬ್ಯಾರಿ ಮೇಳದ ಬಗ್ಗೆ ಹಿದಾಯತ್ ಅಡ್ಡೂರು(ಬಿಸಿಸಿಐ ಯುಎಇ ಘಟಕದ ಅಧ್ಯಕ್ಷರು) ಅವರ ವಿಶೇಷ ಸಂದರ್ಶನ

ದುಬೈ: ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಆಶ್ರಯದಲ್ಲಿ ಫೆಬ್ರವರಿ 9ರಂದು ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ನಡೆಯಲಿರುವ ‘ಬ್ಯಾರಿ ಮೇಳ-2025’ಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದೊಡ್ಡಮಟ್ಟದಲ್ಲಿ ಮೇಳವನ್ನು ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಈ ಬಗ್ಗೆ ದುಬೈಯಲ್ಲಿ ‘globalkannadiga.com‘ ಜೊತೆ ಸಂದರ್ಶನದಲ್ಲಿ ಮಾತನಾಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(BCCI) ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು, ಬ್ಯಾರಿ ಸಮುದಾಯದ ಉದ್ಯಮ ಕ್ಷೇತ್ರಕ್ಕೆ ಈ ಮೇಳ ಬಹು ದೊಡ್ಡ ಕೊಡುಗೆ ನೀಡಲಿದೆ ಎಂದರು.

ಬ್ಯಾರಿ ಮೇಳದ ಬಗ್ಗೆ ?
ಈ ವರಗೆ ಯಾರು ಕೂಡ ಆಲೋಚಿಸದ ರೀತಿಯಲ್ಲಿ ನಾವು ಈ ಬ್ಯಾರಿ ಮೇಳವನ್ನು ಆಯೋಜಿಸುತ್ತಿದ್ದೇವೆ. ಬ್ಯಾರಿ ಸಮುದಾಯದ ಉನ್ನತಿಗಾಗಿ ಇದೇ ಮೊಟ್ಟ ಮೊದಲ ಬಾರಿಗೆ ದುಬೈಯಲ್ಲಿ ಮೇಳವನ್ನು ನಡೆಸುತ್ತಿದ್ದೇವೆ. ವಿದೇಶದಲ್ಲಿ ಬ್ಯಾರಿ ಸಮುದಾಯದ ಇಂಥ ಕಾರ್ಯಕ್ರಮ ನಡೆದಿಲ್ಲ. ಇದೊಂದು ರೀತಿಯ ವಿಶೇಷವಾದ ಕಾರ್ಯಕ್ರಮ. ಬ್ಯಾರಿ ಸಮುದಾಯದ ಉದ್ಯಮಿಗಳು, ವ್ಯಾಪಾರಿಗಳು, ಉದ್ಯಮ ನಡೆಸಲು ಆಸಕ್ತಿ ಇರುವವರು, ಯುವಕರು-ಯುವತಿಯರು, ವಿದ್ಯಾರ್ಥಿಗಳು, ಮಕ್ಕಳು ಕುಟುಂಬ ಸಮೇತರಾಗಿ ಪಾಲ್ಗೊಳ್ಳಲಿದ್ದಾರೆ. ಈ ಮೇಳಕ್ಕೆ ಯುಎಇಯಲ್ಲಿರುವ ನೂರಾರು ಸಂಘ-ಸಂಸ್ಥೆಗಳು ಈಗಾಗಲೇ ಬೆಂಬಲವನ್ನು ಘೋಷಿಸಿವೆ.

ಬ್ಯಾರಿ ಮೇಳದ ಮುಖ್ಯ ಉದ್ದೇಶವೇನು ?
ಉದ್ಯಮ ಕ್ಷೇತ್ರದಲ್ಲಿ ಬ್ಯಾರಿಗಳ ಕೊಡುಗೆ ಅನನ್ಯ. 1920ರ ಅವಧಿಯಿಂದಲೂ ಕರಾವಳಿ ಭಾಗದಲ್ಲಿ ಶೇ.80ರಿಂದ 90ರಷ್ಟು ವ್ಯಾಪಾರ ಮಾಡಿಕೊಂಡಿದ್ದವರು ಬ್ಯಾರಿಗಳು. ದೊಡ ದೊಡ್ಡ ಉದ್ದಿಮೆಗಳು ಬ್ಯಾರಿಗಳ ಕೈಯಲ್ಲಿತ್ತು. ಕಾಲಕ್ರಮೇಣ ಈ ವ್ಯಾಪಾರ ವಹಿವಾಟುಗಳು ಬೇರೆಯವರ ಕೈ ಸೇರಿತು. ಈಗ ಮತ್ತೆ ಉದ್ದಿಮೆ, ವ್ಯಾಪಾರದ ಕ್ಷೇತ್ರದಲ್ಲಿ ಬ್ಯಾರಿಗಳು ಕಾಲಿಡುತ್ತಿದ್ದಾರೆ. ಮತ್ತೆ ಒಟ್ಟುಗೂಡದಿದ್ದರೆ ಉದ್ಯಮ ಕ್ಷೇತ್ರದಿಂದ ನಾವು ವಂಚಿತರಾಗಲಿದ್ದೇವೆ. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಹರಡಿಕೊಂಡಿರುವ ಬ್ಯಾರಿ ಸಮುದಾಯದ ಉದ್ಯಮಿಗಳನ್ನು, ಉದ್ಯಮದಲ್ಲಿ ಆಸಕ್ತಿ ಇರುವವವರನ್ನು ಒಂದೇ ಸೂರಿನಡಿ ಒಟ್ಟುಗೂಡಿಸುವುದಕ್ಕೆ ಒಂದು ದೊಡ್ಡ ಪ್ರಯತ್ನವಾಗಿದೆ ಈ ಬ್ಯಾರಿ ಮೇಳ.

ಈ ಮೇಳದಿಂದ ಆಗುವಂಥ ಪ್ರಯೋಜನವೇನು ?
ಬ್ಯಾರಿ ಉದ್ಯಮಿಗಳಿಗೆ, ಉದ್ಯಮದ ಬಗ್ಗೆ ಆಸಕ್ತಿ-ಉದ್ಯಮ ನಡೆಸಲು ಇಚ್ಛಿಸುವವರಿಗೆ, ಉದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೋಗುವವರಿಗೆ, ಉದ್ಯೋಗದ ಹುಡುಕಾಟದಲ್ಲಿರುವವರಿಗೆ, ತಮ್ಮ ಸರಕು, ಇನ್ನಿತರ ವಸ್ತುಗಳನ್ನು ಜನರಿಗೆ ಪ್ರಚಾರ ಮಾಡಲು ಬ್ಯಾರಿ ಮೇಳ ಒಂದು ದೊಡ್ಡ ವೇದಿಕೆ. ಇದರ ಸದುಪಯೋಗವನ್ನು ಬ್ಯಾರಿ ಸಮುದಾಯ ಪಡೆದುಕೊಳ್ಳಬೇಕೆಂಬುದೇ ನಮ್ಮ ಆಶಯ.

‘ಬ್ಯಾರಿ ಶಾರ್ಕ್ ಥಿಂಕ್’
ಬ್ಯಾರಿ ಯುವ ಉದಯೋನ್ಮುಖ ಉದ್ಯಮಿಗಳಿಗೆ “ಬ್ಯಾರಿ ಶಾರ್ಕ್ ಥಿಂಕ್” ಮೂಲಕ ಹೂಡಿಕೆದಾರರನ್ನು ನೇರವಾಗಿ ಒದಗಿಸುವ ವೇದಿಕೆ ಈ ಮೇಳದಲ್ಲಿ ಆಯೋಜಿಸಲಾಗಿದೆ. ಇದರಿಂದ ಯುವ ಉದ್ಯಮಿಗಳಿಗೆ ದೊಡ್ಡ ವೇದಿಕೆ ಕಲ್ಪಿಸಿದಂತಾಗುತ್ತದೆ.

ಉದ್ಯೋಗ ಮೇಳ
ಉದ್ಯೋಗ ಮೇಳವನ್ನು ಕೂಡ ಆಯೋಜಿಸಲಾಗಿದ್ದು, ಹಲವು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು, ಉದ್ಯೋಗದ ಹುಡುಕಾಟದಲ್ಲಿರುವವರು ಇಲ್ಲಿ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳಬಹುದು.

ಮೇಳದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ?
ಬ್ಯಾರಿ ಮೇಳ ಮಾಡಲು ಯೋಚಿಸಿದ್ದಾಗ ಸಣ್ಣ ಮಟ್ಟದಲ್ಲಿ ಮಾಡುವ ಆಲೋಚನೆ ಇತ್ತು. ಆದರೆ ಜನರ ಪ್ರತಿಕ್ರಿಯೆ ನೋಡಿ, ದೊಡ್ಡ ಮಟ್ಟದಲ್ಲಿಯೇ ಮಾಡುವ ಆಲೋಚನೆ ಹುಟ್ಟಿಕೊಂಡಿತು. ಈಗ ಈ ಮೇಳಕ್ಕೆ ಬರುತ್ತಿರುವ ಪ್ರತಿಕ್ರಿಯೆ, ಅಭಿಪ್ರಾಯ ನೋಡಿದರೆ ಇದೊಂದು ರೀತಿಯಲ್ಲಿ ಬ್ಯಾರಿ ಸಮುದಾಯದಲ್ಲಿ ಇತಿಹಾಸವನ್ನೇ ಸೃಷ್ಟಿಸುವ ಮುನ್ಸೂಚನೆಗಳು ದೊರಕುತ್ತಿವೆ. ಈ ಮೇಳದಲ್ಲಿ 10 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಇದೆ. ಅದಕ್ಕಾಗಿ ಬೇಕಾದ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಬ್ಯಾರಿ ಮೇಳ ಕಾರ್ಯಕ್ರಮದ ಸಂಚಾಲಕರಾದ ಅಶ್ರಫ್ ಷಾ ಮಂತೂರ್ ಹಾಗು ಸಹ ಸಂಚಾಲಕ ಮಹಮ್ಮದ್ ಮುಸ್ತಾಕ್ ಅವರು ಮಾಡಿಕೊಂಡಿದ್ದಾರೆ.

ಈ ಮೇಳದಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ?
ಜಗತ್ತಿನಾದ್ಯಂತ ಇರುವ ಬ್ಯಾರಿ ಉದ್ಯಮಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಯುಎಇಯ ಬ್ಯಾರಿ ಉದ್ಯಮಿಗಳು, ಸೌದಿ, ಕುವೈತ್, ಖತರ್, ಬಹರೈನ್, ಒಮಾನ್ ಸೇರಿದಂತೆ ಜಿಸಿಸಿ(ಗಲ್ಫ್)ಯಲ್ಲಿರುವ, ಭಾರತದಲ್ಲಿರುವ ಉದ್ಯಮಿಗಳು ಹಾಗು ಜಗತ್ತಿನ ಇತರ ಕಡೆಗಳಲ್ಲಿರುವ ಉದ್ಯಮಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಇದೊಂದು ರೀತಿಯಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಲಿದೆ.

ಮೇಳದಲ್ಲಿ ಏನೆಲ್ಲಾ ಇರಲಿದೆ ?
ಉದ್ಯಮಿಗಳಿಗೆ ತಮ್ಮ ಉದ್ಯಮ ಜಾಲವನ್ನು ಇನ್ನಷ್ಟು ವಿಸ್ತರಿಸಲು ಹಲವು ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ, ಯಶಸ್ವಿ ಉದ್ಯಮಿಗಳನ್ನು, ಸಮುದಾಯದ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುವುದು. ಮಕ್ಕಳಿಗಾಗಿ 45 ನಿಮಿಷಗಳ ಕೌಶಲ್ಯ ತರಬೇತಿ ಕಾರ್ಯಾಗಾರ, ಕರಾವಳಿಯ ಪ್ರಸಿದ್ಧ ಆಹಾರ, ತಿಂಡಿಗಳ ಮಳಿಗೆಗಳು, ವಿವಿಧ ಉದ್ಯಮ ಕ್ಷೇತ್ರದ 70ಕ್ಕೂ ಹೆಚ್ಚಿನ ಮಳಿಗೆಗಳು ಇಲ್ಲಿ ಇರಲಿವೆ. ಬ್ಯಾರಿ ಉದ್ಯಮಿಗಳು, ವೃತ್ತಿಪರರು ಮತ್ತು ಅವರ ಕುಟುಂಬಗಳು ಒಟ್ಟಾಗಿ ಸೇರುವಂತೆ ಈ ಮೇಳವನ್ನು ಆಯೋಜಿಸಲಾಗಿದೆ.

ಮೇಳದಿಂದ ಬಿಸಿಸಿಐಗೆ ಆಗುವ ಪ್ರಯೋಜನ ?
ಈ ಮೇಳದಲ್ಲಿ ಬ್ಯಾರಿ ಸಮುದಾಯದ ಜನರಿಗಷ್ಟೇ ಪ್ರಯೋಜನ ಆಗಲಿದೆ. ಮೇಳದಿಂದಾಗಿ ಯುಎಇಯಲ್ಲಿರುವ ಎಲ್ಲ ಉದ್ಯಮಿಗಳು ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್’ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಇದು ನಮ್ಮ ಸಂಸ್ಥೆಯ ಜೊತೆ ಜೊತೆ ಸಮುದಾಯದ ಉದ್ಯಮಿಗಳಿಗೆ ದೊಡ್ಡ ವೇದಿಕೆಯನ್ನೇ ಸೃಷ್ಟಿಸಲಿದೆ.

ಹೊಸ ತರಬೇತಿಗೆ ಮೇಳದಲ್ಲಿ ಚಾಲನೆ
ಪಿಯುಸಿ ಅಥವಾ ಐಟಿಐ ಕಲಿತ ಮಕ್ಕಳಿಗೆ ಲಿಫ್ಟ್ ಟೆಕ್ನಿಷಿಯನ್ ಬಗ್ಗೆ ತರಬೇತಿ ನೀಡುವ ಕೋರ್ಸ್ ಒಂದು ಬ್ಯಾರಿ ಮೇಳದಲ್ಲಿ ಚಾಲನೆಗೊಳ್ಳಲಿದೆ. ಎಲ್ಲೆಡೆ ಲಿಫ್ಟ್ ಟೆಕ್ನಿಷಿಯನ್’ಗಳಿಗೆ ಬೇಡಿಕೆ ಇರುವುದರಿಂದ ಈ ಕೋರ್ಸನ್ನು ಕರ್ನಾಟಕದಲ್ಲಿ BSVT (ಭಾರತ್‌ ಸ್ಕೂಲ್‌ ಆಫ್ ವರ್ಟಿಕಲ್‌ ಟ್ರಾನ್ಸ್‌ಪೋರ್ಟೆಷನ್‌ ತರಬೇತಿ) ಸಂಸ್ಥೆಯವರು ಆರಂಭಿಸುತ್ತಿದ್ದು, ಇದಕ್ಕೆ ಮೇಳದಲ್ಲಿ ಚಾಲನೆ ದೊರಕಲಿದೆ. ಈ ಕೋರ್ಸ್ 6 ತಿಂಗಳದ್ದಾಗಿದ್ದು, ಕೋರ್ಸ್ ಮುಗಿದ ಮೇಲೆ ಅರ್ಹ ವಿದ್ಯಾರ್ಥಿಗಳಿಗೆ ಕೆಲಸವನ್ನು ಸಂಸ್ಥೆಯೇ ನೀಡಲಿದೆ.

ನಿಮಗಾಗಿ ಕಾದಿದೆ ರಾಫೆಲ್ ಡ್ರಾ; ಆಕರ್ಷಕ ಬಹುಮಾನಗಳು
ಬ್ಯಾರಿ ಮೇಳದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಉಚಿತ ರಾಫೆಲ್ ಡ್ರಾ ದಲ್ಲಿ ಪಾಲ್ಗೊಳ್ಳಬಹುದು. ಮೇಳದ ಆರಂಭದಿಂದ ಕೊನೆಯ ವರೆಗೆ ಇರುವವರಲ್ಲಿ 10 ಮಂದಿಗೆ ರಾಫೆಲ್ ಡ್ರಾ ಮೂಲಕ ಐಪ್ಯಾಡ್ ಹಾಗು ಇನ್ನಿತರ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.

Hot this week

Prakash Godwin Pinto elected president of KCWA for 2025-27

Kuwait: The Kuwait Canara Welfare Association (KCWA) elected its...

AATA organize Tulu Script learning workshop in America

The All America Tulu Association (AATA), a nonprofit organization...

ಯುಎಇ, ಸೌದಿ, ಬಹರೈನ್, ಖತರ್, ಕುವೈತ್’ನಲ್ಲಿ ಸಂಭ್ರಮದ ಈದ್‌ ಉಲ್‌ ಫಿತ್ರ್ ಆಚರಣೆ

ದುಬೈ: ಯುಎಇ, ಸೌದಿ ಅರೇಬಿಯಾ, ಬಹರೈನ್, ಖತರ್, ಕುವೈತ್ ಸೇರಿದಂತೆ ಗಲ್ಫ್'ನಲ್ಲಿ...

ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ರವಿವಾರ ಈದ್‌ ಉಲ್‌ ಫಿತರ್‌ ಆಚರಣೆ

ರಿಯಾದ್‌ : ಸೌದಿ ಅರೇಬಿಯಾದಲ್ಲಿ ಶನಿವಾರ ಸಂಜೆ ಶವ್ವಾಲ್‌ ಚಂದ್ರ ದರ್ಶನವಾದ...

Related Articles

Popular Categories