ಯುಎಇದುಬೈ: BCFನಿಂದ ಅದ್ದೂರಿಯಾಗಿ ನಡೆದ “BCF ಕ್ರೀಡಾಕೂಟ 2026"

ದುಬೈ: BCFನಿಂದ ಅದ್ದೂರಿಯಾಗಿ ನಡೆದ “BCF ಕ್ರೀಡಾಕೂಟ 2026″

ದುಬೈ: ಬ್ಯಾರೀಸ್ ಕಲ್ಚರಲ್ ಫೋರಮ್ (BCF) ವತಿಯಿಂದ ಫೆ.08 ರಂದು ಅಲ್ ಜಾಹಿಯಾ ತುಂಬೆ ಮೆಡಿಸಿಟಿಯಲ್ಲಿ “BCF ಕ್ರೀಡಾಕೂಟ 2026” ನಡೆಯಿತು. BCF ಅಧ್ಯಕ್ಷ ಡಾ. ಬಿ.ಕೆ. ಯೂಸುಫ್ ಅವರ ಮುಂದಾಳತ್ವದಲ್ಲಿ ಹಾಗೂ BCF ಸ್ಥಾಪಕ ಸ್ಥಾಪಕ ಗೌರವ ಪೋಷಕ ಮತ್ತು ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷರಾದ ಡಾ. ಮೊಹಿದೀನ್ ತುಂಬೆ ಅವರ ಸಹಕಾರದೊಂದಿಗೆ, ತುಂಬೆ ಗ್ರೂಪ್ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು.

BCF ಗೌರವ ಸಲಹೆಗಾರರಾದ ಇಬ್ರಾಹಿಂ ಗಡಿಯಾರ್ (ಗಡಿಯಾರ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್) ಮತ್ತು ಅಬೂಸಾಲಿಹ್ (ನಫೀಸ್ ಗ್ರೂಪ್) ಅವರ ಮುಖ್ಯ ಪ್ರಾಯೋಜಕತ್ವದಲ್ಲಿ, BCF ನಾಯಕರು ಹಾಗೂ ಹಿತೈಷಿಗಳ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮ ಬೆಳಿಗ್ಗೆ 8 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಜರುಗಿತು.

ಕಳೆದ 24 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಗ್ರ್ಯಾಂಡ್ ಸ್ಪೋರ್ಟ್ಸ್ ಹಬ್ಬ ಪ್ರತಿವರ್ಷದಂತೆ ಸಾವಿರಾರು ಜನರ ಸಮ್ಮುಖದಲ್ಲಿ, ವಿವಿಧ ಪಂದ್ಯಾಟಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡ ತಂಡಗಳೊಂದಿಗೆ ನಡೆಯಿತು. BCF ಸ್ಪೋರ್ಟ್ಸ್ ಮೀಟ್ 2026 ಸಮಿತಿ ಅಧ್ಯಕ್ಷ ಜನಾಬ್ ಅಸ್ಲಾಂ ಕಾರಾಜೆ, ಉಪಾಧ್ಯಕ್ಷ ಜನಾಬ್ ಅಫೀಕ್ ಹುಸೈನ್, BCF ಲೇಡೀಸ್ ವಿಂಗ್ ಅಧ್ಯಕ್ಷೆ ಮುಮ್ತಾಜ್ ಕಾಪು ಹಾಗೂ ಅವರ ತಂಡದ ಮೇಲ್ವಿಚಾರಣೆಯಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಪಂದ್ಯಾಟಗಳು ಸಂಜೆ 7 ಗಂಟೆಯವರೆಗೆ ನಡೆದವು.

ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಟಗ್ ಆಫ್ ವಾರ್, ಕೊಕೊ, ಓಟ, ಲಗೋರಿ ಸೇರಿದಂತೆ ಹಲವಾರು ಪಂದ್ಯಾಟಗಳು ಚೇತೋಹಾರಿಯಾಗಿದ್ದವು. ಮಹಿಳೆಯರ ಪಾಕ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿದ್ದು, ವೈವಿಧ್ಯಮಯ ರುಚಿಕರ ಭಕ್ಷ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

Gadiyar Group ಕ್ರಿಕೆಟ್ ಟೂರ್ನಮೆಂಟ್ ಗೆ ಪ್ರಾಯೋಜಕತ್ವ ವಹಿಸಿತು. Al Rahiba Building Maintenance ಕಬಡ್ಡಿ ಟೂರ್ನಮೆಂಟ್ ಗೆ ಪ್ರಾಯೋಜಕರಾಗಿದ್ದರು. White Mar General Trading ಪಂದ್ಯ ವಿಜೇತರಿಗೆ ವಾಶಿಂಗ್ ಮೆಷಿನ್, ಏರ್ ಕೂಲರ್ ಸೇರಿದಂತೆ ಹಲವಾರು ಬೆಲೆಬಾಳುವ ಬಹುಮಾನಗಳನ್ನು ನೀಡಿ ಸಹಕರಿಸಿದರು. ‌

ತುಂಬೆ ಆಸ್ಪತ್ರೆ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಸೌಲಭ್ಯ ಒದಗಿಸಲಾಯಿತು. ಭಾಗವಹಿಸಿದವರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 6 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.

ವಿಶೇಷ ಅತಿಥಿಗಳಾಗಿ ತುಂಬೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಮಂದಾ ವೆಂಕಟರಮಣ, ತುಂಬೆ ಗ್ರೂಪ್ ಹಾಸ್ಪಿಟಾಲಿಟಿ ಡೈರೆಕ್ಟರ್ ಫರ್ಹಾದ್ ತುಂಬೆ, ಇಬ್ರಾಹಿಂ ಗಡಿಯಾರ್, ಅಬೂಸಾಲಿಹ್, ಅಬ್ದುಲ್ ರೆಹ್ಮಾನ್, ಸಲೀಂ ಮೂಡಬಿದ್ರಿ, ಹಿದಾಯತ್ ಅಡ್ಡೂರು, ಫತಹುಲ್ಲಾ (ನಫೀಸ್ ಗ್ರೂಪ್), ಮುಸ್ತಾಕ್ ಕದ್ರಿ, ಮೊಹಮ್ಮದ್ ಅಲಿ ಉಚ್ಚಿಲ್, ಇಸ್ಮಾಯಿಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮುಖ್ಯ ಭಾಷಣದಲ್ಲಿ ಪ್ರೊ. ಮಂದಾ ವೆಂಕಟರಮಣ ಅವರು ತುಂಬೆ ಗ್ರೂಪ್ ಹಾಗೂ BCF ನಡುವಿನ ಎರಡು ದಶಕಗಳ ಸಹಭಾಗಿತ್ವವನ್ನು ಶ್ಲಾಘಿಸಿದರು.

ಉಸ್ಮಾನ್ ಮೂಳೂರು ಅವರ ಕಿರಾಅತ್‌ನೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. BCF ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮೊಹಮ್ಮದ್ ಸ್ವಾಗತಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ಡಾ. ಬಿ.ಕೆ. ಯೂಸುಫ್ BCF ಹಾಗೂ ತುಂಬೆ ಗ್ರೂಪ್ ನ ಸೇವಾ ಚಟುವಟಿಕೆಗಳನ್ನು ವಿವರಿಸಿದರು. ಪ್ರೊ. ಮಂದಾ ವೆಂಕಟರಮಣ, ಫರ್ಹಾದ್, ಇಬ್ರಾಹಿಂ ಗಡಿಯಾರ್, ಅಬೂಸಾಲಿಹ್ ಹಾಗೂ ಇಕ್ಬಾಲ್ ಸಿದ್ಧಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕದ ಅನಿವಾಸಿ ಕ್ರಿಕೆಟ್ ಪಟು ಫೈಸಲ್ ಕಾಪು ಹಾಗೂ ಕುಸ್ತಿ ಪಟು ನಿಹಾಲ್ ಅಹ್ಮದ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

BCF ಉಪಾಧ್ಯಕ್ಷ ಹಾಗೂ BCF ಇಫ್ತಾರ್ ಮೀಟ್ ಚೇರ್ಮನ್ ಅಬ್ದುಲ್ ಲತೀಫ್ ಮುಲ್ಕಿ ಅವರು ಫೆಬ್ರವರಿ 28ರಂದು ದುಬೈ ಅಬು ಹೈಲ್ ನ ಅಲ್ ಜಾಹಿಯಾ ಸಭಾಂಗಣದಲ್ಲಿ ನಡೆಯಲಿರುವ BCF ಇಫ್ತಾರ್ ಮೀಟ್ 2026 ಕುರಿತು ಮಾಹಿತಿ ನೀಡಿ ಎಲ್ಲರನ್ನು ಆಹ್ವಾನಿಸಿದರು.

ಆಯ್ದ ಗೇಮ್ಸ್ ಸ್ಪರ್ಧೆಗಳು ಮತ್ತು ಫಲಿತಾಂಶಗಳು:

Hot this week

ಖತರ್‌ ಕರ್ನಾಟಕ ಸಂಘದಿಂದ ‘ತಾಯಂದಿರ ದಿನ 2026’ ಆಚರಣೆ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)...

ಮೇ 15ರಂದು ಬಹರೈನ್ ಕನ್ನಡ ಸಂಘದ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ

ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್...

KCWA holds General Body Meeting in Kuwait, announces major cultural event in December

Kuwait City: Kuwait Canara Welfare Association (KCWA) held its...

ನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ ದೇವಾಲಯಕ್ಕೆ ಧನ ಸಹಾಯ

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡಿಗರು, ಇತ್ತೀಚೆಗೆ ಇಲ್ಲಿರುವ ಹಿಂದೂ ದೇವಸ್ಥಾನದಲ್ಲಿ...

ದ್ವೀಪ ರಾಷ್ಟ್ರ ಬಹರೈನ್‌ನಲ್ಲಿ ಸಾರ್ಥಕೆತೆಯನ್ನು ಕಂಡ ಮಂಗಳೂರಿನ ಹೃದಯವಂತ ಅಮರನಾಥ್ ರೈ!

ಬಹರೈನ್‌: ಪ್ರಾಮಾಣಿಕತೆ ಮತ್ತು ದುಡಿಮೆ—ಈ ಎರಡು ಮೌಲ್ಯಗಳು ಒಬ್ಬನ ಬದುಕನ್ನು ಎಷ್ಟು...

Related Articles

Popular Categories