ಖತರ್'ಬಿಲ್ಲವಾಸ್ ಖತರ್'ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ; ಅಧಿಕೃತ...

‘ಬಿಲ್ಲವಾಸ್ ಖತರ್’ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ; ಅಧಿಕೃತ ಲಾಂಛನ ಬಿಡುಗಡೆ

ಖತರ್: ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಖತರ್ ಅವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಖತರ್’ನ ಅಲ್ ಮಿಶಾಫ್’ನಲ್ಲಿರುವ ಕಿಮ್ಸ್ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಇತ್ತೀಚಿಗೆ ಏರ್ಪಡಿಸಲಾಗಿತ್ತು.

ಸುಮಾರು 200ಕ್ಕೂ ಮಿಕ್ಕಿ ಜನರು ಪಾಲುಗೊಂಡಿದ್ದು, ಬಿಲ್ಲವಾಸ್ ಖತರ್ ತನ್ನ ಸಮಾಜ ಸೇವೆಯಲ್ಲಿ ಇನ್ನೊಂದು ಮೈಲಿಗಲ್ಲು ಸೃಷ್ಟಿಸಿತು. ಆರೋಗ್ಯ ತಪಾಸಣೆಯೊಂದಿಗೆ ಉಚಿತ ವೈದ್ಯಕೀಯ ಸಲಹೆಯ ಪ್ರಯೋಜನವನ್ನು ಶಿಬಿರಾರ್ಥಿಗಳು ಪಡೆದರು.

ಬಿಲ್ಲವಾಸ್ ಖತರ್’ನ ಕಾರ್ಯದರ್ಶಿ ಉಮೇಶ್ ಪೂಜಾರಿಯವರು ತಮ್ಮ ಆರಂಭಿಕ ಮಾತುಗಳಿಂದ ಕಾರ್ಯಕ್ರಮಕ್ಕೆ ಚಾಲನೆ ಇತ್ತರು. ಬಿಲ್ಲವಾಸ್ ಖತರ್’ನ ಅಧ್ಯಕ್ಷೆ ಅಪರ್ಣ ಶರತ್ ಅವರು ಎಲ್ಲಾ ಆಹ್ವಾನಿತರನ್ನು ಸ್ವಾಗತಿಸುತ್ತಾ, ಸಮಾಜಸೇವೆ ಮತ್ತು ಸಮಾಜ ಕಲ್ಯಾಣಕ್ಕಾಗಿ ಬಿಲ್ಲವಾಸ್ ಖತರ್ ಸದಾ ಕಟಿಬದ್ಧವಾಗಿದೆ ಮತ್ತು ಅದರೊಂದಿಗೆ ಎಲ್ಲರೂ ಕೈ ಜೋಡಿಸಿ ಸಹಕರಿಸಿತ್ತಿರುವುದು ನಮ್ಮ ಇಚ್ಚಾಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಸಹಬಾಳ್ವೆಯ ಸಂಕೇತವಾಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಭಾರತೀಯ ಸಾಂಸ್ಕ್ರತಿಕ ಕೇಂದ್ರ ( ಐ.ಸಿ. ಸಿ.), ಖತರ್’ನ ಅಧ್ಯಕ್ಷ ಮಣಿಕಂಠನ್ ಎ.ಪಿ. ಮಾತನಾಡಿ, ಬಿಲ್ಲವಾಸ್ ಕತಾರ್ ಇತ್ತೀಚೆಗೆ ಮಹಿಳಾ ದಿನಾಚರಣೆ ಮತ್ತು ಮೀನುಗಾರರೊಂದಿಗೆ ಇಫ್ತಾರ್ ಕೂಟ ಇತ್ಯಾದಿ ಸಮಾಜ ಸೇವೆಯ ಮೂಲಕ ಭಾರತೀಯರೊಂದಿಗೆ ಸಕ್ರಿಯವಾಗಿ ಸ್ಪಂದಿಸುತ್ತಿರುವುದು ತುಂಬಾ ಸಂತೋಷ ಕೊಟ್ಟಿದೆ ಎಂದರು.

ಮನುಷ್ಯನ ಬದುಕಿನಲ್ಲಿ ಆರೋಗ್ಯವೇ ಭಾಗ್ಯ, ಮುನ್ನೆಚ್ಚರಿಕೆಯ ಕ್ರಮ ಮುಂಬರುವ ಅನಾಹುತವನ್ನು ತಪ್ಪಿಸುವಲ್ಲಿ ಅತ್ಯಮೂಲ್ಯ ಮತ್ತು ಇಂತಹ ಆರೋಗ್ಯ ತಪಾಸಣಾ ಶಿಬಿರ ಅದಕ್ಕೊಂದು ದಾರಿದೀಪ ಎಂದು ಹೊಗಳಿದರು. ಖತರ್’ನ ಐ. ಸಿ. ಬಿ. ಎಫ್. ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ ಅವರು ಐಐಸಿಬಿಎಫ್ ಜೀವ ವಿಮೆಯ ಬಗ್ಗೆ ತಿಳಿಸಿದರು.

ಐಸಿಸಿ ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥೆ ನಂದಿನಿ, ಮಿಲನ್ ಅರುಣ್, ಐ.ಸಿ.ಸಿ. ಮಾಜಿ ಅಧ್ಯಕ್ಪ ಸುಬ್ರಹ್ಮಣ್ಯ ಹೆಬ್ಬಾಗಿಲು ಐ.ಸಿ.ಸಿ ಮಾಜಿ ಉಪಾಧ್ಯಕ್ಷ ಹಾಗೂ ಐ.ಎಸ್.ಸಿ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಐ.ಸಿ.ಬಿ.ಎಫ್. ಅಧ್ಯಕ್ಷ ಶಾನವಾಝ್ ಬಾವಾ ಅವರು ಮಾತನಾಡಿ, ಶಿಬಿರದ ಸದುದ್ದೇಶ ತುಂಬಾ ಸಮಾಜಕ್ಕೆ ಸಹಾಯಕಾರಿಯಾದದ್ದು ಎಂದರು. ಐ. ಎಸ್. ಸಿ. ಅಧ್ಯಕ್ಷ ಇ.ಪಿ.ಅಬ್ದುಲ್ ರಹ್ಮಾನ್ ಅವರು ಮಾತನಾಡಿ ವಾಹನದ ಸೂಚ್ಯ ದೀಪದಂತೆ ನಮ್ಮ ದೇಹವು ಕೆಲವೊಂದು ಸಂಕೇತವನ್ನು ಕೊಟ್ಟಾಗ ಅಥವಾ ಮುನ್ನೆಚ್ಚರಿಕೆಯಂತೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ ಮತ್ತು ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿ ಎಂದರು. ಬಿಲ್ಲವಾಸ್ ಖತರ್ ಈ ನಿಟ್ಟಿನಲ್ಲಿ ತುಂಬಾ ಸಕ್ರಿಯವಾಗಿ ಶ್ರಮಿಸುತ್ತಿರುವುದು ನಮ್ಮೆಲ್ಲರ ಗಮನ ಸೆಳೆದಿದೆ ಎಂದರು.

ಕಿಮ್ಸ್ ಮೆಡಿಕಲ್ ಸೆಂಟರ್ ಆಡಳಿತ ಮಂಡಳಿಯ ಪ್ರತಿನಿಧಿಯಾಗಿ ಡಾ. ರಾಹುಲ್ ಮುನಿಕೃಷ್ಣ ಅವರು ಮಾತನಾಡಿ, ಬಿಲ್ಲವಾಸ್ ಖತರ್’ನ ಸಹಯೋಗ ನಮಗೆ ಸದವಕಾಶವನ್ನು ಕೊಟ್ಟಿದ್ದು ನಾವು ಸದಾ ಆರೋಗ್ಯವನ್ನು ಕಾಪಾಡುವಲ್ಲಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಚಿದಾನಂದ ನಾಯ್ಕ್, ಖತರ್ ಕರ್ನಾಟಕ ಸಂಘ ಎಂ.ರವಿ ಶೆಟ್ಟಿ, ತುಳುಕೂಟ ಖತರ್ ಅಧ್ಯಕ್ಷ ಸಂದೇಶ್ ಆನಂದ್, ಬಂಟ್ಸ್ ಖತರ್ ಅಧ್ಯಕ್ಷ ನವೀನ್ ಶೆಟ್ಟಿ, ಎಸ್.ಕೆ.ಎಮ್.ಡಬ್ಲ್ಯೂ ಅಧ್ಯಕ್ಷ ಇಮ್ರಾನ್ ಅಹ್ಮದ್ ಬಾವ, ಬಿಲ್ಲವಾಸ್ ಖತರ್ ಸಲಹಾಧ್ಯಕ್ಷ ರಘುನಾಥ್ ಅಂಚನ್, ಬಿಲ್ಲವಾಸ್ ಖತರ್ ಮಾಜಿ ಅಧ್ಯಕ್ಷ ಸಂದೀಪ್ ಸಾಲಿಯಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಿಲ್ಲವಾಸ್ ಖತರ್’ನ ಹೊಸ ಅಧಿಕೃತ ಲಾಂಛನ (ಲೋಗೋ)ವನ್ನು ಇದೇ ಸಂದರ್ಭದಲ್ಲಿ ಐ.ಸಿ. ಸಿ. ಖತರ್’ನ ಅಧ್ಯಕ್ಷ ಮಣಿಕಂಠನ್ ಅವರು ಬಿಡುಗಡೆಗೊಳಿಸಿದರು. ಈ ಲಾಂಛನ ಬಿಲ್ಲವಾಸ್ ಖತರ್’ನ ನವದೃಷ್ಟಿ ಮತ್ತು ಅಸ್ತಿತ್ವವನ್ನು ಬಿಂಬಿಸುವ ಸಂಕೇತವಾಗಿದೆ.

ಬಿಲ್ಲವಾಸ್ ಖತರ್’ನ ಅರಳು ಪ್ರತಿಭೆ ಕುಮಾರಿ ಭೂಮಿಕಾ ರಘುನಾಥ್ ಅಂಚನ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು. ಸಂಘದ ಉಪಾಧ್ಯಕ್ಷ ಜಯರಾಮ ಸುವರ್ಣ ಅವರು ಬಿಲ್ಲವಾಸ್ ಖತರ್, ಕಿಮ್ಸ್ ಹೆಲ್ತ್ ಮೆಡಿಕಲ್ ಸೆಂಟರ್ ಮತ್ತು ಭಾಗವಹಿಸಿದ ಎಲ್ಲಾ ಮಹನೀಯರಿಗೆ ಧನ್ಯವಾದವನ್ನು ಅರ್ಪಿಸಿದರು.

Hot this week

Kuwait: KCWA’s annual family picnic draws over 600 attendees at Mishref Garden

Kuwait: The Kuwait Canara Welfare Association (KCWA) organised its...

ಖತರ್‌ನಲ್ಲಿ ಕರಾವಳಿ ಕನ್ನಡಿಗನ ಸಾಧನೆ; ಅಂಡರ್ 19 ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಎಸ್ಸಾಮ್ ಮನ್ಸೂರ್ ಆಯ್ಕೆ

ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ...

ಖತರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ – ರಜತ ಸಂಭ್ರಮ ಸಮಾರೋಪ: ಗಲ್ಫ್ ನಾಡಿನಲ್ಲಿ ಗಂಧದ ನಾಡಿನ ವೈಭವ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ)ನ ಕರ್ನಾಟಕ ರಾಜ್ಯೋತ್ಸವ – ರಜತ...

ದುಬೈ: ಕನ್ನಡಿಗರ ಕೂಟದಿಂದ ʼಕನ್ನಡ ರಾಜ್ಯೋತ್ಸವ 2025ʼ ಭವ್ಯ ಸಂಭ್ರಮ

ದುಬೈ: ಕನ್ನಡಿಗರ ಕೂಟ – ದುಬೈ ಮತ್ತು ಗಲ್ಫ್ ಕನ್ನಡ ಮೂವೀಸ್...

Related Articles

Popular Categories